ರಿಲಯನ್ಸ್ ಜಿಯೋ ಸಮ್ಮರ್ ಸರ್’ಪ್ರೈಸ್ ಆಫರ್ ಅಂತ್ಯ

0
393

ನವದೆಹಲಿ: ಏಪ್ರಿಲ್ 1ರಿಂದ ಮೂರು ತಿಂಗಳ ಕಾಲ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ನೀಡಲು ಉದ್ದೇಶಿಸಿದ್ದ ಸಮ್ಮರ್ ಸರ್’ಪ್ರೈಸ್ ಕೊಡುಗೆಯನ್ನು ಟ್ರಾಯ್ ಸೂಚನೆ ಮೇರೆಗೆ ಗುರುವಾರದಿಂದ ತಕ್ಷಣ ಜಾರಿಯಾಗುವಂತೆ ಸ್ಥಗಿತಗೊಳಿಸುತ್ತಿರುವುದಾಗಿ ತಿಳಿಸಿದೆ.

ಈ ಸಂಬಂಧ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ರಿಲಯನ್ಸ್ ಜಿಯೊ ಸಂಸ್ಥೆ, ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ಸೂಚನೆಯಂತೆ ಮೂರು ತಿಂಗಳ ಕಾಲ ನೀಡಿದ್ದ ಉಚಿತ ಜಿಯೋ ಸಮ್ಮರ್ ಸರ್’ಪ್ರೈಸ್ ಕೊಡುಗೆಯನ್ನು ತಕ್ಷಣ ಹಿಂಪಡೆಯಬಬೇಕಿದೆ. ಜಿಯೋ ಟ್ರಾಯ್ ಸೂಚನೆ ಮತ್ತು ನಿಯಮಗಳಿಗೆ ಬದ್ಧವಾಗಿದೆ. ಹೀಗಾಗಿ ಕೆಲದಿನಗಳಲ್ಲೇ ಕೊಡುಗೆಯನ್ನು ಅಂತ್ಯಗೊಳಿಸುತ್ತಿರುವುದಾಗಿ ತಿಳಿಸಿದೆ. ಆದರೆ ಈಗಾಗಲೇ ಪ್ರೈಮ್ ಮೂಲಕ ರೀಚಾರ್ಜ್ ಮಾಡಿಕೊಂಡು ಕೊಡುಗೆ ಪಡೆದವರಿಗೆ ಸಮ್ಮರ್ ಸರ್’ಪ್ರೈಸ್ ಮುಂದುವರಿಯಲಿದೆ. ಆದರೆ ಹೊಸದಾಗಿ ರೀಚಾರ್ಜ್ ಮಾಡುವ ಗ್ರಾಹಕರಿಗೆ ಕೊಡುಗೆ ಲಭ್ಯವಿರುವುದಿಲ್ಲ ಎಂದು ಜಿಯೋ ಹೇಳಿದೆ.

ಮಾರ್ಚ್ 31ರವರೆಗೆ ಜಿಯೋ ತನ್ನ ಗ್ರಾಹಕರಿಗೆ ನ್ಯೂ ಇಯರ್ ಕೊಡುಗೆ ಹೆಸರಲ್ಲಿ ಉಚಿತ ಕರೆ ಮತ್ತು 4ಜಿ ಇಂಟರ್ ನೆಟ್ ಸೇವೆ ಒದಗಿಸಿತ್ತು. ಅಲ್ಲದೆಜಿಯೋ ಪ್ರೈಮ್ ಚಂದಾದಾರರು ಮತ್ತು ತಿಂಗಳ ಕಾಲ ಸಮ್ಮರ್ ಸರ್’ಪ್ರೈಸ್ ಕೊಡುಗೆ ನೀಡಿತ್ತು. ಅಲ್ಲದೆ ಗ್ರಾಹಕರಿಗೆ ಮಾ.31ರಿಂದ ಮೂರು ತಿಂಗಳ ಕಾಲ ಸಮ್ಮರ್ ಸರ್’ಪ್ರೈಸ್ ಕೊಡುಗೆ ನೀಡಿತ್ತು. ಅಲ್ಲದೆ ಗ್ರಾಹಕರು ಏ. 15ರವರೆಗೆ ರೀಚಾರ್ಜ್ ಮಾಡಿಕೊಂಡು ಕೊಡುಗೆ ಪಡೆಯಲು ಅವಕಾಶ ಕಲ್ಪಿಸಿತ್ತು.