೧೫೦೦ ರೂಗಳ ಜಿಯೋ ಫೋನ್ ಖರೀದಿ ಮಾಡಬೇಕೆಂದಿದ್ದರೆ ಅದನ್ನು ಹೇಗೆ ಪಡೆಯೋದು ಅಂತ ಇಲ್ಲಿ ಓದಿ..

0
1804

ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಕಾರಿ ಆಫರ್ ಗಳನ್ನು ಪರಿಚಯಿಸಿದ್ದ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋ ಮತ್ತೊಂದು ನೂತನ ಆಫರ್ ಅನ್ನು ಇದೆ ಜೂಲೈ ೨೧ ರಂದು ಮುಂಬೈ ನಲ್ಲಿ ನಡೆದ 40 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಿಸಿದ್ದರು. 500 ರೂಪಾಯಿಗೆ ಸ್ಮಾರ್ಟ್ ಫೋನ್, 1,500 ರೂಪಾಯಿಗಳಿಗೆ 4 ಜಿ ಸ್ಮಾರ್ಟ್ ಫೋನ್ ನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಹಾಗಾದರೆ, ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಹುಟ್ಟಿಸಲಿರುವ ಫೋನ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಜಿಯೋ-ನ ಹೊಸ ಫೋನ್-ನ ಬಗ್ಗೆ ನಿಮಗೆ ನಾನಾ ಥರದ ಗೊಂದಲವಿರುತ್ತದೆ, ಅದು ನಿಜವಾಗಿಯೂ ಉಚಿತಾನ?? ವಾಟ್ಸಪ್ಪ್ ಇದ್ಯಾ? ಫೇಸ್ಬುಕ್ ಇದ್ಯಾ? ಯೂಟ್ಯೂಬ್ ಇದ್ಯಾ?? ಅದು ಎಲ್ಲಿ ಸಿಗುತ್ತೆ, ಯಾವಾಗ ಸಿಗುತ್ತೆ?? ಇಲ್ಲಿದೆ ಫುಲ್ ಡೀಟೇಲ್ಸ್..

ಎಷ್ಟು ದುಡ್ಡಿಗೆ ನಿಮಗೆ ಈ ಫೋನ್ ಸಿಗುತ್ತದೆ?
ಈ ಉಚಿತ ಫೋನ್ ಪಡೆದುಕೊಳ್ಳಲು ಮೊದಲು ರೂ.1,500 ಡೆಪಾಸಿಟ್ ಇಡಬೇಕು. ಇದು 3ವರ್ಷದ ನಂತರ ಮತ್ತೆ ನಿಮ್ಮ ಕೈ ಸೇರಲಿದೆ. ಇದಕ್ಕೆ ಕೆಲವು ನಿಯಮಗಳು ಅನ್ವಯವಾಗುತ್ತದೆ. ಮೂರು ವರ್ಷದ ನಂತರ ನೀವು ಪಡೆದುಕೊಂಡ ಫೋನ್ ಹಿಂದಿರುಗಿಸುವಾಗ ಅದು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿರಬೇಕು. ಹಾಗು ನೀವು ಬಳಸುವ ಫೋನ್ ನಲ್ಲಿ ಪ್ರತಿ ತಿಂಗಳು ಕನಿಷ್ಠ ೧೫೩ ಪ್ಲಾನ್ ಹಾಕಿಸಿಕೊಂಡಿರಬೇಕು.

source: img.etimg.com

ಪ್ರಿ-ಬುಕಿಂಗ್ ಮಾಡಬೇಕಾ?
ಈ ಉಚಿತ ಫೋನ್ ಪಡೆದುಕೊಳ್ಳಲು ೨೪ ಆಗಸ್ಟ್-ನಿಂದ ನೀವು ಜಿಯೋಗೆ ೧೫೦೦ರು ಪಾವತಿಸಬೇಕು, ನಂತರ ಮೊದಲ ಆದ್ಯತೆ ಯಂತೆ ಮೇರೆಗೆ ಸೆಪ್ಟೆಂಬರ್ ೧ ರಿಂದ ನಿಮ್ಮ ಕೈ ಸೇರಲಿದೆ.

source: govtjob2017.com

ಹಣ ಎಲ್ಲಿ ಪಾವತಿಸಬೇಕು?
ಮೈ ಜಿಯೋ app ಅಥವಾ www.jio.com ನಲ್ಲಿ ಆನ್ಲೈನ್ ಮೂಲಕ ಪಾವತಿಸಬಹುದು.. ಅಥವಾ ನಿಮ್ಮ ಹತ್ತಿರದ ಜಿಯೋ ಸ್ಟೋರ್-ನಲ್ಲಿ ಆಗಸ್ಟ್ ೨೪ರಿಂದ ಪಾವತಿಸಬಹುದು..

೧೫೩ ಪ್ಲಾನ್-ನಲ್ಲಿ ಏನೆಲ್ಲಾ ಸಿಗುತ್ತೆ?
ಈ ಪ್ಲಾನ್ ಕೇವಲ ಹೊಸ ಜಿಯೋ ಫೋನ್-ಗಳಿಗೆ ಮಾತ್ರ ಸೀಮಿತವಾಗಿದೆ. ಅನ್ಲಿಮಿಟೆಡ್ ಡೇಟಾ – ೪ಜಿ ನಲ್ಲಿ ದಿನಕ್ಕೆ ೫೦೦ ಎಂ.ಬಿ. ಜಿಯೋ app ಗಳನ್ನೂ ಬಳಸಬಹುದು. ಅನಿಯಮಿತ ಕರೆಗಳು – ಭಾರತದ ಯಾವುದೇ landline ಅಥವಾ ಮೊಬೈಲ್-ಗೆ. ಇದಕ್ಕಾಗಿ ತಿಂಗಳಿಗೆ ರೂ.೧೫೩ ನಿಗದಿ ಮಾಡುತ್ತಿದೆ. ಅದುವೇ ಜಿಯೋ ಧನ್ ಧನಾ ಧನ್ ಆಫರ್ ಆಗಿರಲಿದೆ.

source: i.gadgets360cdn.com

ಈ ಮೊಬೈಲ್-ನಲ್ಲಿ hotspot ಸೇವೆ ಇರುವುದಿಲ್ಲ.
ಸದ್ಯಕ್ಕೆ ಈ ಮೊಬೈಲ್-ನಿಂದ ಬೇರೆ ಸಾಧನಗಳಿಗೆ ಇಂಟರ್ನೆಟ್ ಕೊಡುವ ಸಾಮರ್ಥ್ಯವಿರೋದಿಲ್ಲ. ಮುಂದಿನ ಆವೃತ್ತಿನಲ್ಲಿ hotspot ಅವಕಾಶ ಒದಗಿಸುವ ಸಾಧ್ಯತೆ ಇದೆ.

source: photobucket.com

ಈ ಮೊಬೈಲ್-ನಲ್ಲಿ ಯಾವ ಯಾವ ಸೌಲಭ್ಯಗಳಿವೆ:
ಇದು Android ಫೋನ್ ಅಲ್ಲ, ಬದಲಿಗೆ FireFox OS ಅನ್ನು ಬಳಸುತ್ತದೆ. ಸದ್ಯಕ್ಕೆ facebook, youtube ವೀಕ್ಷಿಸುವ ಸೌಲಭ್ಯವಿದೆ. ಕೆಲವೇ ದಿನಗಳಲ್ಲಿ Whatsapp ಬರುವ ನಿರೀಕ್ಷಣೆ ಇದೆ.

source: jagonews24.com

Voice Assistant ಸೌಲಭ್ಯ:
ನಮ್ಮ ಭಾರತದಲ್ಲಿ ಅನೇಕ ಭಾಷೆಗಳಿದ್ದು ಅದಕ್ಕಾಗಿ 22 ಭಾಷೆಗಳಲ್ಲಿ ಈ ಫೋನ್ ಸಪೋರ್ಟ್ ಮಾಡಲಿದೆ ಅಂದರೆ ನೀವು ನಿಮ್ಮ ಭಾಷೆಯಲ್ಲಿ ಮಾತಾಡಿದರೆ ಸಾಕು ಕೇವಲ ನಿಮ್ಮ ಮಾತಿನಿಂದಲೇ ಈ ಫೋನ್-ಅನ್ನು ಉಪಯೋಗಿಸಬಹುದು.

source: techbes.com

ಟಿ.ವಿ.ಗೆ ಕನೆಕ್ಟ್ ಮಾಡುವ ವಿಧಾನ:
ಈ ಫೋನ್-ನ ಜೊತೆ ನೀವು ಇನ್ನೊಂದು ಉಪಕರಣವನ್ನು ಖರೀದಿಸಬೇಕು, ಇದು ನಿಮ್ಮ ಫೋನ್-ಅನ್ನು ಟಿ.ವಿ.ಗೆ Connect ಮಾಡುತ್ತೆ.. ಇದರ ಜೊತೆಗೆ ೩೦೯ರು ಪ್ಲಾನ್-ನ ತೊಗೊಂಡ್ರೆ, ದಿನಕ್ಕೆ ೩-೪ಘಂಟೆ ನೀವು ಜಿಯೋ app ನಿಂದ ವಿಡಿಯೋಗಳನ್ನು ನಿಮ್ಮ ಟಿ.ವಿ.ಯಲ್ಲಿ ವೀಕ್ಷಣೆ ಮಾಡಬಹುದು.

source: cmeimg-a.akamaihd.net

ಈ ಫೋನ್ ಯಾರಿಗೆ ಉಪಯುಕ್ತ?
ಆಗಲೇ ಸ್ಮಾರ್ಟ್-ಫೋನ್ ಉಪಯೋಗಿಸುತ್ತಿರುವವರಿಗೆ ಇದು ಖಂಡಿತ ಅಲ್ಲ. ಯಾರು ಇನ್ನು ಹಳೆ ಕಾಲದ ಇಂಟರ್ನೆಟ್ ಇಲ್ಲದಿರೋ ಫೋನ್-ಅನ್ನು ಉಪಯೋಗಿಸುತ್ತಿದ್ದರೋ ಅಂಥವರಿಗೆ. ಭಾರತದಲ್ಲಿ ಸದ್ಯ ಇಂಟರ್ನೆಟ್ ಇಲ್ಲದಿರೋ ಫೋನ್-ಗಳ ಸಂಖ್ಯೆ ೫೦ ಕೋಟಿಗೂ ಹೆಚ್ಚು.