ನೆರೆ ಸಂತ್ರಸ್ತರಿಗೆ ಬೇಕಾಬಿಟ್ಟಿ ಹಣ ಕೊಡಲು ನೋಟ್​ ಪ್ರಿಂಟ್​ ಮಾಡಲ್ಲ ಎಂದ ಯಡಿಯೂರಪ್ಪ; ಹಾಗಾದ್ರೆ ಸಂತ್ರಸ್ತರಿಗೆ ಪರಿಹಾರ ಸಿಗುವುದು ನಿಜವಾ??

0
314

ರಾಜ್ಯದಲ್ಲಿ ಸಂಭವಿಸಿದ ಪ್ರವಾಹದಿಂದ ಸಾವಿರಾರು ಜನರ ಜೀವನ ನೀರಿನಲ್ಲಿ ಮುಳುಗಿದೆ. ಬೆಳೆದ ಬೆಳೆಯಲ್ಲ ಕೊಚ್ಚಿಹೋಗಿ ವಾಸಿಸುವ ಮನೆ ಕೂಡ ನೀರಲ್ಲಿ ನಿಂತಿವೆ. ಇದರಿಂದ ಸರ್ಕಾರ ರೈತರಿಗೆ ಮತ್ತು ಪ್ರವಾಹದಿಂದ ನಷ್ಟ ಅನುಭವಿಸಿದ ಜನರಿಗೆ ಪರಿಹಾರ ನೀಡುತ್ತೆ ಎನ್ನುವ ಭರವಸೆಯಲ್ಲಿದ್ದರು. ಸರ್ಕಾರಕ್ಕೆ ಕೈ ಮಾಡಿ ಸಹಾಯ ಕೇಳಿದರು ಆದರೆ ಮುಖ್ಯಮಂತ್ರಿಗಳ ನಡೆ ಯಾಕೋ ಸಂತ್ರಸ್ತರಿಗೆ ಬೇಸರ ತಂದಿದೆ. ಮೊದಲೇ ಗಾಯಗೊಂಡಿದ್ದ ಜನರಿಗೆ ಮತ್ತೆ ಬರೆ ಎಳೆದಿದ್ದಾರೆ. ಎನ್ನುವ ಮಾತುಗಳು ಕೇಳಿಬರುತ್ತಿವೆ. ನೆರೆ ಸಂಬಂಧ ಬೇಕಾಬಿಟ್ಟಿ ಹಣ ಕೊಡಲು ನೋಟ್​ ಪ್ರಿಂಟ್​ ಮಾಡಲ್ಲ ಎಂಬ ಸಿಎಂ ಹೇಳಿಕೆಗೆ ರೈತರು ಸುಳ್ಳು ಹೇಳಿ ಪರಿಹಾರ ಪಡೆಯುತ್ತಾರೆ ಎನ್ನುವ ರೀತಿಯಲ್ಲಿದೆ.

ಹೌದು ರಾಜ್ಯದ 17 ಜಿಲ್ಲೆಗಳಲ್ಲಿ ಪ್ರವಾಹ ಸೃಷ್ಟಿಸಿದ ಅವಾಂತರಕ್ಕೆ ಪರಿಹಾರ ಸಿಕ್ಕಿಲ್ಲ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರು ಸಂಕಷ್ಟದಲ್ಲಿದ್ದಾರೆ. ಈ ವೇಳೆ ಅಧಿಕಾರಗಳ ಜೊತೆ ನೆರೆ ವಿಚಾರವಾಗಿ ಸಭೆ ನಡೆಸುವಾಗ ಸಿಎಂ ವಿವಾದ ಎಬ್ಬಿಸುವ ಹೇಳಿಕೆ ಕೊಟ್ಟಿದ್ದಾರೆ. ಶಿವಮೊಗ್ಗದಲ್ಲಿ ಪ್ರವಾಹ ಪರಿಶೀಲನೆ ಬಳಿಕ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಬಿಎಸ್​ ಯಡಿಯೂರಪ್ಪ, ಬೆಳೆ ಹಾನಿ ಕುರಿತು ಕೂಲಂಕುಷ ಅಧ್ಯಯನ ನಡೆಸಿ. ಅವಸರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುವುದು ಬೇಡ. 8-10ದಿನ ಆದರೂ ಪರವಾಗಿಲ್ಲ. ಕೇಳಿದಷ್ಟು ಹಣ ನೀಡಲು ನೋಟ್​ ಪ್ರಿಂಟ್​ ಮಾಡುವ ಯಂತ್ರ ವಿಲ್ಲ ಎಂಬ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಈಗ ನೀರಲ್ಲಿ ನಿಂತ ಬೆಲೆ ಮನೆಗಳು ಸ್ವಲ್ಪ ದಿನದಲ್ಲಿ ಸರಿಯಾಗುತ್ತೇವೆ ಅವುಗಳನ್ನು ಲೇಖಕ್ಕೆ ಸೇರಿಸುವುದು ಬೇಡ. ಆದರಿಂದ ಎಷ್ಟು ನಷ್ಟವಾಗಿದೆ ಎನ್ನುವ ಅಂಕಿ ಅಂಶವನ್ನು ಎಚ್ಚರಿಕೆಯಿಂದ ಕೊಡಿ. ಬೆಳೆ ಹಾನಿಯನ್ನು ನಿಖರವಾಗಿ ಅಂದಾಜು ಮಾಡಿ ನೀಡಿ. ಸುಖಾಸುಮ್ಮನೆ ಬೆಳೆ ಹಾನಿ ಕುರಿತು ವರದಿ ನೀಡಬೇಡಿ ಎನ್ನುವುದ ಅವರ ಮಾತಿನ ಒಳಅರ್ಥವಾಗಿದೆ. ಅದರಂತೆ ಈಗಾಗಲೇ ರಾಜ್ಯದ ಜನತೆ ಪ್ರವಾಹಕ್ಕೆ ತತ್ತರಿಸಿ ಹೋಗಿದ್ದಾರೆ. ತಾವು ಕಷ್ಟಪಟ್ಟು ಮಾಡಿದ್ದ ಆಸ್ತಿಪಾಸ್ತಿ, ಮನೆಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಈ ವೇಳೆ ಸಿಎಂ ಪರಿಹಾರ ನೀಡಲು ಈ ರೀತಿ ಹೇಳಿಕೆ ಕೊಟ್ಟಿರುವುದು ಸಂತ್ರಸ್ತರ ಸಿಟ್ಟಿಗೆ ಕಾರಣವಾಗಿದೆ.

ಎಂದೂ ರೈತರ ಪರವಾಗಿರುವ ಮಾತನ್ನು ಹೇಳಿದ ಮುಖ್ಯಮಂತ್ರಿ ಯಡಿಯೂರಪ್ಪ ಪರಿಹಾರ ನೀಡುವಲ್ಲಿ ರೈತರ ಮೇಲೆ ನೆರೆ ಸಂತ್ರಸ್ತರ ಮೇಲೆ ಅನುಮಾನ ಮಾಡಿ ಪರಿಹಾರ ನೀಡಲು ಲೆಕ್ಕಹಾಕುತ್ತಿದ್ದಾರೆ. ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿ ವಿರೋಧ ವ್ಯಕ್ತಪಡಿಸಿದ ವಿಪಕ್ಷ ಕಾಂಗ್ರೆಸ್ ಏಕಾಧಿಪತ್ಯದ ಆಡಳಿತ ನಡೆಸುತ್ತಿರುವ ಬಿಎಸ್​ ಯಡಿಯೂರಪ್ಪ ಸರ್ವಾಧಿಕಾರಿಯಂತೆ ವರ್ತಿಸುವುದು ಸರಿಯಲ್ಲ. ಸಂತ್ರಸ್ತರಿಗೆ ನೀಡುವ ನೆರೆ ಪರಿಹಾರ ಜನರ ತೆರಿಗೆ ಹಣ ಹೊರತು. ನಿಮ್ಮ ಸ್ವಂತ ದುಡ್ಡಲ್ಲ ಎಂದು ಟೀಕಿಸಿದ್ದಾರೆ.

ಅದರಂತೆ ಟ್ವೀಟ್​​ ಮೂಲಕ ಸಿಎಂ ಮಾತಿಗೆ ಖಾರವಾಗಿ ಪ್ರತಿಕ್ರಿಯಿಸಿರುವ ಜೆಡಿಎಸ್​, ಸರ್ಕಾರಕ್ಕೆ ನೆರೆ ಸಂತ್ರಸ್ತರಿಗೆ ನೆರವು ನೀಡಲು ಹಣ ವಿರುವುದಿಲ್ಲ. ಆದರೆ, ಅನರ್ಹ ಶಾಸಕರನ್ನು ಸೆಳೆದು ಅವರಿಗೆ ಐಷಾರಾಮಿ ಕಲ್ಪಿಸಿದರು. ಅವರಿಗಾಗಿ ವಿಶೇಷ ವಿಮಾನ ಹಾಗೂ ವಾರಗಟ್ಟಲೆ ಸ್ಟಾರ್​ ಹೋಟೆಲ್​ನಲ್ಲಿ ವಾಸ್ತವ್ಯ ಕಲ್ಪಿಸಲು ಅಷ್ಟೊಂದು ಹಣ ಎಲ್ಲಿತ್ತು ಎಂದು ಪ್ರಶ್ನಿಸಿದ್ದಾರೆ. 2009ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಕೂಡ ಯಡಿಯೂರಪ್ಪ ಇದೇ ರೀತಿ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು. ಸಾಲಮನ್ನಾ ಕುರಿತು ಬೇಡಿಕೆ ಹೆಚ್ಚಾದಾಗ ನಾವಿಲ್ಲಿ ನೋಟ್​ ಪ್ರಿಂಟ್​ ಮಾಡುತ್ತಿಲ್ಲ ಎಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದರು ಈಗ ಮತ್ತೆ ಇದೆ ತರಹದ ಮಾತನ್ನಾಡಿದ ಯಡಿಯೂರಪ್ಪ ಭಾರಿ ವಿರೋಧಕ್ಕೆ ಗುರಿಯಾಗಿದ್ದಾರೆ.