ಜಿಯೋದಿಂದ IPLಗಾಗಿ ವಿಶೇಷ ಆಫರ್: ಕೇವಲ 2.50 ರೂಪಾಯಿಗೆ 4G ಡಾಟಾ!! ತಪ್ಪದೇ ಇಂದೇ ರಿಚಾರ್ಜ್ ಮಾಡಿ!!

0
717

ಕಲ್ಲೇಶ್​​: ನಮಸ್ಕಾರ ಗೆಳೆಯ ಹೇಗಿದ್ದಿಯಾ
ಮಲ್ಲೇಶ್​: ಸೂಪರ್​ ದೋಸ್ತ್​​
ಕಲ್ಲೇಶ್​: ಎಲ್ಲಿಗೆ ಪಯಾಣ
ಮಲ್ಲೇಶ್​​: ಕೊಂಚ ಕೆಲಸದ ನಿಮಿತ್ಯ ನಾನು ಬೇರೆ ರಾಜ್ಯಕ್ಕೆ ಹೊರಟಿದ್ದೇನೆ.
ಕಲ್ಲೇಶ್​​: ಇಷ್ಟು ಏಕೆ ಓಡ್ತಾ ಇದ್ದೀಯಾ.. ಮನೆಯಲ್ಲಿ ಏನಾದ್ರು ಇಂಪಾರ್ಟಂಟ್​ ಕೆಲಸಾನಾ
ಮಲ್ಲೇಶ್​: ಇಲ್ಲಾ ಅಪ್ಪ, ಐಪಿಎಲ್​ ಆರಂಭವಾಗುತ್ತಲ್ಲಾ ಅದಕ್ಕೆ ಆರಂಭಕ್ಕೂ ಮುನ್ನ ಮನೆ ಸೇರಿಕೊಳ್ಳುವ ಪ್ಲಾನ್​
ಕಲ್ಲೇಶ್​: ಈಗೇನೋ ಮನೆಯಲ್ಲಿ ಇದ್ದಿಯಾ ನೋಡ್ತಿಯಾ ನಾಳೆ ಹೇಗೆ ನೋಡ್ತಿಯಾ
ಮಲ್ಲೇಶ್​: ಅದಕ್ಕೆಲ್ಲಾ ನಾನು ತಲೆನೇ ಕೆಡಿಸಿಕೊಳ್ಳೋದಿಲ್ಲ, ಜಿಯೋದಲ್ಲಿ ನೋಡ್ತೀನಿ
ಕಲ್ಲೇಶ್​: ನೀನು ಟಿವಿ ಆನ್​ ಮಾಡಿದ್ರೆ ಸಾಕ್​ ಇಂಟ್ರನೆಟ್​ ಖಾಲಿಯಾಗುತ್ತೆ
ಮಲ್ಲೇಶ್​: ಹಾಗಿದ್ರೆ ನಿನಗೆ ಹೊಸ ಆಫರ್​ ಬಗ್ಗೆ ತಿಳಿಯದು ಅನಿಸುತ್ತದೆ.
ಕಲ್ಲೇಶ್​: ಏನಪ್ಪಾ ಅದು
ಮಲ್ಲೇಶ್​: ಹೇಳ್ತಿನಿ ಕೇಳು

ವಿಶ್ವದಲ್ಲಿ ತನ್ನದೇ ಆದ ವಿಶೇಷ ಆಫರ್​ಗಳ ಮೂಲಕ ಗ್ರಾಹಕರನ್ನು ಸೆಳಯುತ್ತಿರುವ ಸಂಸ್ಥೆ ಜಿಯೋ. ವಿಶ್ವದಲ್ಲಿ ಅತಿ ಹೆಚ್ಚು ಜನ ಬಳಕೆ ಮಾಡುವ ಸಿಮ್​ ಎಂಬ ಹೆಗ್ಗಳಿಕೆ ಈ ಸಿಮ್​​ನದ್ದು. ಈಗ ವಿಶ್ವವೆ ಜಿಯೋ ಮಯ ಆಗಿದೆ. ಈಗ ಜಿಯೋದವರು ಐಪಿಎಲ್​ಗಾಗಿ ಹೊಸ ಆಫರ್​ ಬಿಟ್ಟಿದ್ದಾರೆ.

Prepartion of opening ceremony ahead of first match of IPL 2018 between Mumbai Indian and Chennai Super Kings on Saturday. (Hrithik Roshan along with Jacqueline Fernandez and Prabhu Deva parctising for IPL 2018 opening ceremony in Mumbai. Varun Dhavan would also be part of the event.) Express Photo By Dilip Kagda
06 April 2018

ಭಾರತದಲ್ಲಿ ಎಪ್ರಿಲ್​ 7 ರಿಂದ ಮೇ 27 ರವರೆಗೆ ಐಪಿಎಲ್​ ಜ್ವರ. ಇದನ್ನು ಮನಗೊಂಡ ಜಿಯೋ ಕಂಪನಿ ಗ್ರಾಹಕರಿಗೆ ಉತ್ತಮ ಗುಣ ಮಟ್ಟದ ಸೇವೆಯನ್ನು ನೀಡಲು ಪ್ಲಾನ್​ ಮಾಡಿಕೊಂಡಿದೆ. ಅದ್ರಂತೆ ಕ್ರಿಕೆಟ್‌ ಅಭಿಮಾನಿಗಳಿಗೆ ಭರ್ಜರಿ ಡಾಟಾ ಪ್ಲಾನ್‌ ಘೋಷಿಸಿದೆ.ಕೇವಲ 251 ರೂ.ಗೆ ಜಿಯೋ 102 ಜಿಬಿ ಡಾಟಾ ನೀಡಲು ನಿರ್ಧರಿಸಿದೆ. ಇದ್ರಂತೆ ಮುಂದಿನ 51 ದಿನಗಳ ಪ್ರತಿದಿನ 2 ಜಿ ಬಿ ಡಾಟ್​ ನೀಡಲು ಕಂಪನಿ ನಿರ್ಧದಿರಿಸಿದೆ. ಕ್ರಿಕೆಟ್ ಅಭಿಮಾನಿಗಳಿಗೆ ಯಾವುದೇ ಪಂದ್ಯದ ರೋಚಕ ಕ್ಷಣ ಮಿಸ್​ ಆಗಬಾರದು ಎಂದು ಜಿಯೋ ಈ ನಿರ್ಧಾರ ಕೈಗೊಂಡಿದೆ. ಜಿಯೋ ಗ್ರಾಹಕರಿಗೆ ಕೇವಲ 2.50 ರೂ.ಗೆ 1ಜಿಬಿ 4ಜಿ ಸ್ಪಿಡ್‌ ಡಾಟಾ ಕೈಗೆಟುಕಲಿದೆ.
ಈ ಡಾಟ್​ ಪ್ಯಾಕ್​​ನ ವಿಶಿಷ್ಠ ಏನು ಗೊತ್ತಾ ಈ ಡಾಟಾ ಪ್ಯಾಕ್​ನಲ್ಲಿ ನೀವು ಐಪಿಎಲ್​ ಪಂದ್ಯಗಳನ್ನು ಮಾತ್ರ ವೀಕ್ಷಿಸಬಹುದು. ಇದನ್ನು ಬಿಟ್ಟು ನೀವು ಬೇರೆ ಯಾವ ಟಿವಿಯನ್ನು ಈ ಪ್ಯಾಕ್​​ನಲ್ಲಿ ನೋಡಲು ಆಗದು. ಅಲ್ಲದೆ ಲೈವ್​ ಸ್ಟ್ರೀಮಿಂಗ್​​ಗೂ ಈ ಪ್ಯಾಕ್​ ಬಳಕೆ ಆಗದು. ಆದ್ರೆ ಈ ಡಾಟಾ ಪ್ಯಾಕ್‌ನ್ನು ಜೀಯೋ ಲೈವ್‌ ಕ್ರಿಕೆಟ್‌ ಗೇಮ್‌ಗೆ ಬಳಸಿಕೊಳ್ಳಬಹುದಾಗಿದೆ.