ಗುಜರಾತ್-ನಿಂದ ಕರ್ನಾಟಕದ ಕಾಂಗ್ರೆಸ್ ನಾಯಕರು ಕರೆತಂದಿದ್ದ ಜಿಜ್ಞೇಶ್ ಮೇವಾನಿ ಮೋದಿಯವರಿಗೆ ವಯಸ್ಸಾಗಿದೆ, ಮುದುಕರ ಭಾಷಣ ಬೇಕಿಲ್ಲ ಎಂದು ಪ್ರಧಾನಿಗೆ ಅಗೌರವ ತೋರಿಸಿದ್ದಾರೆ…

0
479

ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕು ಎಂದು ಪಣ ತೊಟ್ಟಿರುವ ನೂತನವಾಗಿ ಗುಜರಾತ್ ಶಾಸಕರಾಗಿ ಆಯ್ಕೆಯಾಗಿರುವ ಜಿಗ್ನೇಶ್ ಮೇವಾನಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಕೋಮು ಸೌಹಾರ್ದ ವೇದಿಕೆಯ 15 ನೇ ವರ್ಷದ ವಾರ್ಷಿಕೋತ್ಸವದಲ್ಲಿ ಬಿಜೆಪಿ ಹಾಗು ಪ್ರಧಾನಿ ಮೋದಿಯವರ ವಿರುದ್ಧ ಕಿಡಿಕಾರಿದ್ದಾರೆ.

ಜಿಗ್ನೇಶ್ ಮೇವಾನಿ ಇತ್ತೀಚಿಗೆ ನಡೆದ ಗುಜುರಾತ್ ರಾಜ್ಯದ ಚುನಾವಣೆಯಲ್ಲಿ ವಡಗಾಂವ್ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ದಿಸಿ ಮೊದಲ ಸಲಕ್ಕೆ ಬಿಜೆಪಿಯಂತಹ ದೊಡ್ಡ ರಾಷ್ಟೀಯ ಪಕ್ಷದ ಅಭ್ಯರ್ಥಿಗೆ ಸೆಡ್ಡು ಹೊಡೆದು 19 ಸಾವಿರಕ್ಕೂ ಹೆಚ್ಚು ಅಂತರದಿಂದ ಗೆಲುವು ಸಾಧಿಸಿದ್ದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿ ಕರ್ನಾಟಕ ಶಾಂತಿ, ಸೌಹಾರ್ದತೆಗೆ ಹೆಸರಾದ ನಾಡು, ಇಲ್ಲಿ ಯಾವುದೇ ಧರ್ಮದವರಿಗೆ ಭಯವಿಲ್ಲ, ಹಿಂದೂ-ಮುಸ್ಲಿಂ ಒಟ್ಟಾಗಿ ಇರುತ್ತಾರೆ ಮತ್ತು ಪರಸ್ಪರರ ಹಬ್ಬಗಳನ್ನು ಆಚರಿಸುತ್ತಾರೆ. ಇಂತಹ ಶಾಂತಿಯ ನಾಡಿನಲ್ಲಿ ನಾವು ಬಿಜೆಪಿಯವರಿಗೆ ಕೋಮು ಗಲಭೆ ಮಾಡಲು ಬಿಡುವುದಿಲ್ಲ ಎಂದರು.

ಪ್ರಧಾನಿ ಮೋದಿ, ಅಮಿತ್ ಶಾ ಹಾಗು UP ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು UP ಮತ್ತು ಗುಜುರಾತ್-ನಲ್ಲಿ ನಡೆದ ಹಾಗೆ ಇಲ್ಲಿ ನಾವು ಕೋಮು ಗಲಭೆ, ಗೋರಕ್ಷಣೆ ಹೆಸರಿನಲ್ಲಿ ದಲಿತರ ವಿರುದ್ಧ ದೌರ್ಜನ್ಯ ನಡೆಯಲು ಬಿಡುವುದಿಲ್ಲ ಎಂದರು.

ಮೋದಿಯವರಿಗೆ ವಯಸ್ಸಾಗಿದೆ, ಮುದುಕರಾಗಿ ಏನೇನೋ ಮಾತನಾಡುತ್ತಾರೆ ನಾವು ಇನ್ನು ಮುಂದೆ ಅವರ ಭಾಷಣ ಮತ್ತು ಸುಳ್ಳು ಆಶ್ವಾಸನೆಯನ್ನು ನಂಬಬಾರದು ಈಗೇನಿದ್ದರು ಯುವ ಜನರ ಮಾತು ಕೇಳಬೇಕು. ಕನಯ್ಯ ಕುಮಾರ್ ನಂತಹ ಯುವ ನಾಯಕರ ಭಾಷಣವನ್ನು ಹಾಗು ಅವರಂತಹ ಹಲವು ಯುವ ನೇತಾರರನ್ನು ಹಿಂಬಾಲಿಸಬೇಕು, ಮೋದಿಯಂತಹ ಮುದುಕರನಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದರು.