ಎರಡು ಶತಮಾನಗಳ ನಂತರ ಮೊದಲ ಬಾರಿ ತೆರೆದ ಜೀಸಸ್ ಸಮಾಧಿ

0
4020

ಜೆರುಸಲೆಂನ ಹೋಲಿ ಚರ್ಚ್‌ನ ಸಮಾಧಿಯಲ್ಲಿ ಜೀಸಸ್ ಜೀವಂತವಾಗಿದ್ದಾರೆ ಎಂಬ ಕ್ರೈಸ್ತ ಸಮುದಾಯದ ನಂಬಿಕೆಯಾದ ಸಮಾಧಿಯ ಬಾಗಿಲನ್ನು ಸುಮಾರು ಎರಡು ಶತಮಾನಗಳ ನಂತರ ಮೊದಲ ಬಾರಿ ತೆರೆಯಲಾಗಿದೆ.

jesus_tomb

ಇತಿಹಾಸ ತಜ್ಞರು ಜೀಸಸ್ ಅಸ್ತಿತ್ವದ ಕುರಿತ ಸಾಕ್ಷ್ಯ ಸಂಗ್ರಹಕ್ಕಾಗಿ ಈ ಸಮಾಧಿಯನ್ನು ತೆರೆದು ಪರಿಶೀಲನೆ ನಡೆಸಲು ಉದ್ದೇಶಿಸಿದ್ದಾರೆ. ಕ್ರಿಸ್ತಪೂರ್ವ 33 ಶತಮಾನದಲ್ಲಿ ಬದುಕಿದ್ದರೆನ್ನಲಾದ ಜೀಸಸ್ ಅವರ ಪಾರ್ಥಿವ ಶರೀರದ ಮಾದರಿಯ ಚಿತ್ರ ಲಭಿಸಿದೆ. ಈ ಸಮಾಧಿಯಲ್ಲಿ ಜೀಸಸ್ ಅವರ ಪೇಟಿಂಗ್ ಮಾಡಿದ ರೀತಿಯ ಚಿತ್ರದಂತಿದೆ.

ಸಮಾಧಿಯ ಮೇಲೆ ಹಾಕಲಾಗಿದ್ದ ಮೊಸೆಕ್ ಚಪ್ಪಡಿಯನ್ನು ತೆರವುಗೊಳಿಸಿದಾಗ ಸ್ಥಳದಲ್ಲಿದ್ದ ಛಾಯಾಗ್ರಾಹಕ ತೆಗೆದ ಫೋಟೋ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದನ್ನು 3 ದಿನಗಳ ಮಟ್ಟಿಗೆ ಇತಿಹಾಸ ತಜ್ಞರಿಗಾಗಿ ಬಿಟ್ಟು ಕೊಡಲಾಗಿದೆ. 1810 ಅಥವಾ ಅದಕ್ಕಿಂತ ಮುನ್ನ ಒಮ್ಮೆ ಜೀಸಸ್ ಅವರ ಸಮಾಧಿಯ ಬಾಗಿಲು ತೆರೆಯಲಾಗಿತ್ತು ಎಂದು ಚರ್ಚ್‌ನ ಫಾದರ್ ಸ್ಯಾಮ್ಯುಯೆಲ್ ಅಗೊನಯ್ ತಿಳಿಸಿದ್ದಾರೆ.

ಗ್ರೀಕ್ ಮೂಲದ ತಜ್ಞರು ಕೂಡ ಈ ತಂಡದಲ್ಲಿದ್ದು, ಸಮಾಧಿಯ ಕಲ್ಲುಗಳು ಹಾಗೂ ಮಾರ್ಬೆಲ್ ಅನ್ನು ಕೂಡ ಪರಿಶೀಲನೆಗೊಳಪಡಿಸಲಾಗುವುದು ಎಂದು ಹೇಳಲಾಗಿದೆ. ಇದೇ ವೇಳೆ ಸಮಾಧಿ ಮೇಲಿನ ಮಾರ್ಬೆಲ್ ತೆರವು ಗೊಳಿಸುತ್ತಿದ್ದಂತೆ ಕೈ ನಡುಗಿತು ಎಂದು ಸಿಬ್ಬಂದಿ ಹೇಳಿಕೊಂಡಿದೆ.