ಕಿಡ್ನಾಪ್ ಕೇಸ್ ಒಂದರಲ್ಲಿ ಸಿಕ್ಕಿ ಬಿದ್ದು ಜೆ.ಡಿ.ಎಸ್. ಪಕ್ಷಕ್ಕೆ ಭಾರಿ ಮುಜುಗರ ಪಡಿಸಿದ ಈ ಜೆ.ಡಿ.ಎಸ್. ಪಕ್ಷದವರ ಬಗ್ಗೆ ಓದಲೇಬೇಕು..

0
479

ಕೋಟ್ಯಾಧಿಪತಿಗಳೇ ಸೇರಿ ಮತ್ತೊಬ್ಬ ಕೋಟ್ಯಾದಿಪತಿಯ ಅಪಹರಣ ಮಾಡಿರುವ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಿಡ್ನಾಪ್ ಮಾಡಿದ ಆರೋಪಿಗಳೀಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.

ಕನ್ನಡ ಸಿನಿಮಾಗಳಿಗೆ ಹಣ ಹೂಡುವ ಮಲ್ಲಿಕಾರ್ಜುನ್ ಅಲಿಯಾಸ್ ಮಲ್ಲಣ್ಣನನ್ನು ಜೆಡಿಎಸ್ ಮಾಜಿ ಅಧ್ಯಕ್ಷೆ ಆರ್ಷಿಯಾ, ಈಕೆಯ ಪ್ರಿಯಕರ ರೇಣುಕಾ ಪ್ರಸಾದ್ ಮತ್ತು ಕಾಂತರಾಜ್, ಪ್ರದೀಪ್ ಜನವರಿ 11 ರಂದು ಯಲಹಂಕದಿಂದ ಕಿಡ್ನಾಪ್ ಮಾಡಿದ್ದರು. ಆರೋಪಿಗಳು ಸಹ ಕೋಟಿಧಿಪತಿಗಳೇ ಅನ್ನೋದು ವಿಶೇಷ.

ಕಾಂತರಾಜ್ ಅಣ್ಣ ಲಕ್ಷ್ಮೀಪತಿ, ಮಲ್ಲಣ್ಣನಿಂದ 30 ಲಕ್ಷ ಹಣ ಪಡೆದಿದ್ದು, ಬಡ್ಡಿಯನ್ನು ಸಹ ಹಿಂದಿರುಗಿಸಿರಲಿಲ್ಲ. ಇದರಿಂದ ಸಿಟ್ಟುಗೊಂಡ ಮಲ್ಲಣ್ಣ ಲಕ್ಷ್ಮೀಪತಿಗೆ ಬೈದಿದ್ದಾರೆ. ಈ ಹಿನ್ನೆಲೆಯಲ್ಲಿ ಈತ ಎಲ್ಲರಿಗೂ ಹಣ ಕೊಡ್ತಾನೆ ನಮಗೆ ಕೊಡಲ್ಲ. ಈತನಿಗೆ ಸರಿಯಾದ ಬುದ್ಧಿ ಕಲಿಸಬೇಕು ಅಂತ ಆರೋಪಿಗಳು ಕಿಡ್ನಾಪ್ ಮಾಡಿ, 80 ಲಕ್ಷ ಹಣ ಪೀಕಿದ್ದಾರೆ.

ಅಲ್ಲದೇ ಮಲ್ಲಣ್ಣ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ಆರ್ಷಿಯಾ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾಳೆ. ತನ್ನ ಕಾರ್‍ನ ಮುಂದೆ ಭಾರತ ಸರ್ಕಾರ ಅಂತಾ ಬೋರ್ಡ್ ಹಾಕಿಕೊಳ್ಳುವ ಮೂಲಕ ಪೊಲೀಸರನ್ನೇ ಯಾಮಾರಿಸಿದ್ದಾಳೆ. ಚಿಕ್ಕಬಳ್ಳಾಪುರದ ಬಳಿ ಪೊಲೀಸರು ಕಾರು ತಪಾಸಣೆ ಮಾಡೋದನ್ನು ನೋಡಿದ ಆರೋಪಿ ಪ್ರದೀಪ್ ಕಾರ್ ನಿಂದ ಇಳಿದು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ವೇಳೆ ಪೊಲೀಸರು ಯಾರವರು ಇಳಿದು ಹೋದ್ರಲ್ಲ ಅಂದಿದ್ದಕ್ಕೆ, ಡ್ರಾಪ್ ಕೇಳಿ ಇಲ್ಲಿ ಇಳಿದು ಹೋದ್ರು ಅಂತ ಆರ್ಷಿಯಾ ಹೇಳಿದ್ದಾಳೆ.

ಇನ್ನು ಆರ್ಷಿಯಾ 20 ಕೋಟಿಯ ಒಡತಿಯಾಗಿದ್ದರೆ, ಆರೋಪಿ ಆರ್ಷಿಯಾ ಪ್ರಿಯಕರ ರೇಣುಕಾ ಪ್ರಸಾದ್ 300 ಕೋಟಿ ಆಸ್ತಿಯ ಒಡೆಯನಾಗಿದ್ದಾನೆ. ಮತ್ತೊಬ್ಬ ಆರೋಪಿ ಕಾಂತರಾಜ್ ಕೂಡ ನೂರಾರು ಎಕರೆ ಆಸ್ತಿಯ ಒಡೆಯನಾಗಿದ್ದು, ಎಚ್‍ಎಸ್‍ಆರ್ ಲೇಔಟ್ ನಲ್ಲಿ ಕಾಂತರಾಜ್ ಗೆ ಸೇರಿದ ನೂರಾರು ಎಕರೆ ಆಸ್ತಿಯಿದೆ. ಮಲ್ಲಣ್ಣನ ಕೈಯಲ್ಲಿ ಸುಮಾರು 2 ಸಾವಿರ ಕೋಟಿ ಘೋಷಿತ ಆದಾಯವಿದೆ. ಕನ್ನಡ ಚಿತ್ರರಂಗದ ನಿರ್ಮಾಪಕರಿಗೆ ಇವರೇ ಹಣ ಹೂಡಿಕೆ ಮಾಡುತ್ತಿದ್ದರು.

ಇದೀಗ ಆರ್ಷಿಯಾಳನ್ನು ಜೆಡಿಎಸ್ ನಿಂದ ಅಮಾನತು ಮಾಡಲಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಎಲ್ಲಾ ಅಂಶಗಳು ಬೆಳಕಿಗೆ ಬಂದಿವೆ. ಒಟ್ನಲ್ಲಿ ಕೇವಲ 30 ಲಕ್ಷಕ್ಕೆ ಕೋಟ್ಯಾಧಿಪತಿಗಳೆಲ್ಲರೂ ಕಂಬಿ ಎಣಿಸುವ ಪರೀಸ್ಥಿತಿ ಬಂದೊದಗಿದೆ.