ಜಿಯೋ ಗ್ರಾಹಕರಿಗೆ ಶಾಕ್; ಇಂದಿನಿಂದ ಎಲ್ಲ ಜಿಯೋ ಕರೆ ಉಚಿತವಲ್ಲ ಏನಿದು ಜಿಯೋ ಗೊಂದಲ ಇಲ್ಲಿದೆ ನೋಡಿ ಮಾಹಿತಿ.!

0
386

ಮೊಬೈಲ್ ಸೇವೆಯಲ್ಲಿ ಜಿಯೋ ಕ್ರಾಂತಿಯನ್ನೇ ಮಾಡಿದ್ದು, ಪ್ರತಿಯೊಬ್ಬರಿಗೂ ಅವಶ್ಯಕ ಎನ್ನುವ ಹಾಗೇ ಪ್ರತ್ಯೇಕ ಜಿಯೋ ಸಿಮ್ ಖರೀದಿಸಿದ್ದಾರೆ, ಅದರಂತೆ ಒಂದಿಲ್ಲದಂತೆ ಒಂದು ಆಫರ್ ಕೊಟ್ಟು ಜನರಿಗೆ ಹತ್ತಿರವಾದ ಜಿಯೋ ಈಗ ಒಂದು ಕ್ಯಾತೆ ತೆಗೆದಿದ್ದು ಜನರಿಗೆ ಗೊಂದಲ ಮೂಡಿಸಿದ್ದು, ಜಿಯೋ ಬೇರೆ ಟೆಲಿಕಾಂ ಕಂಪನಿಗಳಿಗೆ ಹೊರಹೋಗುವ ಎಲ್ಲ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ದರ ವಿಧಿಸಲಾಗುವುದು ಎಂದು ಪ್ರಕಟಿಸಿದೆ. ಅದರಂತೆ ತನ್ನ ಗ್ರಾಹಕರಿಗೆ ಐಯುಸಿ ದರ ವಿಧಿಸುವುದು ಅನಿವಾರ್ಯ ಎಂದು ಜಿಯೋ ಹೇಳಿಕೊಂಡಿದೆ.

Also read: ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆಯಾಗಿ ಕೇಂದ್ರದಿಂದ ಭರ್ಜರಿ ಗಿಫ್ಟ್; ತುಟ್ಟಿ ಭತ್ಯೆ ಮೂರು ಪಟ್ಟು ಹೆಚ್ಚಳ.!

ಹೌದು ಜಿಯೋ ಬೇರೆ ಟೆಲಿಕಾಂ ಕಂಪನಿಗಳಿಗೆ ಹೊರಹೋಗುವ ಎಲ್ಲ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ದರ ವಿಧಿಸಲಾಗುವುದು ಎಂದು ಪ್ರಕಟಿಸಿದೆ. ಇಲ್ಲಿಯವರೆಗೆ ಜಿಯೋ ಇಂಟರ್ ಕನೆಕ್ಟ್ ಯೂಸೇಜ್ ಚಾರ್ಜ್ (ಐಯುಸಿ) ವಿಧಿಸುತ್ತಿರಲಿಲ್ಲ. ಆದರೆ ಈಗ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ನಿಗದಿ ಪಡಿಸಿದಂತೆ ಐಯುಸಿ ವಿಧಿಸಲು ಜಿಯೋ ಮುಂದಾಗುತ್ತಿದೆ. ಐಯುಸಿಗಾಗಿ ಈಗ ಜಿಯೋ ಟಾಪ್ ಅಪ್ ಪ್ಲಾನ್ ಪ್ರಕಟಿಸಿದೆ. ಬೇರೆ ಕಂಪನಿಗಳ ನಂಬರ್ ಗಳ ಕರೆಗಳಿಗೆ ಮಾತ್ರ ದರ ವಿಧಿಸಲಾಗಿದ್ದು ಜಿಯೋದಿಂದ ಜಿಯೋ ನಂಬರಿಗೆ ಹೋಗುವ ಕರೆಗಳು ಎಂದಿನಂತೆ ಉಚಿತವಾಗಿ ಇರಲಿದೆ. ಇದರ ಜೊತೆ ಡೇಟಾ ಬಳಸಿಕೊಂಡು ಮಾಡುವ ವಾಟ್ಸಪ್ ಕರೆ, ವಿಡಿಯೋ ಕರೆಗಳಿಗೆ ಯಾವುದೇ ದರ ಇಲ್ಲ.

ಏನಿದು ಐಯುಸಿ?:

ಐಯುಸಿ ಎಂದರೆ ಇಂಟರ್​ ಕನೆಕ್ಟ್ ಯೂಸೇಜ್ ಚಾರ್ಜ್. ಬೇರೆ ನೆಟ್ವರ್ಕ್​ಗೆ ಮಾಡುವ ಕರೆಗೆ ವಿಧಿಸಲಾಗುವ ದರ ಇದಾಗಿದೆ. ಅಂದರೆ, ಜಿಯೋ ನೆಟ್ವರ್ಕ್​ನಿಂದ ಏರ್​ಟೆಲ್​ನಂತಹ ಬೇರೆ ನೆಟ್ವರ್ಕ್​ಗೆ ಗ್ರಾಹಕರು ಕರೆ ಮಾಡಿದಾಗ, ಆ ನೆಟ್ವರ್ಕ್​ಗೆ ಜಿಯೋ ಸಂಸ್ಥೆ ಇಂತಿಷ್ಟು ದರ ಪಾವತಿಸಬೇಕಾಗುತ್ತದೆ. ಈ ದರವೇ ಐಯುಸಿ ಆಗಿದೆ. ಟ್ರಾಯ್ ಸಂಸ್ಥೆಯೇ ಈ ಐಯುಸಿ ದರವನ್ನು ನಿಗದಿ ಮಾಡಿದೆ. 2017ಕ್ಕಿಂತ ಮುಂಚೆ 14 ಪೈಸೆ ಇದ್ದ ಐಯುಸಿ ದರವನ್ನು ಜಿಯೋ 6 ಪೈಸೆಗೆ ಇಳಿಕೆ ಮಾಡಿದೆ.

Also read: ಮಹಿಳೆಯರ ನೆಚ್ಚಿನ ಜಾನ್ಸನ್ & ಜಾನ್ಸನ್ ಕಂಪೆನಿಗೆ 8 ಬಿಲಿಯನ್ ಡಾಲರ್ ಪರಿಹಾರ ನೀಡಲು ಕೋರ್ಟ್ ಆದೇಶ; ಯಾವುದಕ್ಕಾಗಿ ಇಷ್ಟೊಂದು ದಂಡ??

ಏರ್​ಟೆಲ್, ವೊಡಾಫೋನ್ ಸಂಸ್ಥೆಗಳು ಐಯುಸಿ ದರವನ್ನು ತನ್ನ ಗ್ರಾಹಕರಿಂದಲೇ ಭರಿಸುತ್ತದೆ. ಜಿಯೋ ಸಂಸ್ಥೆ ಇದೂವರೆಗೂ ಈ ದರವನ್ನು ತಾನೇ ಭರಿಸುತ್ತಿತ್ತು. ಕಳೆದ ಮೂರು ವರ್ಷದಲ್ಲಿ ಜಿಯೋ ಸಂಸ್ಥೆ ಬರೋಬ್ಬರಿ 13.5 ಸಾವಿರ ಕೋಟಿ ರೂ ಐಯುಸಿ ಮೊತ್ತವನ್ನು ಇತರ ಟೆಲಿಕಾಂ ಆಪರೇಟರುಗಳಿಗೆ ಪಾವತಿ ಮಾಡಿದೆ. ಈ ಹಿನ್ನೆಲೆಯಲ್ಲಿ ಇನ್ಮುಂದಿನ ವೆಚ್ಚವನ್ನು ತನ್ನ ಗ್ರಾಹಕರ ಮೇಲೆ ಹಾಕುವುದು ಅನಿವಾರ್ಯ ಎಂಬುದು ಜಿಯೋ ಹೇಳಿಕೆ.

ಎಷ್ಟೊಂದು ಟಾಪ್ ಅಪ್ ಹಾಕಬೇಕು?

source: img.etimg.com

Also read: ವಾಹನ ಮಾಲೀಕರೆ ಎಚ್ಚರ; ಬೆಂಗಳೂರಿಗೆ ಬಂದಿದ್ದೆ ಯೂಟ್ಯೂಬ್ ಕಾರು ಕಳ್ಳರ ಗ್ಯಾಂಗ್, ಐದೇ ನಿಮಿಷದಲ್ಲಿ ನಿಮ್ಮ ಕಾರ್ ಕದಿಯುತ್ತಾರೆ ಎಚ್ಚರ.!

ಜಿಯೋ 10 ರೂ. ನಿಂದ ಆರಂಭಿಸಿ 1000 ರೂ. ಟಾಪ್ ಅಪ್ ಪರಿಚಯಿಸಿದೆ. ಈ ಟಾಪ್ ಅಪ್‍ಗಳು ಎಲ್ಲ ಡೇಟಾ ಪ್ಲಾನ್‍ಗಳಿಗೆ ಅನ್ವಯವಾಗಲಿದೆ. ಅಂದರೆ ಒಂದೊಂದು ಡೇಟಾ ಪ್ಲಾನ್ ಗಳಿಗೆ ಪ್ರತ್ಯೇಕವಾಗಿ ಯಾವುದೇ ಟಾಪ್ ಅಪ್ ಇಲ್ಲ. 98 ರೂ.ನಿಂದ ಹಿಡಿದು 9999 ರೂ. ವರೆಗಿನ ಎಲ್ಲ ಡೇಟಾ ಪ್ಲಾನ್ ಗಳಿಗೆ ಒಂದೇ ರೀತಿಯ ಟಾಪ್ ಅಪ್ ದರ ನಿಗದಿಯಾಗಿದೆ. ಟಾಪ್ ಅಪ್ ಹಾಕಿದ್ದಕ್ಕೆ ಹೆಚ್ಚುವರಿ ಡೇಟಾ(10 ರೂ.ಗೆ 1 ಜಿಬಿ) ನೀಡುವುದಾಗಿ ಜಿಯೋ ಹೇಳಿದೆ. ಅದಕ್ಕೂ ಬೆಲೆ ನಿಗದಿ ಪಡಿಸಿದ್ದು 10 ರೂ. ಟಾಪ್ ಅಪ್ ಹಾಕಿಸಿದರೆ 1 ಜಿಬಿ ಡೇಟಾ ಸಿಕ್ಕರೆ 1000 ರೂ. ಹಾಕಿದರೆ 100 ಜಿಬಿ ಡೇಟಾ ಸಿಗಲಿದೆ. 10 ರೂ.ಗೆ 124 ನಿಮಿಷ, 20 ರೂ. ಗೆ 249 ನಿಮಿಷ, 50 ರೂ.ಗೆ 656 ನಿಮಿಷ, 100 ರೂ.ಗೆ 1362 ನಿಮಿಷ, 500 ರೂ.ಗೆ 7,012 ನಿಮಿಷ, 1000 ರೂ.ಗೆ 14,074 ನಿಮಿಷ ಕರೆಯನ್ನು ಮಾಡಬಹುದಾಗಿದೆ.