ರಿಲಯನ್ಸ್ ಜಿಯೋ ಗ್ರಾಹಕರಿಗೊಂದು ಸಿಹಿ ಸುದ್ದಿ!!! 2017 ಮಾರ್ಚ್ ಅಂತ್ಯಕ್ಕೆ ಉಚಿತ ಕರೆ ಆಫರ್ ಅಂತ್ಯವಾಗುವುದಿಲ್ಲ…!

0
2099

ಮಾರುಕಟ್ಟೆಗೆ ಲಗ್ಗೆ ಇಟ್ಟಾಗಿನಿಂದಲೂ ಧೂಳೆಬ್ಬಿಸಿರುವ ರಿಲಯನ್ಸ್ 4ಜಿ ಜಿಯೋ ಕಂಪನಿಯ ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಲು ಮುಂದಾಗಿದೆ. ಡಿಸೆಂಬರ್ 312016 ಕ್ಕೆ ಅಂತ್ಯವಾಗಬೇಕಿದ್ದ ವೆಲಕಂ ಆಫರ್ ಮಾರ್ಚ್ 2017ರವರೆಗೆ ವಿಸ್ತರಿಸಲಾಗಿತ್ತು. ಈಗ ರಿಲಯನ್ಸ್ Jio ಇನ್ಫೋಕಾಂ ಚಂದಾದಾರರು ಮತ್ತೊಂದು ಮೂರು ತಿಂಗಳು, ಉಚಿತ ಧ್ವನಿ ಕರೆಗಳನ್ನು ಸೇರಿದಂತೆ ಅತ್ಯಲ್ಪ ದರದಲ್ಲಿ ಡೇಟಾ ಸೇವೆಗಳನ್ನು ನೀಡಲು ಮುಂದಾಗಿದೆ.

ವಾಣಿಜ್ಯ ಸೇವೆಗಳು ಕಳೆದ ವರ್ಷ ಸೆಪ್ಟೆಂಬರ್ 5 ರಂದು ಪ್ರಾರಂಭಿಸಲಾಯಿತು. ಇದರಿಂದಾಗಿ ವಾಟ್ಸಾಪ್, ಫೇಸ್‎ಬುಕ್ ಅನ್ನು ಹಿಂದಿಕ್ಕಿದ ರಿಲಯನ್ಸ್ ಜಿಯೋ ಅತೀ ಕಡಿಮೆ ಸಮಯದಲ್ಲಿ ಹೆಚ್ಚು ಚಂದಾದಾರರು ಹೊಂದಿ ಟೆಲಿಕಾಮ್ ಕ್ಷೇತ್ರದಲ್ಲಿ ವಿಶ್ವದಾಖಲೆಯನ್ನು ಮಾಡಿತ್ತು. ಮುಖೇಶ್ ಅಂಬಾನಿ ಅವರ ರಿಲಯನ್ಸ್ ಜಿಯೋ ಅತ್ಯಂತ ಕಡಿಮೆ ಸಮಯದಲ್ಲಿ 16 ಮಿಲಿಯನ್ ಕಿಂತ ಹೆಚ್ಚು ಗ್ರಾಹಕರನ್ನು ಸಂಪಾದಿಸಿತ್ತು.

ಮೂಲಗಳ ಪ್ರಕಾರ ಮಾರ್ಚ್ 31ರ ನಂತರ ಡೇಟಾಗೆ 100 ರುಪಾಯಿ ಹಾಗೂ ಉಚಿತ ವಾಯ್ಸ್ ಕಾಲ್ ಸೇವೆ ನೀಡಲು ಕಂಪನಿ ನಿರ್ಧರಿಸಿದ್ದು, ಈ ಮೂಲಕ ವರಮಾನ ಸಂಗ್ರಹಿಸಲು ಆರಂಭಿಸಲಾಗುತ್ತಿದೆ ಎಂದು ತಿಳಿಸಿವೆ.

ಜಿಯೋ ಕಾರ್ಯತಂತ್ರ ಮತ್ತು ಯೋಜನೆ ಮುಖ್ಯಸ್ಥ ಅನ್ಶುಮಾನ್ ಠಾಕೂರ್ ಅವರು “ಕಳೆದ ನಾಲ್ಕು ತಿಂಗಳಲ್ಲಿ ಜಿಯೋದ ಉಚಿತ ಇಂಟರ್ನೆಟ್ ಪ್ಯಾಕೇಜ್ ಮತ್ತು ವಾಯ್ಸ್ ಕಾಲ್ ಸೇವೆ ಸುಮಾರು 72 .4 ಮಿಲಿಯನ್ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ದಿನಂ ಪ್ರತಿ ಲಕ್ಷಕ್ಕೂ ಹೆಚ್ಚು ಮಂದಿ ಜಿಯೋ ಗ್ರಾಹಕರಾಗುತ್ತಿದ್ದಾರೆ” ಎಂದು ಇತ್ತೀಚಿಗೆ ತಿಳಿಸಿದ್ದರು.