ಒಂದು ತಿಂಗಳಿನಲ್ಲಿ 16 ಮಿಲಿಯನ್ ಚಂದಾದಾರರು: ವಾಟ್ಸಾಪ್, ಫೇಸ್‎ಬುಕ್ ಅನ್ನು ಹಿಂದಿಕ್ಕಿದ ಜಿಯೋ ವಿಶ್ವದಾಖಲೆ

0
1050

ಒಂದು ತಿಂಗಳಿನಲ್ಲಿ 16 ಮಿಲಿಯನ್ ಚಂದಾದಾರರು: ವಾಟ್ಸಾಪ್, ಫೇಸ್‎ಬುಕ್ ಅನ್ನು ಹಿಂದಿಕ್ಕಿದ ಜಿಯೋ ವಿಶ್ವದಾಖಲೆ

ಟೆಲಿಕಾಮ್ ಕ್ಷೇತ್ರದಲ್ಲಿ ಜಿಯೋ ಹೆಸರು ಈಗ ಭರ್ಜರಿ ಮೋಡಿಯನ್ನು ಮಾಡುತ್ತಿದೆ. 16 ಮಿಲಿಯನ್ ನೋಂದಾಯಿತ ಬಳಕೆದಾರರನ್ನು ದಾಟಿಕೊಂಡು ಜಿಯೋ ಈಗ 4ಜಿ ಮಾರುಕಟ್ಟೆಯಲ್ಲಿ ದಾಖಲೆಯನ್ನೇ ಮಾಡಿದೆ.

20160823_172259

ಮುಕೇಶ್ ಅಂಬಾನಿ ಕಂಪೆನಿ ಇತರ ಟೆಲೆಕಾಮ್ ಸಂಸ್ಥೆಗಳಿಗೂ ಭರ್ಜರಿ ಪೈಪೋಟಿಯನ್ನೇ ನೀಡಿದ್ದು ದಾಖಲೆಯನ್ನೇ ಇದು ಸೃಷ್ಟಿಸಿದೆ.ವಿಶ್ವ ದಾಖಲೆಯನ್ನೇ ಮಾಡಿರುವ ಜಿಯೋ ಕುರಿತಾದ ಇನ್ನಷ್ಟು ಸುದ್ದಿಗಳನ್ನು ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದು ಇತರ ತಾಣಗಳಿಗೂ ಇದು ಹೇಗೆ ಬಿಸಿ ಮುಟ್ಟಿಸಿದೆ ಎಂಬುದನ್ನು ಅರಿಎಸ್‎ಎಮ್‌ಎಸ್ ಮೂಲಕ ಫ್ರೀ ಏರ್‎ಟೆಲ್ ಡೇಟಾ ಪಡೆದುಕೊಳ್ಳುವುದು ಹೇಗೆ? ತಿಳಿಯೋಣ.

30 ದಿನಗಳ ಕಾರ್ಯಾಚರಣೆಯಲ್ಲಿ ಜಿಯೋ 16 ಮಿಲಿಯನ್ ಚಂದಾದಾರರನ್ನು ದಾಟ್ಟಿದ್ದು ದಿನದಿಂದ ದಿನಕ್ಕೆ ಖ್ಯಾತಿಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ವೆಲ್‎ಕಮ್ ಆಫರ್ ಮೂಲಕ ಜಿಯೋ ಇನ್ನಷ್ಟು ಬಳಕೆದಾರರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ.

comment_584324_attachment_images_1

ಫೇಸ್‎ಬುಕ್, ವಾಟ್ಸಾಪ್ ಮತ್ತು ಸ್ಕೈಪ್‎ಗೂ ಪೈಪೋಟಿ :
30 ದಿನಗಳಲ್ಲಿ ಜಿಯೋ 4ಜಿ ಕ್ಷೇತ್ರದಲ್ಲಿ ಹೆಚ್ಚಿನ ಸಂಚಲನವನ್ನುಂಟು ಮಾಡಿದೆ. ಫೇಸ್‎ಬುಕ್, ವಾಟ್ಸಾಪ್ ಮತ್ತು ಸ್ಕೈಪ್‎ ಕೂಡ ಸೃಷ್ಟಿ ಮಾಡದೇ ಇರುವ ದಾಖಲೆಯನ್ನು ಜಿಯೋ ಮಾಡಿದೆ.

ಮುಂದಿನ ಗುರಿ 100 ಮಿಲಿಯನ್ ಚಂದಾದಾರರು:
ರಿಲಾಯನ್ಸ್‎ನ 42 ನೇ ವಾರ್ಷಿಕ ಮೀಟಿಂಗ್‎ನಲ್ಲಿ ಜಿಯೋ 100 ಮಿಲಿಯನ್ ಗ್ರಾಹಕರನ್ನು ತಲುಪುವ ಗುರಿಯನ್ನು ಹೊಂದಿದೆ. ಅಕ್ಟೋಬರ್ ಕೊನೆಯಲ್ಲಿ ಕಂಪೆನಿ 35 ಮಿಲಿಯನ್ ಬಳಕೆದಾರರನ್ನು ತಲುಪುವ ಗುರಿಯನ್ನು ಹೊಂದಿದೆ.

jio-wifi-hotspot

ಜಿಯೋ ಸಿಮ್ ಪಡೆದುಕೊಳ್ಳುವುದು ಹೇಗೆ:
ಸಿಮ್ ಪಡೆದುಕೊಳ್ಳಲು, ಮೈಜಿಯೋ ಅಪ್ಲಿಕೇಶನ್ ತೆರೆಯಿರಿ ಮತ್ತು ‘ಗೆಟ್ ಜಿಯೋ ಸಿಮ್’ ಸ್ಪರ್ಶಿಸಿ. ನಿಯಮಗಳನ್ನು ಒಪ್ಪಿಕೊಂಡು ಆಫರ್ ಕೋಡ್ ಅನ್ನು ಜನರೇಟ್ ಮಾಡಿ ನಿಮ್ಮ ಲೊಕೇಶನ್ ಹಾಗೂ ಇತರ ವಿವರಗಳನ್ನು ದಾಖಲಿಸಿ. ಆಫರ್ ಕೋಡ್ ನೋಟ್ ಮಾಡಿಕೊಂಡು ಸ್ಟೋರ್‎ಗೆ ಭೇಟಿ ನೀಡಿ.

comment_583920_attachment_images_1

ಜಿಯೋ ಸಿಮ್ ಎಲ್ಲಿ ದೊರೆಯುತ್ತದೆ:
ಎಲ್ಲಾ ರಿಲಾಯನ್ಸ್ – ಮಾಲೀಕತ್ವದ ಸ್ಟೋರ್‎ಗಳಲ್ಲಿ, ಡಿಜಿಟಲ್ ಪ್ರೆಸ್ ಮಿನಿ ಸ್ಟೋರ್ಸ್, ಮತ್ತು ದೇಶಾದ್ಯಂತ ಡಿಜಿಟಲ್ ಪ್ರೆಸ್ ಸ್ಟೋರ್‎ಗಳಲ್ಲಿ ಸಿಮ್ ಲಭ್ಯವಿದೆ. ಆಫರ್ ಕೋಡ್ ಅನ್ನು ತೆಗೆದುಕೊಂಡು ಹೋಗಿ ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಿ.