ನಿಮಗೆ Jio ಇಂಟರ್ನೆಟ್ ಸ್ಲೋ ಆಗ್ತಿದೆ ಅನ್ಸುತ್ತಿದೆಯಾ?? ಅದಕ್ಕೆ ಅಂಬಾನಿ ಏನ್ ಮಾಡಿದ್ರು ನೋಡಿ

0
1914

ಉಚಿತ 4 ಜಿ ಸಿಮ್ ನೀಡುವ ಮೂಲಕ ರಿಲಾಯನ್ಸ್ ಜಿಯೋ ಗ್ರಾಹಕರಲ್ಲಿ ಸಂಚಲನ ಎಬ್ಬಿಸಿದ ರಿಲಾಯನ್ಸ್ ಒಡೆತನದ ಮುಖ್ಯಸ್ಥ ಅಂಬಾನಿ ಜಿಯೋದಲ್ಲಿ ನೂತನವಾದ ಯೋಜನೆಗಳನ್ನು ಅನಾವರಣಗೊಳಿಸಿದ್ದಾರೆ. ಕಂಪೆನಿಯ 4ಜಿ ಎಲ್‌ಟಿಇ ನೆಟ್‌ವರ್ಕ್ ಜಗತ್ತಿನಲ್ಲಿ ಅತೀ ದೊಡ್ಡದು ಎಂದು ತಿಳಿಸಿದ್ದಾರೆ.

ಜಿಯೋ ಬಿಡುಗಡೆಯ ನಂತರ ಇತರ ಕಂಪನಿಗಳು ಜಿಯೋಗೆ ಸರಿಯಾದ ಸಹಕಾರ ನೀಡದೆ ಜಿಯೋ ಉತ್ತಮ ಸಂಪರ್ಕ ನೀಡುವಲ್ಲಿ ಸೋತಿದೆ ಎನ್ನುವ ಆರೋಪಗಳಿಗೆ ಮತ್ತು ಉಚಿತ ಇಂಟರ್ನೆಟ್ ಆಫರ್ ನೀಡಿದರೂ ಸಹ ನೆಟ್ವರ್ಕ್ ಕಾಲ್ಡ್ರಾಪ್, ಕಡಿಮೆ ಇಂಟರ್ನೆಟ್ ವೇಗದಂತಹ ಸಮಸ್ಯೆಗಳು ಇತರ ಟೆಲಿಕಾಂಗಳ ಎದುರು ಜಿಯೋ ಕೊಂಚ ಎಡವಿತ್ತು.

ಇನ್ನು ಜಿಯೋ ಮೂಲಕ ಉತ್ತಮ ಗುಣಮಟ್ಟದ ಸೇವೆಯನ್ನು ಗ್ರಾಹಕರಿಗೆ ನೀಡಲೇಬೇಕು ಎಂದು ಹಾಗು ಮತ್ತಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯಲು, ಹಾಗೆ ಇರುವ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ರಿಲಾಯನ್ಸ್ ಜಿಯೋ ಸಾಕಷ್ಟು ಆಫರ್ ಗಳನ್ನು ನೀಡ್ತಾ ಇದೆ. ಮೂಲಗಳ ಪ್ರಕಾರ ಈಗಾಗಲೇ ವಾಯ್ಸ್ ಕಾಲ್ ಹಾಗೂ ವಿಡಿಯೋ ಕಾಲಿಂಗ್ ಸೌಲಭ್ಯವಿರುವ ಸಾಕಷ್ಟು ವೈಶಿಷ್ಟ್ಯ ಹೊಂದಿರುವ ಫೋನನ್ನು ರಿಲಾಯನ್ಸ್ ಇಂಡಸ್ಟ್ರಿ ಸದ್ಯದಲ್ಲಿಯೇ 1 ಸಾವಿರ ರೂಪಾಯಿಗೆ ಮಾರುಕಟ್ಟೆಗೆ ಬಿಡಲಿದೆ.

ಜಿಯೋದಲ್ಲಿ ನೂತನವಾಗಿ ಬಂದಿರುವ ಯೋಜನೆಗಳು

  • ದೇಶಾದ್ಯಂತ 45000 ಕ್ಕೂ ಹೆಚ್ಚು ನೆಟ್ವರ್ಕ್ ಟವರ್ಗಳ ನಿರ್ಮಾಣ.
  • ಇಂಟರ್ನೆಟ್ ಫ್ರೀ ಪ್ಲಾನ್ 2017 ರ ಮಾರ್ಚ್ ವರೆಗೂ ವಿಸ್ತರಣೆ
  • 1000 ಕ್ಕೆ ಹೊಸ ಜಿಯೋ ಸ್ಮಾರ್ಟ್ ಫೋನ್
  • ವಾಯ್ಸ್ ಕರೆಗಳಿಗಾಗಿ ಜಿಯೋ ಬಳಕೆದಾರರು ಯಾವುದೇ ಹಣ ಸಂದಾಯ ಮಾಡಬೇಕಿಲ್ಲ.
  • ಕೇವಲ 50 ರೂಪಾಯಿ ದರದಲ್ಲಿ 1ಜಿಬಿ.
  • ವಿದ್ಯಾರ್ಥಿಗಳಿಗಾಗಿ ವಿಶೇಷ ಆಫರ್ ಘೋಷಣೆ. ಇದೀಗ ವಿದ್ಯಾರ್ಥಿಗಳು 25 ಪ್ರತಿಶತ ಹೆಚ್ಚು ಡೇಟಾ ಸೇವೆಯನ್ನು ಪಡೆಯಬಹುದು.
  • 4ಜಿ ಸೇವೆ, 5ಜಿ ಹಾಗೂ 6ಜಿ ಸೇವೆ ವರೆಗೂ ವಿಸ್ತರಣೆ