ಗುಜರಾತಿನ ದಲಿತ ನಾಯಕ ಜಿಜ್ಞೇಶ್ ಮೇವಾನಿಯವರು ಕರ್ನಾಟಕಕ್ಕೆ ಬರುತ್ತಿದ್ದಾರೆ, ಯುಪಿಯ ಯೋಗಿ ಭೇಟಿಗೆ ಪ್ರತ್ಯುತ್ತರ ನೀಡುತ್ತಿದೆಯ ಕಾಂಗ್ರೆಸ್?

0
399

ಗುಜುರಾತ್ ರಾಜ್ಯದ ಚುನಾವಣೆಯಲ್ಲಿ ವಡಗಾಂವ್ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ದಿಸಿ ಮೊದಲ ಸಲಕ್ಕೆ ಗೆಲುವಿನ ನಗೆ ಬೀರಿದ್ದ ಕಾಂಗ್ರೆಸ್ ಬೆಂಬಲಿತ ನಾಯಕ ಜಿಗ್ನೇಶ್ ಮೇವಾನಿ ಇಂದು ರಾಜ್ಯಕ್ಕೆ ಆಗಮಿಸಿಸಲಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕು ಎಂದು ಪಣ ತೊಟ್ಟಿರುವ ಅವರು ಅಮಿತ್ ಶಾ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಬಹುದಾ.

ಗುಜರಾತ್ ಚುನಾವಣೆಯ ಬಳಿಕ ಜಿಗ್ನೇಶ್ ಮೇವಾನಿ ಈಗ ಕರ್ನಾಟಕದತ್ತ ಮುಖಮಾಡಿದ್ದಾರೆ, ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸುವುದೇ ಅವರ ಪ್ರಥಮ ಗುರಿಯಂತೆ ಹೇಗೆಂದು ಅವರೇ ಸ್ವತಃ ಹೇಳಿಕೆ ನೀಡಿದ್ದಾರೆ. ಕೋಮು ಸೌಹಾರ್ದ ವೇದಿಕೆಗೆ 15 ವರ್ಷ ತುಂಬಿರೋ ಹಿನ್ನೆಲೆಯಲ್ಲಿ ಇಂದು ಜಿಗ್ನೇಶ್ ಮೇವಾನಿ ಅವರು ಚಿಕ್ಕಮಗಳೂರು ಜಿಲ್ಲೆಗೆ ಬರುತ್ತಿದ್ದಾರಂತೆ.

ಈ ಕಾರ್ಯಕ್ರಮದಲ್ಲಿ ಅವರು ಬಡವರು, ದಲಿತರು, ಹಿಂದುಳಿದ ವರ್ಗದವರನ್ನು ಕುರಿತು ಬೃಹತ್ ವೇದಿಕೆಯಲ್ಲಿ ಭಾಷಣ ಮಾಡಲಿದ್ದಾರಂತೆ. ಇನ್ನು ಬಿಜೆಪಿಯವರ ಕಾಂಗ್ರೆಸ್ ಮುಕ್ತ ಭಾರತದ ಕನಸಿಗೆ ಇವರು ಅಡ್ಡಿಯಾಗಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ತುಂಬಾ ಉತ್ಸುಕತೆಯಲ್ಲಿದ್ದಾರೆ.

ಗುಜುರಾತ್-ನಲ್ಲಿ ಬಿಜೆಪಿಗೆ ಸೆಡ್ಡು ಹೊಡೆದ ಹಾಗೆ ಕರ್ನಾಟಕದಲ್ಲಿ ಕೂಡ ಇವರ ಭಾಷಣ, ರೋಡ್ ಶೋ ಗಳಿಂದ ದಲಿತ ಮತಗಳನ್ನು ಸೆಳೆಯುವುದು ಕಾಂಗ್ರೆಸ್-ನ ಉದ್ದೇಶವಾಗಿದೆ, ಇನ್ನು ಪ್ರಧಾನಿ ಮೋದಿಯವರ ಅಲೆಯ ಅಬ್ಬರವನ್ನು ಜಿಗ್ನೇಶ್ ಯಾವ ರೀತಿ ಕಡಿಮೆ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು.