ಕರ್ನಾಟಕದಲ್ಲಿ ಬಿಜೆಪಿಯನ್ನು ಧೂಳಿಪಟ ಮಾಡುತ್ತೇನೆಂದ ಗುಜುರಾತ್-ನ ಈ ಶಾಸಕ, ಮೋದಿ ಅಲೆಯ ಮುಂದೆ ಇವರು ನಿಲ್ಲುತ್ತಾರಾ…

0
408

ಇತ್ತೀಚಿಗೆ ನಡೆದ ಗುಜುರಾತ್ ರಾಜ್ಯದ ಚುನಾವಣೆಯಲ್ಲಿ ವಡಗಾಂವ್ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ದಿಸಿ ಮೊದಲ ಸಲಕ್ಕೆ ಬಿಜೆಪಿಯಂತಹ ದೊಡ್ಡ ರಾಷ್ಟೀಯ ಪಕ್ಷದ ಅಭ್ಯರ್ಥಿಗೆ ಸೆಡ್ಡು ಹೊಡೆದು 19 ಸಾವಿರಕ್ಕೂ ಹೆಚ್ಚು ಅಂತರದಿಂದ ಗೆಲುವಿನ ನಗೆ ಬೀರಿದ್ದರು. ಪಕ್ಷೇತರರಾಗಿ ಸ್ಪರ್ದಿಸಿದರು ಜಿಗ್ನೇಶ್ ಮೇವಾನಿ ಅವರನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ ಎಂಬುದು ಎಲ್ಲರಿಗೆ ಗೊತ್ತಿರುವ ವಿಚಾರ.

ಗುಜರಾತ್ ಚುನಾವಣೆಯ ಬಳಿಕ ಜಿಗ್ನೇಶ್ ಮೇವಾನಿ ಈಗ ಕರ್ನಾಟಕದತ್ತ ಮುಖಮಾಡಿದ್ದಾರೆ, ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸುವುದೇ ಅವರ ಪ್ರಥಮ ಗುರಿಯಂತೆ ಹೇಗೆಂದು ಅವರೇ ಸ್ವತಃ ಹೇಳಿಕೆ ನೀಡಿದ್ದಾರೆ. ಆದಷ್ಟು ಬೇಗ ಕರ್ನಾಟಕಕ್ಕೆ ಬರುತ್ತೇನೆ, ಅಲ್ಲೇ ಹೋರಾಟ ಮಾಡಿ ಬಿಜೆಪಿಯನ್ನು ಸೋಲಿಸುತ್ತೇನೆ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರು ಇದ್ದಿದ್ದರೆ ಅವರೇ ನನಗೆ ವಿಮಾನ ಟಿಕೆಟ್ ಬುಕ್ ಮಾಡಿ ಕರ್ನಾಟಕಕ್ಕೆ ಕರೆಸಿಕೊಳ್ಳುತ್ತಿದ್ದರು ಅವರಿಗೆ ಹೆಚ್ಚು ಖುಷಿಯಾಗುತ್ತಿತ್ತು ಎಂದರು.

ರಾಜ್ಯಕ್ಕೆ ಆಗಮಿಸಲಿರುವ ಅವರು ಮೊದಲು ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಅವರ ಜೊತೆ ರಾಜ್ಯದ ಚುನಾವಣೆ, ಮತ್ತು ಪ್ರಸ್ತುತ ಸ್ಥಿತಿ -ಗತಿಗಳ ಬಗ್ಗೆ ಚರ್ಚಿಸಿ ಏನೆಲ್ಲ ಸಿದ್ಧತೆ, ಕಾರ್ಯ ತಂತ್ರ ಮಾಡಿಕೊಳ್ಳಬೇಕು ಮತ್ತು ಎಲ್ಲೆಲ್ಲಿ ಪ್ರಚಾರ ಮಾಡಬೇಕು ಎಂಬುದರ ಮಾಹಿತಿ ಪಡೆಯಲಿದೆಯಂತೆ.

ವಡಗಾಂವ್ ಶಾಸಕ ಜಿಗ್ನೇಶ್ ಮೇವಾನಿ ಫೆಬ್ರವರಿ ತಿಂಗಳಿನಲ್ಲಿ ರಾಜ್ಯಕ್ಕೆ ಆಗಮಿಸುವ ನಿರೀಕ್ಷೆ ಇದೆ. ರಾಜ್ಯ ಕಾಂಗ್ರೆಸ್ ಅವರನ್ನು ಸಿಎಂ ಸಿದ್ದರಾಮಯ್ಯನವರ ಜೊತೆ ದಲಿತ ಮತಗಳಿರುವ ಕ್ಷೇತ್ರಗಳತ್ತ ಪ್ರಚಾರ ಮಾಡಿ ದಲಿತ ಮತಗಳನ್ನು ಸೆಳೆಯಲು ಸೂಚಿಸಬಹುದೆಂದು ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಈಗತಾನೆ ಗೆದ್ದ ಶಾಸಕನನ್ನು ಪ್ರಚಾರಕ್ಕೆ ಬಳಸಿ ಕೇವಲ ಜಾತಿಯ ಮೂಲಕ ಕಾಂಗ್ರೆಸ್, ಬಿಜೆಪಿಯ ವಿರುದ್ಧ ಗೆಲ್ಲಬಹುದಾ ಕಾದು ನೋಡಬೇಕು…!