ಗ್ರಾಹಕರಿಗೆ ದಸರಾ-ದೀಪಾವಳಿಗಾಗಿ ಬಂಪರ್ ಉಡುಗೊರೆ.. ಜಿಯೋ ಈಗ ಇನ್ನು ಕಡಿಮೆ ದರದಲ್ಲಿ..!!

1
1767

ರಿಲಯನ್ಸ್ ಸಂಸ್ಥೆ ಕಡಿಮೆ ಬೆಲೆಯ 4ಜಿ ಸ್ಮಾರ್ಟಫೋನ್ ಲಾಂಚ್ ಮಾಡುವುದಾಗಿ ಘೋಷಿಸಿದಾಗ ಟೆಲಿಕಾಂ ರಂಗದಲ್ಲಿ ಸಂಚಲನ ಸೃಷ್ಟಿಯಾಗಿತ್ತು. ಈಗ ಮತ್ತೆ ಟೆಲಿಕಾಂ ಸಂಸ್ಥೆ ‘ಅಂತರ ಸಂಪರ್ಕ ಬಳಕೆ ಶುಲ್ಕ’ವನ್ನು (ಇಂಟರ್ ಕನೆಕ್ಟ್) ಟ್ರಾಯ್ ಶೇ. 57ರಷ್ಟು ಇಳಿಸುವುದಾಗಿ ಆದೇಶ ಹೊರಡಿಸಿದ್ದು, ಇದರಿಂದ ಮತ್ತೆ ಟೆಲಿಕಾಂ ರಂಗದಲ್ಲಿ ಹೊಸ ಅಲೆ ಸೃಷ್ಟಿಯಾಗಲಿದೆ..!!

ಈ ಆದೇಶ ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಎಂದು ಟ್ರಾಯ್ ತಿಳಿಸಿದೆ. ಕೆಲವು ತಿಂಗಳ ಹಿಂದಷ್ಟೆ ಅಂತರ ಸಂಪರ್ಕ ಬಳಕೆ ಶುಲ್ಕವನ್ನು ಪೂರ್ಣವಾಗಿ ತೆಗೆದುಹಾಕುವುದಾಗಿ ಹೇಳಿದ್ದ ಟ್ರಾಯ್, ಪೂರ್ಣವಾಗಿ ತೆಗೆಯದಿದ್ದರೂ ಬಹುತೇಕ ಕಡಿಮೆ ಮಾಡಲಾಗಿದೆ. ಪ್ರಸ್ತುತ ಒಂದು ನಿಮಿಷಕ್ಕೆ 14 ಪೈಸೆಯಷ್ಟಿದ್ದ ‘ಅಂತರ ಸಂಪರ್ಕ ಬಳಕೆ ಶುಲ್ಕ’ ಇದೀಗ ಇದಕ್ಕಿಂತ ಕೆಳಗೆ ಇಳಿಯಲಿದೆ. ಅಂತರ ಸಂಪರ್ಕ ಬಳಕೆ ಶುಲ್ಕ ಕಡಿಮೆಯಾದ್ದರಿಂದ ಜಿಯೋ ಆಫರ್‌ಗಳಲ್ಲಿ ಬದಲಾವಣೆಗಳು ಕಂಡುಬರುತ್ತದೆ.

ಜಿಯೋ ಬಳಕೆದಾರರಿಗೆ ಇದು ಒಂದು ಸೂಪರ್ ಆಫರ್ ಇದ್ದಂತೆ. ಈ ಆಫರ್ ನಿಂದಾಗಿ 399 ರೂ.ಜಿಯೋ ಆಫರ್ ಇನ್ನು 150 ರೂ.ಗೆ ಸಿಗಲಿದೆ. ಪ್ರಸ್ತುತ ಆಫರ್‌ಗೆ ಶೇಕಡ ಲೆಕ್ಕ ಹಾಕಿದರೆ ಜಿಯೋ ಕೇವಲ 150 ರೂಪಾಯಿಗಳಿಗೆ ಮೂರು ತಿಂಗಳು ಪ್ರತಿದಿನ ಒಂದು ಜಿಬಿ ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆಗಳನ್ನು ನೀಡಬಹುದಾಗಿದೆ. ಈ ಆದೇಶದಿಂದ ವಾರ್ಷಿಕವಾಗಿ 3,800 ಕೋಟಿ ರೂ. ಹಣ ಜಿಯೋಗೆ ಉಳಿಯಲಿದೆ ಅಂತೆ. ಅಬ್ಬಾ ನಂಬಲು ಕಷ್ಟವಾದರೂ ಇದು ನಿಜ.

ಇದರ ಜೊತೆ ಜೊತೆಗೆ ಏರ್‌ಟೆಲ್ ಟೆಲಿಕಾಂ ಒಂದನ್ನು ಬಿಟ್ಟು ಇತರ ಎಲ್ಲಾ ಟೆಲಿಕಾಂಗಳ ಸೇವೆಗಳ ಬೆಲೆ ಬಾರಿ ಕಡಿಮೆಯಾಗಲಿದೆ. ಕಾರಣ ಇಲ್ಲಿಯವರೆಗು ಹೆಚ್ಚು ಬಳಕೆದಾರರನ್ನು ಹೊಂದಿದ್ದ ಏರ್‌ಟೆಲ್‌ಗೆ ಹಣಪಾವತಿ ಮಾಡುವ ಪ್ರಮೆಯ ಇಲ್ಲದಿದ್ದರಿಂದ ಏರ್‌ಟೆಲ್ ಒಂದನ್ನು ಬಿಟ್ಟು ಮಿಕ್ಕೆಲ್ಲಾ ಟೆಲಿಕಾಂ ಕಂಪೆನಿಗಳು ಬೆಲೆ ಕಡಿಮೆ ಮಾಡಿ ಜಿಯೋ ಡೇಟಾ ಸಮರದಲ್ಲಿ ಭಾಗಿಯಾಗುತ್ತವೆ.