ಕೊನೆಗೂ ಜಯಲಲಿತಾ ಮಗಳು ಯಾರೆಂದು ಬಯಲಾಯಿತು ಜಯಲಿಲತಾಗೆ ಜನಿಸಿದ ಮಗಳು ಪ್ರತ್ಯಕ್ಷ..!

0
2148

ಹೌದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಯಾವುದೇ ಮದುವೆಯಾಗಿರಲಿಲ್ಲ ಮತ್ತು ಅವರು ಕುಮಾರಿಯಾಗಿದ್ದರು ಅನ್ನೋದು ಸುಳ್ಳು ಅನ್ನೋ ಸುದ್ದಿ ಈಗ ಬಯಲಾಗಿದೆ. ಜಯಲಲಿತಾಗೆ ಒಬ್ಬ ಮಗಳು ಇದ್ದಾಳೆ ಎನ್ನುವುದು ಈಗ ಬಹಿರಂಗವಾಗಿದೆ.

ಸಹೋದರಿಯ ಪುತ್ರಿಯಾಗಿ ಬೆಳೆದಿದ್ದ ಅಮೃತಾ ಇದೀಗ ಜಯಲಲಿತಾರ ಮಗಳೆಂದು ಹೇಳಿಕೊಳ್ಳುತ್ತಿದ್ದಾರೆ. ಅಮೃತ ಅಲಿಯಾಸ್ ಮಂಜುಳ ಅಲಿಯಾಸ್ ಅಮ್ಮು ನಾನೇ ಜಯಲಲಿತಾರ ಮಗಳು ಎಂದು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಯಿಂದ ಹಿಡಿದು, ಸುಪ್ರೀಂಕೋರ್ಟ್, ಪ್ರಧಾನಿ, ಮಾನವಹಕ್ಕುಗಳ ಆಯೋಗ ಹೀಗೆ ನಾನಾ ಕಡೆ ಅಮೃತ ಮನವಿ ಪತ್ರ ಸಲ್ಲಿಸಿದ್ದಾರೆ.

ಜಯಲಲಿತಾ ಸಹೋದರಿ ಶೈಲಜಾ ಮಗಳು ಎಂದು ಬೆಳೆದಿದ್ದ ಮಗಳೇ ಅಮೃತ ಈ ಅಮೃತಾನೆ ಜಯಲಲಿತಾ ಮಗಳು ಎಂದು ತಾವೇ ಹೇಳಿಕೊಂಡಿದ್ದಾರೆ.

ಅಮೃತ ಹೇಳುವ ಪ್ರಕಾರ ನಮ್ಮ ತಂದೆ ಶೋಭನ್ ಬಾಬು ಎಂದು ಹೇಳಿಕೊಳುತಿದ್ದರೆ. ತೆಲಗು ನಟ ಶೋಭನ್ ಬಾಬು ಎಂಬ ಸತ್ಯವನ್ನು ಹೊರಹಾಕಿದ್ದಾರೆ. ಜಯಲಲಿತಾ ಅವರು ತೀರ ಸಂಕಷ್ಟದಲ್ಲಿದ್ದಾಗ ಶೋಭನ್ ಬಾಬು ಸಾಂತ್ವನ ಹೇಳಲು ಬಂದಿದ್ದರು. ಮುಂದೆ ಸಾಂತ್ವನ, ಗೆಳತನಕ್ಕೆ ತಿರುಗುತ್ತದೆ. ಗೆಳತನ ಪ್ರೀತಿ-ಪ್ರೇಮಕ್ಕೆ ಬದಲಾಗಿದೆ. ಆ ಇಬ್ಬರ ಪ್ರೀತಿಯ ಕುಡಿಯಾಗಿ ಹುಟ್ಟಿದವಳು ನಾನು ಎಂಬುವುದು ಅಮೃತರ ವಾದವಾಗಿದೆ.

ಶೋಭನ್ ಬಾಬು ಅವರ ಮೊದಲ ಪತ್ನಿಯಿಂದಾಗಿ ಜಯಲಲಿತಾರ ಮದುವೆಗೆ ತೀವ್ರ ಅಡ್ಡಿಯುಂಟಾಗಿತ್ತು. ನಾನ ಕಾರಣಗಳಿಂದ ಕೊನೆ ಕ್ಷಣದಲ್ಲಿ ಇಬ್ಬರ ಮದುವೆ ಮುರಿದು ಬಿದ್ದಿತ್ತು. ಆ ಹೊತ್ತಿಗೆ ಜಯಲಲಿತಾರ ಗರ್ಭದಲ್ಲಿ ಅಮೃತ ಇದ್ದರು. ಕೊನೆಗೆ ಚನ್ನೈನ ಮೈಲಾಪುರದಲ್ಲಿ ಅಮೃತಾರ ಜನನವಾಗಿದೆ.

ಇನ್ನು ವಿಚಾರಕ್ಕೆ ಜಯಲಲಿತಾರ ಸಂಬಂಧಿ ರಜಿನಿ ರವೀಂದ್ರನಾಥ್ ಮತ್ತು ಎಲ್.ಎಸ್.ಲಲಿತಾರನ್ನು ಕರೆಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ ಇವರಿಬ್ಬರೇ ಈ ವಿಚಾರಕ್ಕೆ ಸಾಕ್ಷಿ ಎಂದು ಹೇಳುತ್ತಾರೆ. ಆ ಇಬ್ಬರು ನನ್ನ ಜನನದ ಕಾರ್ಯವನ್ನು ನೋಡಿಕೊಂಡಿದ್ದಾರೆ. ಅವತ್ತು ಎಲ್ಲರೂ ಸೇರಿ ದೇವರ ಮುಂದೆ ಪ್ರಮಾಣ ಮಾಡಿದ್ದ ಕಾರಣಕ್ಕೆ ಗುಟ್ಟು ರಟ್ಟಾಗಿಲ್ಲ. ನಾನು ಹತ್ತಾರು ಬಾರಿ ಜಯಾಲಲಿತಾರ ಪೋಯಸ್ ಗಾರ್ಡನ್ ಭೇಟಿ ಮಾಡಿದ್ದೇನೆ.

ಜಯಲಲಿತಾ ಅಮ್ಮ ನನ್ನನು ತುಂಬ ಪ್ರೀತಿಯಿಂದ ನೋಡಿಕೊಂಡಿದ್ದರು. ನನ್ನ ಹೆಸರಿನಲ್ಲಿ ಜಯಲಿಲಿತಾ ಚಿನ್ನ ಮತ್ತು ಡೈಮಂಡ್ ಆಭರಣಗಳನ್ನು ಖರೀದಿ ಮಾಡಿದ್ದಾರೆ. ಹಲವು ಕಡೆ ಆಸ್ತಿಗಳನ್ನು ನನಗೆ ಖರೀದಿ ಮಾಡಿರೋ ಬಗ್ಗೆ ನನ್ನ ಬಳಿ ಅಮ್ಮ ಹೇಳಿದ್ದಾರೆ ಎಂದು ಅಮೃತ ತಿಳಿಸಿದ್ದಾರೆ.