ಈ ಪಕ್ಷ ಅಧಿಕಾರಕ್ಕೆ ಬಂದ್ರೆ, BMTC-ಯಲ್ಲಿ ಸಂಪೂರ್ಣ ಉಚಿತವಾಗಿ ಪ್ರಯಾಣ ಮಾಡಬಹುದಂತೆ!! ಇಂತಹ ಆಮಿಷಗಳು ಕೆಲಸ ಮಾಡುತ್ತಾ??

0
556


ಕರ್ನಾಟಕದಲ್ಲಿ ಈಗ ಚುನಾವಣಾ ಕಾವು ಹೆಚ್ಚಾಗುತ್ತಿದೆ. ಎಲ್ಲ ಪಕ್ಷಗಳು ಮತದಾರರನ್ನು ತನ್ನತ್ತ ಸೆಳೆಯಲು ಪ್ಲಾನ್​ ಮಾಡಿಕೊಂಡಿದೆ. ಅಲ್ಲದೆ ಹಲವು ಆಮೀಶ್​ಗಳನ್ನು ಒಡ್ಡಿ ಮತದಾರನ ಮನವಲಿಕೆ ಪ್ರಯತ್ನ ನಡೆಸಿವೆ. ಇಲ್ಲೋಂದು ಪಕ್ಷ ನೀಡಿರುವ ಆಮೀಶವನ್ನು ಕೇಳಿದ್ರೆ ಬೆಂಗಳೂರಿಗರಿಗಂತೂ ಜಾಕ್​ ಪಾಟ್​.. ಹಾಗಿದ್ರೆ ಆ ಸುದ್ದಿ ಯಾವುದು ನೋಡಿ..

ಜೆಡಿಎಸ್​ ರಾಜ್ಯದಲ್ಲಿ ಅಧಿಕಾರಕ್ಕೆ ಬರಲೇ ಬೇಕೆಂದು ಶತಾಯ ಗತಾಯ ಪ್ರಯತ್ನ ನಡೆಸಿದೆ. ಅದ್ರಂತೆ ಹೇಗಾದ್ರೂ ಮಾಡಿ ಈ ಬಾರಿ ಮತದಾರ ಪ್ರಭುವಿನ ಚಿತ್ತ ಕದಿಯಲು ಪ್ಲಾನ್ ಮಾಡಿಕೊಂಡಿದೆ. ಅದ್ರಂತೆ ಎಲ್ಲ ಪಕ್ಷಗಳಿಗೂ ಮುಂಚಿತವಾಗಿಯೇ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಒಂದುವೇಳೆ ಜೆಡಿಎಸ್​ ಅಧಿಕಾರಕ್ಕೆ ಬಂದ್ರೆ, ಬಿಎಂಟಿಸಿ ಬಸ್ಸುಗಳ ಟಿಕೆಟ್​ ದರ ರದ್ದು ಮಾಡಾಲಾಗುತ್ತದೆ. ಅಲ್ಲದೆ ಬಸ್​ನಲ್ಲಿ ಉಚಿತವಾಗಿ ಪ್ರಯಾಣಿಸಲು ವ್ಯವಸ್ಥೆ ಕಲ್ಪಿಸಲಾಗುತ್ತದೆ. ಖಾಸಗಿ ಶಾಲೆಗಳ ಡೊನೇಶನ್‌ ಹಾವಳಿಗೆ ಬ್ರೇಕ್‌ ಹಾಕಲಾಗುವುದು ಎಂದು ಜೆಡಿಎಸ್​ ತಿಳಿಸಿದೆ.

ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಮೆಟ್ರೋಗಾಗಿ ಸಾವಿರಾರು ಕೋಟಿ ವ್ಯಯ ಮಾಡಲಾಗುತ್ತಿದೆ. ಸರ್ಕಾರ ಹಾಕಿಕೊಂಡ ಯೋಜನೆಯಿಂದ ಸಂಚಾರ ದಟ್ಟಣೆ ತಪ್ಪಿಸಲು ಆಗದು. ಬದಲಿಗೆ ಬಿಎಂಟಿಸಿ, ಮೆಟ್ರೋ, ಮೋನೋ ರೈಲು ಎಲ್ಲವೂ ಸದ್ಬಳಕೆಯಾಗಬೇಕು. ಬಸ್​ ಸಂಚಾರವನ್ನು ಜನರಿಗೆ ಉತ್ತೇಜಿಸಲು ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಇನ್ನು ಬಿಎಂಟಿಸಿ ನಗರದಲ್ಲಿ ಹಲವು ಭಾಗಗಳಲ್ಲಿ ಆಸ್ತಿ ಹೊಂದಿದೆ. ಬಿಎಂಟಿಸಿ ಕಟ್ಟಡಗಳನ್ನು ಸೂಕ್ತವಾಗಿ ಬಳಸಿಕೊಂಡು ಬಾಡಿಗೆ ಪಡೆದಲ್ಲಿ ತಿಂಗಳಿಗೆ ಸಾವಿರ ಕೋಟಿಯಷ್ಟ ಆದಯ ಪಡೆಯಬಹುದು ಎಂದು ಜೆಡಿಎಸ್​ ತಿಳಿಸಿದೆ.

ಇನ್ನು ಖಾಸಗಿ ಶಾಲೆಗಳು ಬಿಕ್ಷಾಟನೆಗೆ ಇಳಿದಿವೆ.. ಡೋನೇಷನ್​ ಹೆಸರಿನಲ್ಲಿ ಭೀಕ್ಷೆ ಬೇಡ್ತಾ ಇದ್ದಾರೆ. ನಮ್ಮ ಸರ್ಕಾರ ಕಾರ್ಯರೂಪಕ್ಕೆ ಬಂದ್ರೆ ಡೋನೇಶನ್​ ರಡ್ಡು ಮಾಡಲು ಕ್ರಮಗಳನ್ನು ಕೈಗೊಳ್ಳಲಾಗುವುದು. ಇನ್ನು ಜೆಡಿಎಸ್​ ಕರ್ನಾಟಕ ನಾಡಿನ ರೈತರ ಸಮಸ್ಯೆಯನ್ನು ಮನಗೊಂಡ, ಅವರ ಸಮಸ್ಯೆಗೆ ಸ್ಪಂದಿಸುವ ಕಾರ್ಯವನ್ನು ಮಾಡಲಿದೆ ಎಂದು ಜೆಡಿಎಸ್‌ ಕಾರ್ಯಾಧ್ಯಕ್ಷ ಪಿಜಿಆರ್‌ ಸಿಂಧ್ಯಾ ಹೇಳಿದ್ದಾರೆ.

2018ರ ಚುನಾವಣೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಕಾಣೆಯಾಗಿವೆ. ಪಕ್ಷಗಳು ಬೇರೆ ಪಕ್ಷಗಳ ಮೇಲೆ ಕೆಸರು ಎರಚುತ್ತಾ ಸಾಗುತ್ತಿವೆ. ಈ ಚುನಾವಣೆಯಲ್ಲಿ ಕೋಟಿ ರೂಪಾಯಿಗಳ ಮಾತು ಜೋರಾಗಿದೆ. ಜನರ ಮುಂದೆ ನೀಡುವ ಆಯ್ಕೆಗಳು ಜಾತಿ, ಹಣ ಆಗಿಬಿಟ್ಟಿವೆ ಎಂದ್ರು.
ಅಂಗನವಾಡಿ ಕಾರ್ಯಕರ್ತರನ್ನು ಸರ್ಕಾರಿ ಉದ್ಯೋಗಿಗಳಾಗಿ ಪರಿಗಣಿಸಿ 18 ಸಾವಿರ ಕನಿಷ್ಠ ವೇತನ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.