ಏರ್‌ಟೆಲ್‌, ವೊಡಾಫೋನ್ ಮತ್ತು ಜಿಯೋ ನೆಟವರ್ಕನಲ್ಲಿಯೇ ಅತ್ಯತ್ತಮ ಬೆಸ್ಟ್ ಪ್ಲ್ಯಾನ್‌ ಯಾವುದು?

0
461

ಹೊಸ ಪ್ಲ್ಯಾನ್‌ಗಳ ದರಗಳ ಪ್ರಯೋಜನಗಳು:

ಮೊಬೈಲ್ ಬಳಕೆದಾರರಿಗೆ ಟೆಲಿಕಾಂ ಕಂಪನಿ ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್-ಐಡಿಯಾ ಕಂಪನಿಗಳು ಡೇಟಾ, ಮತ್ತು ಕರೆ ಪ್ಲ್ಯಾನ್-ಗಳಲ್ಲಿ ಸಾಕಷ್ಟು ಬದಲಾವಣೆ ಮಾಡಿ. ಗ್ರಾಹಕರಿಗೆ ಬೀಸಿ ತುಪ್ಪದಂತಾಗಿದೆ. ಸಧ್ಯ ಪರಿಷ್ಕೃತ ಪ್ರಿಪೇಯ್ಡ್ ರೀಚಾರ್ಜ್ ಪ್ಲ್ಯಾನ್​ಗಳಲ್ಲಿ ಮೂರು ಕಂಪನಿಗಳು ಪರಸ್ಪರ ಜಿದ್ದಾಜಿದ್ದಿಗೆ ಬಿದ್ದಂತಿದೆ. ಮೂರು ಸಂಸ್ಥೆಗಳ ಬಹುತೇಕ ಪ್ಲ್ಯಾನ್‌ಗಳು ಒಂದಕ್ಕೊಂದು ಹೋಲಿಕೆಯನ್ನು ಹೊಂದಿದ್ದು, ಹೆಚ್ಚಿನ ವ್ಯತ್ಯಾಸ ಕಾನಿಸುವುದಿಲ್ಲ. ಆದರೆ ಜಿಯೋ ಸ್ವಲ್ಪ ಅಗ್ಗ ಅನಿಸಿದರೂ ಆ ಪ್ಲ್ಯಾನ್‌ಗಳು ಎಲ್ಲ ಬಳಕೆದಾರರಿಗೂ ಸೂಕ್ತ ವಾಗುವುದಿಲ್ಲ. ಏಕೆಂದರೇ ಸದ್ಯ ಬಳಕೆದಾರರು ಅಧಿಕ ಡೇಟಾ, ಕರೆ ಮತ್ತು ವ್ಯಾಲಿಡಿಟಿ ಅಂಶಗಳನ್ನು ಗಮನಿಸುತ್ತಾರೆ. ಹಾಗಾದರೆ ಪ್ಲ್ಯಾನ್‌ಗಳಲ್ಲಿ ಯಾವುದು ಉತ್ತಮ ಆಯ್ಕೆ ಎನ್ನುವುದು ಇಲ್ಲಿದೆ ನೋಡಿ ಮಾಹಿತಿ.

1. ಒಂದು ತಿಂಗಳ ವಾಲಿಡಿಟಿ ರಿಚಾರ್ಜ್ ಪ್ಲ್ಯಾನ್ (Jio, airtel, vodafone, idea):

-> ಜಿಯೋ 199 ರೂ. ಪ್ಲ್ಯಾನ್​: ಪ್ರತಿದಿನ 1.5 ಜಿಬಿ ಡೇಟಾ ದೊರೆಯಲಿದೆ. ಇದರೊಂದಿಗೆ ಜಿಯೋ ಟು ಜಿಯೋ ಅನಿಯಮಿತ ಕರೆ ಹಾಗೂ ಇತರೆ ನೆಟ್​ವರ್ಕ್​ ಕರೆಗಳಿಗಾಗಿ 1000 ನಿಮಿಷ ಆಫ್​ನೆಟ್ ಎಫ್​ಯುಪಿ ನಿಮಿಷಗಳು ದೊರೆಯಲಿದೆ. ಇದರ ವಾಲಿಡಿಟಿ 28 ದಿನಗಳು.
-> ಏರ್​ಟೆಲ್ 248 ರೂ. ಪ್ಲ್ಯಾನ್​: ಪ್ರತಿದಿನ 1.5 ಜಿಬಿ ಡೇಟಾ ಹಾಗೂ ಏರ್​ಟೆಲ್ ಟು ಏರ್​ಟೆಲ್ ಅನಿಯಮಿತ ಕರೆ ಹಾಗೂ ಎಫ್​ಯುಪಿ ನಿಮಿಷಗಳನ್ನು ನೀಡುತ್ತದೆ. ಈ ಯೋಜನೆಯ ವಾಲಿಡಿಟಿ 28 ದಿನಗಳು.
->ವೊಡಾಫೋನ್- ಐಡಿಯಾ 249 ರೂ. ಪ್ರತಿದಿನ 1.5 ಜಿಬಿ ಡೇಟಾ ಹಾಗೂ ವೊಡಾ ಟು ವೊಡಾ ಅನಿಯಮಿತ ಕರೆಗಳು ಹಾಗೂ ಎಫ್​ಯುಪಿ ನಿಮಿಷಗಳ ಸೌಲಭ್ಯ ನೀಡುತ್ತದೆ. ಈ ಯೋಜನೆಯ ವಾಲಿಡಿಟಿ 28 ದಿನಗಳು. ಈ ಮೂರು ಪ್ಲ್ಯಾನ್​ಗಳು ಒಂದೇ ಮಾದರಿಯಲ್ಲಿದ್ದರು ದರದ ವಿಷಯದಲ್ಲಿ ಜಿಯೋ ಬೆಸ್ಟ್​ ಎನ್ನಬಹುದು.

2. ನೇ ಪ್ಲಾನ್:

-> ಜಿಯೋ 249 ರೂ ರಿಚಾರ್ಜ್​ ಪ್ಲ್ಯಾನ್​: ದಿನಕ್ಕೆ 2 ಜಿಬಿ ಡೇಟಾ, ಜಿಯೋ-ಟು-ಜಿಯೋದಲ್ಲಿ ಅನಿಯಮಿತ ಕರೆ ಹಾಗೂ ಇತರೆ ನೆಟ್‌ವರ್ಕ್‌ಗಳಿಗೆ 1000 ನಿಮಿಷ ಆಫ್​ನೆಟ್ ಎಫ್​ಯುಪಿ ಉಚಿತವಾಗಿ ನೀಡಲಿದೆ. ನಂತರ ನಿಮಿಷಕ್ಕೆ ಆರು ಪೈಸೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಪ್ಯಾಕ್‌ನ ಸಮಯ ಮಿತಿ 28 ದಿನಗಳು.
-> ಏರ್​ಟೆಲ್ 298 ರೂ. ಪ್ರತಿ ದಿನ 2 ಜಿಬಿ ಡೇಟಾ, 100 ಎಸ್‌ಎಂಎಸ್ ಮತ್ತು ಏರ್​ಟೆಲ್ ಟು ಏರ್​ಟೆಲ್ ಅನಿಯಮಿತ ಕರೆ. ಮತ್ತು ಎಫ್​ಯುಪಿ ನಿಮಿಷಗಳು ಸಹ ಸಿಗಲಿದೆ. ಇದರ ವಾಲಿಡಿಟಿ ಕೂಡ 28 ದಿನಗಳು.
-> ವೊಡಾಫೋನ್-ಐಡಿಯಾ 299 ರೂ. ಪ್ಲ್ಯಾನ್: ಪ್ರತಿ ದಿನ 2 ಜಿಬಿ ಡೇಟಾ, ವೊಡಾ ಟು ವೊಡಾ ಅನಿಯಮಿತ ಧ್ವನಿ ಕರೆಗಳ ಸೌಲಭ್ಯ ನೀಡಲಿದೆ. ಇದರೊಂದಿಗೆ ಎಫ್​ಯುಪಿ ನಿಮಿಷಗಳು ಸಹ ಸಿಗಲಿದೆ. ಇದರ ವಾಲಿಡಿಟಿ ಕೂಡ 28 ದಿನಗಳು.

3 ನೇ ಪ್ಲಾನ್: ಎರಡು ತಿಂಗಳ ವಾಲಿಡಿಟಿ ರಿಚಾರ್ಜ್ ಪ್ಲ್ಯಾನ್:

-> ಜಿಯೋ 399 ರೂ. ಪ್ರತಿದಿನ 1.5 ಜಿಬಿ ಡೇಟಾವನ್ನು ನೀಡಲಾಗುತ್ತದೆ. ಇದಲ್ಲದೆ, ಜಿಯೋ-ಟು-ಜಿಯೋ ಅನ್​ಲಿಮಿಟೆಡ್ ಕರೆ ಮತ್ತು ಇತರೆ ನೆಟ್​ವರ್ಕ್ ಕರೆಗೆ 2,000 ಎಫ್​ಯುಪಿ ಆಫ್​ನೆಟ್ ನಿಮಿಷಗಳನ್ನು ನೀಡಲಾಗುತ್ತದೆ. ಇದರ ವಾಲಿಡಿಟಿ 56 ದಿನಗಳು. ಇದರಲ್ಲೇ 444 ರೂ. ರಿಚಾರ್ಜ್​ ಪ್ಲ್ಯಾನ್, ದಿನಕ್ಕೆ 2 ಜಿಬಿ ಡೇಟಾ ಜಿಯೋ ಟು ಜಿಯೋ ಅನಿಯಮಿತ ಕರೆ ಇತರ ನೆಟ್‌ವರ್ಕ್‌ಗಳಲ್ಲಿ ಕರೆ ಮಾಡಲು ಉಚಿತ 2,000 ಎಫ್​ಯುಪಿ, ಅವದಿ 56 ದಿನಗಳು. ಇನ್ನು ಏರ್​ಟೆಲ್-ವೊಡಾಫೋನ್ ಎರಡು ತಿಂಗಳ ಪ್ಲ್ಯಾನ್​ಗಳನ್ನು ನೀಡಿಲ್ಲ.

4. ನೇ ಪ್ಲಾನ್:

-> ಜಿಯೋ 555 ರೂ. ರಿಚಾರ್ಜ್​ ಪ್ಲ್ಯಾನ್​: ಪ್ರತಿದಿನ 1.5 ಜಿಬಿ ಡೇಟಾ ಜಿಯೋ-ಟು-ಜಿಯೋದಲ್ಲಿ ಅನಿಯಮಿತ ಕರೆ, 3000 ಎಫ್​ಯುಪಿ ಟಾಪ್ ಆಫ್​ನೆಟ್ ನಿಮಿಷಗಳನ್ನು ನೀಡಲಾಗುತ್ತದೆ. ವಾಲಿಡಿಟಿ 84 ದಿನಗಳು.
-> ಏರ್​ಟೆಲ್ 598 ರೂ. ಪ್ರತಿದಿನ 1.5 ಜಿಬಿ ಡೇಟಾ ಮತ್ತು ಏರ್ಟೆಲ್ ಟು ಏರ್​ಟೆಲ್ ಅನಿಯಮಿತ ಧ್ವನಿ ಕರೆಗಳು ಎಫ್​ಯುಪಿ ನಿಮಿಷಗಳು ಸಹ ದೊರೆಯಲಿದೆ. ವಾಲಿಡಿಟಿ 84 ದಿನಗಳು.
-> ವೊಡಾಫೋನ್-ಐಡಿಯಾ 599 ರೂ. ಪ್ರತಿದಿನ 1.5 ಜಿಬಿ ಡೇಟಾ ಮತ್ತು ವೊಡಾ ಟು ವೊಡಾ ಅನಿಯಮಿತ ಧ್ವನಿ ಕರೆಗಳ ಸೌಲಭ್ಯ ದೊರೆಯಲಿದೆ. ಎಫ್​ಯುಪಿ ಸಹ ದೊರೆಯಲಿದೆ. ವಾಲಿಡಿಟಿ 84 ದಿನಗಳು.

5 ನೇ ಪ್ಲಾನ್: ಕೈಗೆಟುಕುವ ಪ್ಲ್ಯಾನ್​ಗಳು:

-> ಜಿಯೋ 129 ರೂ ರಿಚಾರ್ಜ್​ ಪ್ಲ್ಯಾನ್​: ಈ ಪ್ಯಾಕ್‌ನಲ್ಲಿ ಒಟ್ಟು 2 ಜಿಬಿ ಡೇಟಾ, ಜಿಯೋ-ಟು-ಜಿಯೋದಲ್ಲಿ ಅನಿಯಮಿತ ಕರೆಗಳು. ಇತರ ನೆಟ್‌ವರ್ಕ್‌ ಕರೆಗಳಿಗೆ ಉಚಿತವಾಗಿ 1000 ಎಫ್​ಯುಪಿ ನಿಮಿಷಗಳು, ಎಫ್​ಯುಪಿ ಬಳಿಕ ನಿಮಿಷಕ್ಕೆ​ ಆರು ಪೈಸೆ ಶುಲ್ಕ, ವಾಲಿಡಿಟಿ 28 ದಿನಗಳು.
-> ಏರ್​ಟೆಲ್ 148 ರೂ. ರಿಚಾರ್ಜ್ ಪ್ಲ್ಯಾನ್: 2 ಜಿಬಿ ಡೇಟಾ, 300 ಎಸ್‌ಎಂಎಸ್ ಮತ್ತು ಏರ್​ಟೆಲ್ ಟು ಏರ್​ಟೆಲ್ ಅನಿಯಮಿತ ಕರೆಗಳು, ವಾಲಿಡಿಟಿ 28 ದಿನಗಳು.
-> ವೊಡಾಫೋನ್-ಐಡಿಯಾ 149 ರೂ. ಯೋಜನೆಯಲ್ಲಿ ಗ್ರಾಹಕರಿಗೆ 2 ಜಿಬಿ ಡೇಟಾ, ವೊಡಾ ಟು ವೊಡಾ ಅನಿಯಮಿತ ಕರೆ, ಇದರ ವಾಲಿಡಿಟಿ 28 ದಿನಗಳು.

6 ನೇ ಪ್ಲಾನ್: ವಾರ್ಷಿಕ ರಿಚಾರ್ಜ್​ ಪ್ಲ್ಯಾನ್:

-> ಜಿಯೋ 1299 ರೂ. ರಿಚಾರ್ಜ್​ ಪ್ಲ್ಯಾನ್​: ಒಟ್ಟು 24 ಜಿಬಿ ಡೇಟಾ ಅನಿಯಮಿತ ಕರೆ, 12000 ಎಫ್​ಯುಪಿ ಆಫ್​ನೆಟ್ ನಿಮಿಷಗಳು ವಾಲಿಡಿಟಿ 1 ವರ್ಷ.
-> ಏರ್​ಟೆಲ್ 1498 ರಿಚಾರ್ಜ್ ಪ್ಲ್ಯಾನ್: 24 ಜಿಬಿ ಡೇಟಾ ಮತ್ತು ಅನಿಯಮಿತ ಧ್ವನಿ ಕರೆಗಳು, 3600 ಎಸ್​ಎಂಎಸ್ ಸೌಲಭ್ಯ, ಎಫ್​ಯುಪಿ ನಿಮಿಷಗಳು, ಇದರ ವಾಲಿಡಿಟಿ ಒಂದು ವರ್ಷ.
-> ವೊಡಾಫೋನ್-ಐಡಿಯಾ 1499 ರೂ. ರಿಚಾರ್ಜ್ ಪ್ಲ್ಯಾನ್: ಒಟ್ಟು 24 ಜಿಬಿ ಡೇಟಾ, ಅನಿಯಮಿತ ಧ್ವನಿ ಕರೆಗಳು, ಇದರೊಂದಿಗೆ ಎಫ್​ಯುಪಿ ನಿಮಿಷಗಳು ಸಹ ಸಿಗಲಿದೆ. ವಾಲಿಡಿಟಿ ಒಂದು ವರ್ಷ.