ಜಯಲಲಿತಾ ನಿಧನದಿಂದ ಕರ್ನಾಟಕ ರಾಜ್ಯಕ್ಕೆ ೧೦೦ ಕೋಟಿ ನಷ್ಟ!!

0
760

ತೀರ್ಪು ಪರಾಮರ್ಶೆಗೆ ರಾಜ್ಯದ ಅರ್ಜಿ

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ರಾಜ್ಯದ ವಿಚಾರಣಾ ನ್ಯಾಯಾಲಯವು ದಿ ಜಯಲಲಿತಾ ಅವರುದೋಷಿ ಎಂದು ಪರಿಗಣಿಸಿ, ೪ ವರ್ಷ ಜೈಲು ಶಿಕ್ಷೆ ಮತ್ತು ೧೦೦ ಕೋಟಿ ರೂ. ದಂಡ ವಿಧಿಸಿತ್ತು.ಸುಪ್ರೀಂಕೋರ್ಟ್ ಫೆ. ೧೪ ರಂದು ಪ್ರಕರಣದ ವಿಚಾರಣೆ ನಡೆಸಿ, ವಿಚಾರಣಾ ನ್ಯಾಯಾಲಯದತೀರ್ಪನ್ನು ಎತ್ತಿ ಹಿಡಿದಿತ್ತು. ಆದರೆ ಜಯಲಲಿತಾ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅವರುವಿರುದ್ಧದ ಕಾನೂನು ಕಲಾಪಗಳನ್ನು ಕೈಬಿಟ್ಟಿತ್ತು. ಇದು ಈಗ ಕರ್ನಾಟಕದ ಚಿಂತೆಯನ್ನುಹೆಚ್ಚಿಸಿದೆ.

ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಲಲಿತಾ ಅವರು ನಿಧನವಾಗಿರುವ ಹಿನ್ನೆಲೆಯಲ್ಲಿ,ಕೆಳ ಹಂತದ ನ್ಯಾಯಾಲಯವು ಜಯ ಅವರ ಮೇಲೆ ವಿಧಿಸಿದ್ದ ೧೦೦ ಕೋಟಿ ರು.ಗಳನ್ನು ಹೇಗೆವಸೂಲಿ ಮಾಡಬೇಕು ಎಂಬುದು ತಲೆನೋವಾಗಿದೆ. ಇನ್ನು ಜಯಲಲಿತಾ ಅವರುತಿರಿಕೊಂಡಿದ್ದರಿಂದ ರಾಜ್ಯಕ್ಕೆ  ೧೦೦ ಕೋಟಿ ಸಿಗುವಾದದರೂ ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.ಇದಕ್ಕೆ ಸಂಬಂಧ ಪಟ್ಟಂತೆ ಕರ್ನಾಟಕ ಸರ್ಕಾರ, ಸುಪ್ರೀಂ ಕೋರ್ಟ್‌ನಲ್ಲಿ ಮರು ಪರಿಶೀಲನಾಅರ್ಜಿಯನ್ನು ಸಲ್ಲಿಸಿದೆ.

ನಿಧನರಾಗಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧದ ಕಾನೂನು ಕಲಾಪಗಳನ್ನು ಕೈಬಿಡಲಾಗಿತ್ತು. ಸುಪ್ರೀಂಕೋರ್ಟ್  ತೀರ್ಪು  ಕಾಯ್ದಿರಿಸಿದ ಬಳಿಕ ಜಯಲಲಿತಾ ನಿಧನರಾಗಿದ್ದಾರೆ. ಹೀಗಾಗಿಪ್ರಕರಣದಲ್ಲಿ ಅವರ ಹೆಸರು ಕೈಬಿಟ್ಟಿರುವುದು ಸರಿಯಲ್ಲವೆಂದು ರಾಜ್ಯ ಸರ್ಕಾರದ ವಾದವಾಗಿದೆ.

ಜಯಾ ಮುಖ್ಯ ಆರೋಪಿಯಾಗಿದ್ದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆಸರ್ವೋಚ್ಛ ನ್ಯಾಯಾಲಯವು ಫೆ.೧೪ರಂದು ನೀಡಿದ್ದ ತೀರ್ಪಿನಲ್ಲಿ ಜಯಲಲಿತಾ ಅವರ ಸ್ನೇಹಿತೆ ವಿ.ಕೆ.ಶಶಿಕಲಾ ಮತ್ತು ಇನ್ನಿಬ್ಬರು ಸಹ ಆರೋಪಿಗಳನ್ನು ದೋಷಿಗಳೆಂದು ಆದೇಶ ನೀಡಿತ್ತು.