ಜೀರಿಗೆಯಲ್ಲಿದೆ ಔಷಧೀಯ ಗುಣ

0
1116

*ಜೀರಿಗೆ ಅರಿಯದ ಜನರಿಲ್ಲ. ಇದಿಲ್ಲದೆ ರುಚಿರುಚಿಯಾದ ಅಡುಗೆಯೇ ಇಲ್ಲ. ಕೇವಲ ಊಟಕ್ಕಲ್ಲ,ಆರೋಗ್ಯದ ವಿಷಯದಲ್ಲೂ ಇದು ಮಹತ್ವದ್ದು.

*ಅಜೀರ್ಣದಿಂದ ಭೇದಿಯಾಗುತ್ತಿದ್ದರೆ ಹುರಿದ ಅಕ್ಕಿ-ತರಿಗೆ ಜೀರಿಗೆ ಪುಡಿ ಹಾಗೂ ಸಕ್ಕರೆ ಅಥವಾ ಉಪ್ಪು ಹಾಕಿ ಗಂಜಿ ತಯಾರಿಸಿ ಸೇವಿಸಿದರೆ ಅಜೀರ್ಣ ನಿವಾರಣೆಯಾಗುತ್ತದೆ.

*ಜೀರಿಗೆ ಪುಡಿಯನ್ನು ಮಜ್ಜಿಗೆ ಹಾಗು ಸ್ವಲ್ಪ ಉಪ್ಪು ಬೆರೆಸಿ ಕುಡಿದರೆ ಜೀರ್ಣಶಕ್ತಿ ಹೆಚ್ಚಿಸುತ್ತದೆ.

* 2 ಚಮಚ ಹುರಿದ ಜೀರಿಗೆಯನ್ನು 1 ದೊಡ್ಡ ಲೋಟ ನೀರು ಹಾಕಿ ಕುದಿಸಿ , 1/2 ಲೋಟಕ್ಕೆ ಇಳಿಸಿ ಅದಕ್ಕೆ ಉಪ್ಪು – ತುಪ್ಪ ಬೆರೆಸಿ ಸೇವಿಸಿದರೆ , ಹೊಟ್ಟೆ ಉಬ್ಬರ ಹಾಗೂ ನೋವು ಗುಣವಾಗುತ್ತದೆ .

* ಹೊಟ್ಟೆ ನೋವು , ವಾಂತಿ ಇದ್ದಾಗ , 1 ಚಮಚ ಜೀರಿಗೆ , 1 ಚಮಚ ಏಲಕ್ಕಿ ಪುಡಿಯನ್ನು 1 ಲೋಟ ನೀರಿನಲ್ಲಿ ಕುದಿಸಿ 1/2 ಲೋಟಕ್ಕೆ ಇಳಿಸಬೇಕು. ತಣ್ಣಗಾದ ನಂತರ ಅದಕ್ಕೆ ಸಕ್ಕರೆ , ನಿಂಬೆ ಪಾನಕ ಬೆರೆಸಿ ಸೇವಿಸಿದರೆ ವಾಂತಿ ನಿಲ್ಲುತ್ತದೆ .

* ಜೀರಿಗೆ ಹಾಗೂ ಕೊತ್ತಂಬರಿ ಬೀಜವನ್ನು ಹುರಿದು ಪುಡಿ ಮಾಡಿ ಸಕ್ಕರೆ ಮತ್ತು ನೀರು ಸೇರಿಸಿ ಕುಡಿದರೆ ಬಾಯಾರಿಕೆ ನಿವಾರಣೆಯಾಗುತ್ತದೆ .

* ನೆನೆಸಿದ ಮೆಂತ್ಯದ ಬೀಜ, ಜೀರಿಗೆ , ಉಪ್ಪು ಹಾಗೂ ಖಾರ ಹಾಕಿ ಚಟ್ನಿ ತಯಾರಿಸಿ ಚಪಾತಿ ಜೊತೆ ಸೇವಿಸಿ. ನಂತರ ಹಾಲನ್ನು ಕುಡಿದರೆ ಒಂದು ವಾರದಲ್ಲಿ ಎದೆ ಹಾಲು ಹೆಚ್ಚಾಗುತ್ತದೆ .

* ಅಲರ್ಜಿ: ಒಂದು ಬಟ್ಟಲು ಜೀರಿಗೆ ಕಷಾಯಕ್ಕೆ ಒಂದು ಚಿಟಿಕೆ ಏಲಕ್ಕಿ ಪುಡಿ ಬೆರೆಸಿ ಕುಡಿದರೆ ಚರ್ಮದ ಮೇಲಿನ ನವೆ,ಉರಿ ಕಡಿಮೆ ಯಾಗಿ,ಅಲರ್ಜಿ ನಿಯಂತ್ರಣಗೊಳ್ಳುತ್ತದೆ.

* ಹೊಟ್ಟೆ ನೋವಿಗೆ: ಒಂದು ಚಮಚ ಜೀರಿಗೆ, ಶುಂಠಿ ಪುಡಿ, ಬೆಲ್ಲವನ್ನು ಬಿಸಿ ನೀರಿಗೆ ಹಾಕಿ ಸ್ವಲ್ಪ ನಿಂಬೆ ರಸ ಹಿಂಡಿ ಕುಡಿದರೆ ಅಜೀರ್ಣದಿಂದ ಬಂದ ಹೊಟ್ಟೆ ನೋವು ಕ‌ಡಿಮೆಯಾಗುತ್ತದೆ.

* ಮೂಗು ಕಟ್ಟಿದರೆ: ಜೀರಿಗೆಯನ್ನು ಅಗಿದು ತಿಂದು ಬಿಸಿ ನೀರು ಕುಡಿಯುವುದರಿಂದ ಮೂಗು ಕಟ್ಟುವುದು ನಿವಾರಣೆಯಾಗಿ ಉಸಿರಾಟ ಸರಾಗ ವಾಗುತ್ತದೆ.

* ಭೇದಿ: ಅರ್ಧ ಚಮಚ ಜೀರಿಗೆ ಪುಡಿಯನ್ನು ಐದು ಚಮಚ ಮೊಸರಿನೊಂದಿಗೆ ಬೆರೆಸಿ ಸೇವಿಸಿದರೆ ಭೇದಿ ನಿಲ್ಲುತ್ತದೆ.

 

*ಉರಿಮೂತ್ರ: ಎರಡು ಚಮಚ ಜೀರಿಗೆ ಪುಡಿ ಯನ್ನು ಎರಡು ಲೋಟ ನೀರಿಗೆ ಬೆರೆಸಿ, ಚೆನ್ನಾಗಿ ಕುದಿಸಿ ಅರ್ಧ ಲೋಟಕ್ಕೆ ಇಳಿಸಿ, ಸೋಸಿ ಕುಡಿದರೆ ಉರಿ ಮೂತ್ರ ನಿವಾರಣೆಯಾಗುತ್ತದೆ.