ಜಿಯೋ ಸಿಮ್ ಬಳಕೆದಾರರಿಗೆ ಹೊಸ ವರ್ಷದ ಬಂಪರ್ ಆಫರ್

0
1860

ಹೊಸ ಜಿಯೋ ಸಿಮ್ ಖರೀದಿದಾರರಿಗೂ ಬಂಪರ್ ಆಫರ್ ನೀಡಲಾಗಿದ್ದು, ಜನವರಿ 1 ರಿಂದ ಮಾರ್ಚ್ 31ರವರೆಗೆ ಉಚಿತ ಸೇವೆ ಒದಗಿಸುವ ನ್ಯೂ ಇಯರ್ ವೆಲ್ ಕಮ್ ಆಫರ್ ನೀಡಲಾಗಿದೆ.

ಡಿಸೆಂಬರ್‌ 31ರ ವರೆಗೆ ಘೋಷಿಸಲಾಗಿದ್ದ ವೆಲ್‌ಕಮ್‌ ಆಫರ್‌ ಅನ್ನು ಮತ್ತೆ ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ. ಅಂದರೆ ಜಿಯೋ ಗ್ರಾಹಕರು ಮಾರ್ಚ್‌ 31ರ ವರೆಗೆ ಉಚಿತ ಕರೆ, ಇಂಟರ್‌ನೆಟ್‌ ಸೌಲಭ್ಯಗಳನ್ನು ಪಡೆಯಲಿದ್ದಾರೆ. ಡಿಸೆಂಬರ್‌ 3ರ ನಂತರ ಸಿಮ್‌ ಖರೀದಿಸುವವರಿಗೂ ಕೂಡಾ ಮಾರ್ಚ್‌ 31ರ ವರೆಗೆ ಉಚಿತ ಸೌಲಭ್ಯಗಳು ದೊರೆಯಲಿವೆ. ದಿನಕ್ಕೆ ಒಂದು ಜಿಬಿ ಮಾತ್ರ ಬಳಕೆ ಮಾಡಬಹುದಾಗಿಗೆ.

ಇದರ ಜೊತೆಗೆ ವ್ಯಾಪಾರಿಗಳಿಗಾಗಿ ಜಿಯೋ ಡಿಜಿಟಲ್ ಮನಿ ಟ್ರಾನ್ಸ್`ಫರ್ ಸಲ್ಯೂಶನ್ ಅನ್ನ ಪರಿಚಯಿಸುವುದಾಗಿ ಅಂಬಾನಿ ಘೋಷಿಸಿದ್ದಾರೆ. ಈ ಅಪ್ಲಿಕೇಶನ್ ಮೂಲಕ್ ವ್ಯಾಪಾರಸ್ಥರು ಹಣ ಪಾವತಿಸಬಹುದು ಮತ್ತು ಹಣವನ್ನ ಪಡೆಯಬಹುದಾಗಿದೆ. ಕಳೆದ 3 ತಿಂಗಳಲ್ಲಿ ಜಿಯೋ ಫೇಸ್ಬುಕ್, ವಾಟ್ಸಾಪ್ ಮತ್ತು ಸ್ಕೈಪ್`ಗಳನ್ನ ಮೀರಿ ಬೆಳೆದಿದೆ ಎಂದಿದ್ದಾರೆ.

ಇನ್ನು ಪೋರ್ಟೆಬಿಲಿಟಿ ಗ್ರಾಹಕರಿಗೆ ಜಿಯೋ ಸಿಮ್‌ ಇದೀಗ ಸಂಪೂರ್ಣ ಸಹಾಯಕವಾಗಲಿದೆ. ಪೋರ್ಟೆಬಿಲಿಟಿ ಸೇರಿದಂತೆ ಎಲ್ಲ ಗ್ರಾಹಕರು ತಮ್ಮ ಹಳೆಯ ನಂಬರ್‌ಗಳನ್ನು ಜಿಯೋಗೆ ಪೋರ್ಟ್‌ ಆಗುವ ಮೂಲಕ ಪಡೆದುಕೊಳ್ಳಬಹುದು ಎಂದು ವಿವರಿಸಿದ್ದಾರೆ.