ಮೈತ್ರಿಯಲ್ಲಿ ಮತ್ತೊಂದು ಆಘಾತ; ಜೆಡಿಎಸ್ ಸಭೆಯಲ್ಲಿ ಪ್ರಧಾನಿ ಮೋದಿಗೆ ಜೈಕಾರ ಕೂಗಿದ ದಳ ಕಾರ್ಯಕರ್ತರು..

0
362

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಭರಾಟೆ ಜೋರಾಗಿದ್ದು ಒಂದೆಡೆ ಕಾಂಗ್ರೆಸ್ ಮತ್ತೊಂದೆಡೆ ಜೆಡಿಎಸ್ ಮೈತ್ರಿಯಾಗಿ ಮತ ಬೇಟೆ ಮಾಡುತ್ತಿವೆ, ಇನ್ನೊಂದೇ ಬಿಜೆಪಿಯಿಂದ ಮೋದಿ ಅಲೆ ಮತ ಬೇಟೆ ಮಾಡುತ್ತಿದೆ. ಅಷ್ಟೇಅಲ್ಲದೆ. ದಳದ ಮತ್ತು ಕೈ ನಡುವಿನ ಜಗಳದಿಂದ ಬಿಜೆಪಿಗೆ ಲಾಭ ಎನ್ನುವ ಸುದ್ದಿ ಹರಡುತ್ತಿದೆ ಇದಕ್ಕೆ ಸಾಕ್ಷಿ ಎಂದರೆ ಮೈಸೂರಿನಲ್ಲಿ ಇಂದು ಸಚಿವ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್​ ಸಭೆಯಲ್ಲಿ ಗದ್ದಲ ಏರ್ಪಟ್ಟು, ಕಾರ್ಯಕರ್ತರು ಮೋದಿಗೆ ಜೈಕಾರ ಕೂಗಿದ ಘಟನೆ ನಡೆದಿದೆ. ಇದರಿಂದ ದಳದಲ್ಲಿ ಮತ್ತಷ್ಟು ಆತಂಕಗಳು ಮೂಡುತ್ತಿವೆ.

@publictv.in

Also read: ಮಂಡ್ಯದ ರಾಜಕೀಯಕ್ಕೆ ಜುಟ್ಟಲು ಹಿಡಿದ ಐಟಿ ಅಧಿಕಾರಿಗಳು; ತಂದೆ -ಮಗ ಉಳಿದುಕೊಂಡಿದ್ದ ಹೋಟೆಲ್​​ ಮೇಲೆ ಐಟಿ ದಾಳಿ; ಬೇಸತ್ತ ಕುಮಾರಣ್ಣ ಮೋದಿಯ ಮೇಲೆ ಕಿಡಿ..

ಹೌದು ಮೈಸೂರಿನಲ್ಲಿ ಇಂದು ಸಚಿವ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್​ ಸಭೆಯಲ್ಲಿ ಗದ್ದಲ ಏರ್ಪಟ್ಟು, ಕಾರ್ಯಕರ್ತರು ಮೋದಿಗೆ ಜೈಕಾರ ಕೂಗಿದ ಘಟನೆ ನಡೆದಿದೆ. ದೋಸ್ತಿ ಅಭ್ಯರ್ಥಿ ವಿಜಯ್‍ಶಂಕರ್ ಅವರಿಗೆ ಬೆಂಬಲ ನೀಡುವ ಸಲುವಾಗಿ ಕರೆಯಲಾದ ಸಭೆಯಲ್ಲಿ ಪರಿಷತ್ ಸದಸ್ಯ ಮರಿತಿಬ್ಬೆಗೌಡ ವೇದಿಕೆಯ ಮೇಲೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆದರೆ, ಸಭೆ ನಡೆಯುತ್ತಿದ್ದ ವೇಳೆ ಅಚ್ಚರಿ ಎಂಬಂತೆ ಕಾರ್ಯಕರ್ತರು ಏಕಾಏಕಿ ಗಲಾಟೆಗೆ ಮುಂದಾಗಿದ್ದಾರೆ. ನಂತರ ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆ ಕೂಗಿದ್ದಾರೆ.

@publictv.in

Also read: ಜೆಡಿಎಸ್-ಕಾಂಗ್ರೆಸ್ ಮೈತ್ರಿಯಿಂದ ಬೇಸತ್ತು ಮಂಡ್ಯ ಕಾಂಗ್ರೆಸ್ ನಾಯಕರು ಸುಮಲತಾಗೆ ಬಹಿರಂಗ ಬೆಂಬಲ?? ನಿಖಿಲ್ ಗತಿ??

ಏಕೆಂದರೆ ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್​ನ ಸಿ.ಎಚ್. ವಿಜಯ್​ ಶಂಕರ್​ ಕಣಕ್ಕೆ ಇಳಿದಿದ್ದಾರೆ. ಮೈತ್ರಿ ಒಪ್ಪಂದದಂತೆ ವಿಜಯ್​ ಶಂಕರ್​ ಪರವಾಗಿ ಜೆಡಿಎಸ್​ ಕೂಡ ​ ಪರವಾಗಿ ಪ್ರಚಾರ ನಡೆಸುತ್ತಿದೆ. ಇದು ಕೆಲ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಇಂದು ಜೆಡಿಎಸ್​ ಕಾರ್ಯಕರ್ತರು ಹಿರಿಯ ನಾಯಕರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ವೇಳೆಯಲ್ಲಿ ಅಕ್ರೋಶಗೊಂಡ ಕಾರ್ಯಕರ್ತರು ನೀವು ಈಗ ಮೈತ್ರಿ ಅಂತ ಹೇಳುತ್ತಿದ್ದೀರಿ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ವಿರುದ್ಧ ಪ್ರಕರಣ ದಾಖಲಾಗಿವೆ. ಅದನ್ನು ಮರೆತು ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡರೆ ಹೇಗೆ ಎಂದು ಕಾರ್ಯಕರ್ತರು, ನಾಯಕರನ್ನು ಪ್ರಶ್ನಿಸಿ ಅಸಮಾಧಾನ ಹೊರ ಹಾಕಿದರು.

ಸಭೆಯಲ್ಲಿ ಕೆಲ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ, ಪ್ರಧಾನಿ ನರೇಂದ್ರ ಮೋದಿಗೆ ಜೈ ಎಂದು ಕೂಗಿದರು. ಅಷ್ಟೇ ಅಲ್ಲದೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಮ್ಮ ಬಳಿ ಬಂದು ಮತ ಕೇಳಲಿ, ಆಮೇಲೆ ನೋಡುತ್ತೇವೆ ಎಂದು ಕಿಡಿಕಾರಿದರು. ಗಲಾಟೆ ಹೆಚ್ಚಾಗುತ್ತಿದ್ದಂತೆ ಸಚಿವ ಜಿ.ಟಿ.ದೇವೇಗೌಡ ಅವರು ಎದ್ದು ನಿಂತು ಕಾರ್ಯಕರ್ತರಿಗೆ ಕೈ ಮುಗಿದರು. ಆದರೂ ಸಭೆಯಲ್ಲಿ ಕಾರ್ಯಕರ್ತರು ಮೈತ್ರಿಯನ್ನು ವಿರೋಧಿಸಿದರು. ಈ ವೇಳೆ ಸಚಿವರು ವೇದಿಕೆ ಬಿಟ್ಟು ಕೆಳಗಿಳಿದು, ಕಾರ್ಯಕರ್ತರ ಬಳಿಗೆ ಹೋಗಿ ಸಮಾಧಾನಪಡಿಸಲು ಯತ್ನಿಸಿದರು. ಆದರೆ ಸಚಿವರ ಮಾತಿಗೂ ಕಾರ್ಯಕರ್ತರು ಕ್ಯಾರೆ ಮಾಡದೆ. ಕಳೆದ ಚುನಾವಣೆಲ್ಲಿ ಪ್ರಕರಣಗಳಾಗಿದ್ದು ನಮ್ಮ ಮೇಲೆ. ಸಿದ್ದರಾಮಯ್ಯ ಬಂದು ಮತ ಕೇಳಲಿ ಆಮೇಲೆ ನೋಡಿಕೊಳ್ಳುತ್ತೇವೆ,” ಎಂದು ಕಾರ್ಯಕರ್ತರು ಕಿಡಿಕಾರಿದರು. ಈ ವೇಳೆ ಕೆಲವರು ಬಿಜೆಪಿಗೆ, ಇನ್ನೂ ಕೆಲವರು ನರೇಂದ್ರ ಮೋದಿಗೆ ಜೈಕಾರ ಕೂಗಿ ಪಕ್ಷದ ವಿರುದ್ಧ ಘೋಷಣೆ ಕೂಗಿದರು.

Also read: ಇವು ಶೋಕಿ ಎತ್ತುಗಳು ಬಿಸಿಲಿಗೆ ಬಂದಿವೆ ಸ್ವಲ್ಪ ರೈತರ ಕಷ್ಟಗಳು ಅರ್ಥವಾಗಲಿ; ಎಂದ ಕುಮಾರಸ್ವಾಮಿಗೆ ಯಶ್ ಕೊಟ್ಟ ಉತ್ತರ ಏನು ಗೊತ್ತಾ??

ಗುರುವಾರವೂ ಇದೆ ರೀತಿಯ ಪ್ರಸಂಗ ನಡೆದಿತ್ತು, ಚನ್ನರಾಯಪಟ್ಟಣ ಕಾಂಗ್ರೆಸ್‍ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಗುರುವಾರ ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ನಿವಾಸದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆಯಲಾಗಿತ್ತು. ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ ಭಾಷಣ ಆರಂಭಿಸುತ್ತಿದ್ದಂತೆ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದರು. ನಾವು ಜೆಡಿಎಸ್‍ಗೆ ಮತ ಹಾಕಲ್ಲ. ಬಿಜೆಪಿ ಹಾಕುತ್ತೇವೆ ಎಂದು ಘೋಷಣೆ ಕೂಗಿದರು. ಈ ವೇಳೆ “ಮೋದಿ, ಮೋದಿ” ಎಂದು ಜೈಕಾರ ಹಾಕಿದ್ದರು. ಮುಖಂಡರು-ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಪರಸ್ಪರ ತಳ್ಳಾಟವೂ ನಡೆಯಿತು. ಕುರ್ಚಿಗಳನ್ನು ಎಸೆದು ಆಕ್ರೋಶ ಹೊರ ಹಾಕಿದ್ದರು. ಇವತ್ತು ಕೂಡ ಇದೆ ಪಜೀತಿ ನಡೆದು ಕೈ ದಳದ ನಡುವೆ ಚುನಾವಣೆ ಗೊಂದಲಗಳು ಎದ್ದು ಕಾಣುತ್ತಿವೆ ಇದರಿಂದ ಯಾರಿಗೆ ಲಾಭ ಎನ್ನುವುದನ್ನು ಕಾದು ನೋಡಬೇಕಿದೆ.