ಜಿಯೋ DTH ಬಂದ್ರೆ ಎಲ್ಲಾ ನೆಟ್ ವರ್ಕ್ ಸೇವೆಗಳು ಮನೆಗೆ ಹೋಗೊದು ಗ್ಯಾರೆಂಟಿ ಅನ್ಸುತ್ತೆ..!

0
1876

ಜಿಯೋ DTH ಬಂದ್ರೆ ಎಲ್ಲಾ ನೆಟ್ ವರ್ಕ್ ಸೇವೆಗಳು ಮನೆಗೆ ಹೋಗೊದು ಗ್ಯಾರೆಂಟಿ ಅನ್ಸುತ್ತೆ ಯಾಕೆ ಅಂದ್ರೆ ಜಿಯೋ
4ಜಿ ಸಿಮ್ ಮೂಲಕ ಟೆಲಿಕಾಂ ಮಾರುಕಟ್ಟೆಯಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ರಿಲಯನ್ಸ್ ಜಿಯೋ ಇದೀಗ ಇದೀಗ ಡಿಟಿಎಚ್ ಸೇವೆ ಆರಂಭಿಸುವ ಮೂಲಕ ಟೆಲಿವಿಷನ್ ಮಾರುಕಟ್ಟೆಯಲ್ಲೂ ಸಂಚಲನ ಉಂಟು ಮಾಡಲು ಸಿದ್ಧತೆ ನಡೆಸಿದೆ.

ಇನ್ನು ಕೆಲ ತಿಂಗಳಲ್ಲೇ ಜಿಯೋ ಡಿಟಿಎಚ್‌ ಸೇವೆ ಆರಂಭಿಸುವ ಸಾಧ್ಯತೆ ಇದ್ದು, ಈಗಾಗಲೇ ಸೆಟಪ್‌ ಬಾಕ್ಸ್‌ಗಳು ಸಹ ಸಿದ್ದವಾಗಿದ್ದು, ಈ ಕುರಿತು ಜಿಯೋ ಕೇರ್ ವೆಬ್ ಸೈಟ್ ನಲ್ಲಿ ವಿವರಣೆಯನ್ನೂ ನೀಡಲಾಗಿದೆ.

ಇತರೆ ಡಿಟಿಎಚ್ ಸೇವೆಗಿಂತಲೂ ಜಿಯೋ ಡಿಟಿಎಚ್‌ ಸೇವೆ ಭಿನ್ನವಾಗಿರಲಿದ್ದು, ಆ್ಯಂಡ್ರಾಯ್ಡ ಸೆಟಪ್‌ ಬಾಕ್ಸ್‌ ಅಥವಾ ಆ್ಯಪ್ಪಲ್‌ ಸೆಟಪ್‌ ಬಾಕ್ಸ್‌ ಮೂಲಕ ಡಿಟಿಎಚ್ ಸೇವೆ ಪಡೆಯಬಹುದಾಗಿದೆ. ತಿಂಗಳಿಗೆ 180 ರು. ಗಳ ಕನಿಷ್ಠ ದರದೊಂದಿಗೆ ಆರಂಭವಾಗುವ ವಿವಿಧ ಪ್ಲಾನ್‌ಗಳನ್ನು ಬಳಕೆದಾರರು ಸೇರಿಕೊಳ್ಳಬಹುದಾಗಿದೆ. ಬಳಕೆದಾರರು ತಮ್ಮ ಟಿವಿಯಲ್ಲಿ ರಿಲಯನ್ಸ್‌ ಪ್ಯಾಕೇಜ್‌ ಮೂಲಕ ಯಾವುದೇ ಚ್ಯಾನಲ್‌ಗ‌ಳನ್ನು ವೀಕ್ಷಿಸಬಹುದಾಗಿದೆ.

ಜಿಯೋ ಸ್ಮಾರ್ಟ್ ಸೆಟಪ್‌ ಬಾಕ್ಸ್‌ ಜೊತೆಗೆ ಜಿಯೋ ಬ್ರಾಡ್‌ಬ್ಯಾಂಡ್‌ ಸಂಪರ್ಕ ನೀಡುವ ಆಸೆಯನ್ನು ಸಂಸ್ಥೆ ಹೊಂದಿದ್ದು, ಇದಕ್ಕೆ 1 ಜಿಬಿಪಿಎಸ್‌ ವರೆಗೆ ಸ್ಟ್ರೀಮಿಂಗ್‌ ಸ್ಪೀಡ್‌ ಇರುತ್ತದೆ.

ವರದಿಗಳ ಪ್ರಕಾರ ಡಿಟಿಎಚ್‌ ಸ್ಯಾಟಲೈಟ್‌ ಸೇವೆಯನ್ನು ರಿಲಯನ್ಸ್‌ ಜಿಯೋ ತನ್ನ ಗ್ರಾಹಕರಿಗೆ ವೆಲ್‌ಕಮ್‌ ಆಫ‌ರ್‌ ಪ್ರಮೋಶನ್‌ ಮೂಲಕ 90 ದಿನಗಳಿಗೆ ಉಚಿತವಾಗಿ ನೀಡಲಿದೆ ಎಂದು ಹೇಳಲಾಗಿತು ಆದ್ರೆ ಜಿಯೋ ತನ್ನ ಗ್ರಾಹಕರಿಗೆ ಈಗಾಗಲೇ ಜಿಯೋ ಲಾಂಚ್ ಸಂದರ್ಭದಲ್ಲಿ ಪ್ರಮೋಷನ್‌ಗಾಗಿ ಮೂರು ತಿಂಗಳ ಉಚಿತ ಸೇವೆಯನ್ನು ನೀಡಿದ್ದ ಮಾದರಿಯಲ್ಲೇ ಜಿಯೋ ಡಿಟಿಹೆಚ್ ಲಾಂಚ್ ವೇಳೆಯಲ್ಲಿಯೂ ಉಚಿತ ಸೇವೆಯನ್ನು ನೀಡಲು ಜಿಯೋ ಚಿಂತನೆ ನಡೆಸಿದ್ದು, ಜಿಯೋ ಸೆಟಪ್‌ ಬಾಕ್ಸ್ ಕೊಳ್ಳಲು ಗ್ರಾಹಕರು ಹೆಚ್ಚಿನ ಬೆಲೆ ನೀಡಬೇಕಾಗಿರುವುದರಿಂದ ಮೊದಲ 6 ತಿಂಗಳು ಉಚಿತ ಸೇವೆಯನ್ನು ನೀಡಲಿದೆ ಎನ್ನಲಾಗಿದೆ.

ಜಿಯೋ ಸೆಟ್‌ ಟಾಪ್‌ ಬಾಕ್ಸ್‌ನ ಚಿತ್ರಗಳು ಈಗಾಗಲೇ ಮಾಧ್ಯಮಗಳಿಗೆ ಸೋರಿ ಹೋಗಿವೆ. ಜಿಯೋ ಸ್ಯಾಟಲೈಟ್‌ ಸೇವೆಯು 50ಕ್ಕೂ ಹೆಚ್ಚು ಎಚ್‌ಡಿ ಚ್ಯಾನಲ್‌ಗ‌ಳು ಸೇರಿದಂತೆ 300ಕ್ಕೂ ಹೆಚ್ಚು ಚ್ಯಾನಲ್‌ಗ‌ಳನ್ನು ಒಳಗೊಂಡಿರುತ್ತವೆ ಎನ್ನಲಾಗಿದೆ.

ನೋಡಿ ಇಂತಹ ಸೇವೆ ಬಂದ್ರೆ ಯಾರು ಬೇಡ ಅಂತಾರೆ ಹೇಳಿ ಆದ್ರೆ ಹೀಗಿರುವ ಬೇರೆ ನೆಟ್ ವರ್ಕ್ ಸೇವೆಗಳ ಸ್ಥಿತಿ ಏನ್ ಆಗುತ್ತೆ ಅಂತ ಕಾದುನೋಡಬೇಕು.