ಮೂಲತಃ ಕನ್ನಡದವರಾದರೂ ಕೋಟ್ಯಾಂತರ ತಮಿಳರ ಹೃದಯಗಳಲ್ಲಿ ನೆಲೆಸಿರುವ ಪ್ರೀತಿಯ ‘ಅಮ್ಮ’ ಇನ್ನಿಲ್ಲ

0
739

ತಮಿಳುನಾಡಿನ ಜನರ ಪಾಲಿಗೆ ‘ಅಮ್ಮ’ ಎಂದೇ ಖ್ಯಾತರಾಗಿದ್ದ ಮುಖ್ಯಮಂತ್ರಿ ಜೆ. ಜಯಲಲಿತಾ (೬೮) ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ರಾತ್ರಿ ವಿಧಿವಶರಾಗಿದ್ದಾರೆ.

ಮೂಲತಃ ಕರ್ನಾಟಕದವರಾದ ಜಯಲಲಿತಾ ಅವರು ಮೈಸೂರಿನ ಚನ್ನಂಬಿಕಾ ಆಸ್ಪತ್ರೆಯಲ್ಲಿ ಜನಿಸಿದ್ದು, ಚಲನಚಿತ್ರ ನಟಿಯಾಗಿ ವೃತ್ತಿ ಜೀವನ ಆರಂಭಿಸಿದ್ದ ಜಯಲಲಿತಾ ತಮಿಳುನಾಡಿನ ಮುಖ್ಯಮಂತ್ರಿಯಾಗಿ ರಾಜಕೀಯ ಜೀವನದಲ್ಲಿ ಉತ್ತುಂಗಕ್ಕೇರಿದ್ದರು.

ಸೆಪ್ಟೆಂಬರ್ ೨೨ ರಂದು ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಹಾಗೂ ತಮಿಳರ ಪಾಲಿನ ಪ್ರೀತಿಯ ‘ಅಮ್ಮ’ ಜಯರಾಮನ್ ಜಯಲಲಿತಾ ಅವರಿಗೆ ಭಾನುವಾರ ಸಂಜೆ ಹೃದಯಾಘಾತವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ 11.30ಕ್ಕೆ ವಿಧಿವಶರಾಗಿದ್ದಾರೆ. ಕೃತಕ ಉಸಿರಾಟದಲ್ಲಿದ್ದ ಜಯಲಲಿತಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಅಪೋಲೊ ಆಸ್ಪತ್ರೆ ವೈದ್ಯರು ಸೋಮವಾರ ರಾತ್ರಿ ಪ್ರಕಟಿಸಿದರು.

ಜಯಲಲಿತಾ ಅವರ ಪಾರ್ಥಿವ ಶರಿರವನ್ನು ಪೋಯಸ್ ಗಾರ್ಡನ್ ನಲ್ಲಿರು ಮನೆಗೆ ಕರೆದೊಯ್ಯಲಾಗಿದ್ದು, ಮಂಗಳವಾರ ಸಾರ್ವಜನಿಕ ದರ್ಶನಕ್ಕೆ ಇಡುವ ಸಾಧ್ಯತೆಗಲಿವೆ.

ಇದೇ ವೇಳೆ ರಾತ್ರಿ ನಡೆದ ಎಐಎಡಿಎಂಕೆ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಜಯಲಲಿತಾ ಅವ ಆಪ್ತ ಪನ್ವೀರ್ ಸೆಲ್ವಂ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ನೇಮಕ ಮಾಡಲಾಗಿದೆ ಎಂದು ಘೋಷಿಶಾಲಾಗಿದೆ . ಇದೇ ವೇಳೆ ಶಾಲಾ- ಕಾಲೇಜುಗಳಿಗೆ ಮೂರು ದಿನ ರಜೆ ಘೋಷಿಸಲಾಗಿದ್ದು, ಶೋಕಾಚರಣೆ ಪ್ರಕಟಿಸಲಾಗಿದೆ. .