ಮೈತ್ರಿಯಲ್ಲಿ ಹೊಸ ಬಾಂಬ್ ರಾಜೀನಾಮೆಗೆ ಪ್ರಜ್ವಲ್ ನಿರ್ಧಾರ; ಒಂದು ವೇಳೆ ಮತ್ತೆ ದೇವೇಗೌಡರು ಸ್ಪರ್ಧೆ ಮಾಡಿದರೆ ತುಮಕೂರಿನ ಪರಿಸ್ಥಿತಿ ಹಾಸನದಲ್ಲಿ ಬರುತ್ತಾ?

0
287

ರಾಜ್ಯದ ಮೈತ್ರಿ ಸರ್ಕಾರಕ್ಕೆ ಆದಂತಹ ಸೋಲನ್ನು ಇಡಿ ದೇಶದ ಜನ ಮಾತನಾಡುತ್ತಿದ್ದಾರೆ. ಅದರಲ್ಲಿ ದೇವೇಗೌಡರ ಸೋಲು ಜೆಡಿಎಸ್ ಕುಟುಂಬದಲ್ಲಿ ಬಾರಿ ನೋವು ತಂದಿದ್ದು, ಇವರ ಸೋಲಿಗೆ ಮುಖ್ಯವಾಗಿ ರೇವಣ್ಣನ ಕುಟುಂಬವೇ ಕಾರಣ. ದೇವೇಗೌಡರನ್ನು ಹಾಸನದಿಂದ ತುಮಕೂರಿಗೆ ಕಳುಹಿಸಿದ್ದು ಸೋಲಿಗೆ ಕಾರಣವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಎಲ್ಲ ಬೆಳವಣಿಗಳ ನಡೆವೆ ನಾಟಕೀಯ ರಾಜಕೀಯ ಒಂದು HD ಕುಟುಂಬದಿಂದ ಕೇಳಿ ಬರುತ್ತಿದ್ದು. ನಿನ್ನೆ ತಾನೇ ಗೆಲುವು ಸಾಧಿಸಿರುವ ಪ್ರಜ್ವಲ್ ರಾಜೀನಾಮೆಗೆ ಮುಂದಾಗಿದ್ದಾರೆ.

Also read: ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿ.ಜೆ.ಪಿ.ಗೆ ಭಾರಿ ಜಯ, ಬಿ.ಜೆ.ಪಿ.ಯ ಪ್ರಣಾಳಿಕೆಯಂತೆ ಭಾರತವನ್ನು ಇನ್ನಷ್ಟು ಎತ್ತರಕ್ಕೆ ಹೇಗೆ ತೆಗೆದುಕೊಂಡು ಹೋಗ್ತಾರೆ ಅಂತ ಓದಿ!!

ಹೌದು ಪ್ರಜ್ವಲ್ ಅವರು ತಮಗೆ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ದೇವೇಗೌಡರಿಗಾಗಿ ತಮ್ಮ ಕ್ಷೇತ್ರವನ್ನು ತ್ಯಾಗ ಮಾಡಲು ಮುಂದಾಗಿದ್ದಾರೆ. ತಮ್ಮ ರಾಜೀನಾಮೆ ಕುರಿತಂತೆ ತಂದೆ ಎಚ್.ಡಿ. ರೇವಣ್ಣ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿಲ್ಲ. ಕುಟುಂಬದವರಿಂದ ನನ್ನ ಮೇಲೆ ಯಾವುದೇ ಒತ್ತಡ ಬಂದಿಲ್ಲ. ಯಾರಿಗೂ ಈ ಬಗ್ಗೆ ಕೇಳಿಲ್ಲ. ನನ್ನ ಮನಸಿನಲ್ಲಿರುವ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಕಾಂಗ್ರೆಸ್ ಮತ್ತು ಜೆಡಿಎಸ್ ಹಿರಿಯ ನಾಯಕರೊಂದಿಗೆ ಚರ್ಚಿಸಿ ಎಲ್ಲರೂ ಹೋಗಿ ದೇವೇಗೌಡರ ಮನವೊಲಿಸಲಾಗುವುದು ಎಂದು ಪ್ರಜ್ವಲ್ ತಿಳಿಸಿದ್ದಾರೆ.

ಪ್ರಜ್ವಲ್ ರೇವಣ್ಣ ರಾಜೀನಾಮೆ?

ಸಂಸದರಾಗಿ ಆಯ್ಕೆಯಾದ ಬಳಿಕ ಪ್ರಜ್ವಲ್ ರೇವಣ್ಣ ಮೊದಲ ಸುದ್ದಿಗೋಷ್ಟಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಪ್ರಜ್ವಲ್ ರಾಜೀನಾಮೆ ವಿಚಾರ ಪ್ರಸ್ತಾಪಿಸಿ ದೇವೇಗೌಡರು ಸೋತಿರುವುದಕ್ಕೆ ನನಗೆ ನೋವಾಗಿದೆ. ಹೋರಾಟವೇ ಜೀವನ ಎಂದುಕೊಂಡಿದ್ದ ಗೌಡರಿಗೆ ಸೋಲಾಗಿದೆ. ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಮತ್ತೆ ದೇವೇಗೌಡರಿಗೆ ಶಕ್ತಿ ತುಂಬುವುದು ನನ್ನ ಉದ್ದೇಶ. ಹಾಸನ ಜಿಲ್ಲೆಯ ಜನರು ತಪ್ಪು ತಿಳಿಯಬಾರದು. ನಾನು ರಾತ್ರಿ ಇಡೀ ಚಿಂತಿಸಿ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ರಾಜೀನಾಮೆ ಬಗ್ಗೆ ಯಾರೊಂದಿಗೂ ಚರ್ಚೆ ಮಾಡಿಲ್ಲ ಇದು ನನ್ನ ಮನಸ್ಸಿನ ನಿರ್ಧಾರ.

ಈ ವಿಚಾರವನ್ನು ಇಂದು ಮದ್ಯಾಹ್ನ ಒಂದು ಗಂಟೆಗೆ ದೇವೇಗೌಡರ ಬಳಿಗೆ ಹೋಗಿ ಮನ ಒಲಿಸುವೆ ಎಂದಿರುವ ಪ್ರಜ್ವಲ್​, “ದೇವೇಗೌಡರು ನನಗೆ ಈ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಆದರೆ, ಅವರು ಮತ್ತೆ ಹಾಸನಕ್ಕೆ ಬರಬೇಕು. ಹಾಸನದ ಜನರು ನನಗೆ ಮತ ಹಾಕಿದ್ದಾರೆ. ಅದನ್ನು ನಾನು ಸಂಪೂರ್ಣವಾಗಿ ಗೌರವಿಸುವೆ. ಯಾರೊಬ್ಬರಿಗೂ ಅವಮಾನ ಮಾಡುವ ಉದ್ದೇಶ ನನ್ನದಲ್ಲ. ಹಾಸನ ಜನರ ಪ್ರೀತಿ ವಿಶ್ವಾಸಕ್ಕೆ ನಾನು ಚಿರರುಣಿ,” ಎಂದರು.

ಪ್ರಜ್ವಲ್ ರಾಜೀನಾಮೆ ಕುರಿತು ಪ್ರತಿಪಕ್ಷ ಮಾತು;

ತಾತನ ಸೋಲಿನಿಂದ ಬೇಸರಕ್ಕೆ ಒಳಗಾದ ಪ್ರಜ್ವಲ್ ರೇವಣ್ಣ ರಾಜೀನಾಮೆ ಕೊಡಲು ಮುಂದಾಗಿ ಮತ್ತೆ ದೇವೇಗೌಡರನ್ನು ರಾಜಕೀಯಕ್ಕೆ ನಿಲ್ಲಿಸಬೇಕು ಎನ್ನುವುದು ಅವರ ಅಭಿಪ್ರಾಯವಾದರೆ ಈ ಕ್ಷಣವೆ ರಾಜೀನಾಮೆ ನೀಡಬೇಕು, ಇಲ್ಲ ತಮಗೆ ಬಂದ ಕಳಂಕವನ್ನು ಕಳೆದುಕೊಳ್ಳಲು ಈ ಸುಳ್ಳು ನಿರ್ಧಾರ ಮಾಡಿದರೆ ಬರಿ ಪೊಳ್ಳು ಮಾತು ಎನ್ನಲಾಗುತ್ತದೆ. ವಿರೋಧ ಪಕ್ಷದ ಎ ಮಂಜು ಅವರು ಹೇಳಿಕೆ ನೀಡಿದ್ದಾರೆ. ಒಂದು ವೇಳೆ ರಾಜೀನಾಮೆ ನೀಡಲು ದೇವೇಗೌಡರು ಒಪ್ಪಿದರೆ ಅದು ಈ ಸಮಯದಲ್ಲಿ ಸಾಧ್ಯವಿಲ್ಲ ಮೊದಲು ಚುನಾವಣೆ ನಿಯಮದಂತೆ ಗೆದ್ದ ಅಭ್ಯರ್ಥಿಗಳು ಸಂಸದರಾಗಿ ಪ್ರಮಾಣವಚನ ಸ್ವಿಕರಿಸಿದ ನಂತರ ರಾಜೀನಾಮೆ ನೀಡಬಹುದು.

Also read: ಪ್ರಚಂಡ ಬಹುಮತ ಗಳಿಸಿದ್ದ ನರೇಂದ್ರ ಮೋದಿ ಸರ್ಕಾರ ಪ್ರಮಾಣ ವಚನಕ್ಕೆ ದಿನಾಂಕ ಫಿಕ್ಸ್; ವಿಶೇಷ ಅತಿಥಿಯಾಗಿ ರಷ್ಯಾ ಅಧ್ಯಕ್ಷ ವ್ಲಾದಿಮರ್ ಪುಟಿನ್ ಆಗಮನ..