ಜೀರಾ ರೈಸ್ ಮಾಡುವ ಸುಲಭವಾದ ವಿಧಾನ

0
6312

ಕಡಿಮೆ ಸಮಯದಲ್ಲಿ ರುಚಿಕರ ಹಾಗೂ ಆರೋಗ್ಯಕ್ಕೆ ಹಿತಕರವಾದ ಜೀರಾರೈಸ್ ಮಾಡುವ ಸರಳ ವಿಧಾನ.

ಬೇಕಾಗುವ ಸಾಮಗ್ರಿ:

  • ಅಕ್ಕಿ 1 ಕಪ್‌,
  • ಜೀರಿಗೆ 1 ಚಮಚ,
  • ಒಣಮೆಣಸಿನ ಕಾಯಿ 2 ಪೀಸ್‌,
  • ತುಪ್ಪ 1 ಚಮಚ,
  • ದಪ್ಪ ಮೆಣಸಿನ ಕಾಯಿ 2 ಪೀಸ್‌,
  • ಕರಿಬೇವು, ಸಕ್ಕರೆ 1 ಚಮಚ,
  • ನಿಂಬೆರಸ 1 ಚಮಚ,
  • ಕೊತ್ತಂಬರಿ ಸೊಪ್ಪು,
  • ಉಪ್ಪು,
  • ಎಣ್ಣೆ

ಮಾಡುವ ವಿಧಾನ:

ಕುಕ್ಕರ್‌ಗೆ ಅಕ್ಕಿ, ಅಗತ್ಯವಿರುವಷ್ಟು ನೀರು ಹಾಕಿ 2 ವಿಷಲ್‌ ಕೂಗಿಸಿ. ಬಾಣಲೆಗೆ ಎಣ್ಣೆ ಹಾಕಿ ಬಿಸಿಮಾಡಿ. ತುಪ್ಪ, ಒಣಮೆಣಸಿನ ಕಾಯಿ, ಜೀರಿಗೆ, ದಪ್ಪ ಮೆಣಸಿನಕಾಯಿ, ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ಕರಿಬೇವು ಸೇರಿಸಿ ಫ್ರೈ ಮಾಡಿ. ಈ ಮಿಶ್ರಣಕ್ಕೆ ಅನ್ನ ಹಾಕಿ ಕಲಸಿಕೊಳ್ಳಿ, ಇದರ ಮೇಲೆ ಸಕ್ಕರೆ, ನಿಂಬೆರಸ, ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ. ಮಿಕ್ಸ್‌ ಮಾಡಿ. ಬಿಸಿ ಬಿಸಿ ಜೀರಾ ರೈಸ್‌ ರೆಡಿ.