ಜಿಯೋಗೆ ಸೆಡ್ಡು ಹೊಡೆದ ಬಿಎಸ್’ಎನ್’ಎಲ್: 339 ರೂ.ಗೆ 2ಜಿಬಿ ಡಾಟಾ

0
562

ಬಿಎಸ್‌ಎನ್‌ಎಲ್‌ನಿಂದ, 339 ರೂ.ಗೆ 2ಜಿಬಿ ಡಾಟಾ ದಿನಕ್ಕೆ 2ಜಿಬಿ ಇಂಟರ್ನೆಟ್; ಎಷ್ಟು ಬೇಕಾದರೂ ಕಾಲ್ ಮಾಡಿ; ಡೇಟಾ ವಾರ್’ಗೆ ಇಳಿದ ಬಿಎಸ್ಸೆನ್ನೆಲ್.

ನವದೆಹಲಿ: ಟೆಲಿಕಾಂ ಕಂಪನಿಗಳ ನಡುವಿನ ಸ್ಪರ್ಧೆ ಮುಂದುವರಿದಿದ್ದು, ಇದೀಗ ರಿಲಯನ್ಸ್‌ ಜಿಯೋಕ್ಕೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸಡ್ಡು ಹೊಡೆದಿದೆ. ಮಾಸಿಕ 339 ರೂ.ಗಳಿಗೆ ದಿನಕ್ಕೆ 2ಜಿಬಿ 3ಜಿ ಡಾಟಾ ಮತ್ತು ಬಿಎಸ್‌ಎನ್‌ಎಲ್‌ ಸಂಪರ್ಕಗಳಿಗೆ ಅನಿಯಮಿತ ಕರೆ ಆಫ‌ರನ್ನು ಅದು ಒದಗಿಸಿದೆ.

ರಿಲಾಯನ್ಸ್ ಜಿಯೋಗೆ ಸೆಡ್ಡು ಹೊಡೆಯುವ ಸ್ಪರ್ಧೆಗೆ ಬಿಎಸ್ಸೆನ್ನೆಲ್ ಕೂಡ ಧುಮುಕಿದೆ. ತನ್ನ ಗ್ರಾಹಕರು ಬೇರೆಡೆ ವಲಸೆ ಹೋಗದಿರಲು ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಹೊಸ ಆಫರ್ ಕೊಟ್ಟಿದೆ. ಅದರಂತೆ 339 ರೂಪಾಯಿ ರೀಚಾರ್ಜ್ ಮಾಡಿಸಿದರೆ 28 ದಿನಗಳ ಕಾಲ ದಿನನಿತ್ಯ 2ಜಿಬಿ 3G ಡೇಟಾ ನೀಡುತ್ತದೆ. ಜೊತೆಗೆ, ಬಿಎಸ್ಸೆನ್ನೆಲ್ ನೆಟ್ವರ್ಕ್’ನ ಮೊಬೈಲ್’ಗೆ ಎಷ್ಟು ಬೇಕಾದರೂ ಕರೆ ಮಾಡಿ ಮಾತನಾಡಬಹುದು. ಅನ್’ಲಿಮಿಟೆಡ್ ಕಾಲ್’ನ ಆಫರ್ ಕೊಟ್ಟಿದೆ. ಈ 339 ರೂಪಾಯಿ ಪ್ಲಾನ್’ನ ಕಾಲಾವಧಿ 90 ದಿನ ಮಾತ್ರ.

ಇದರೊಂದಿಗೆ ದಿನಕ್ಕೆ 25 ನಿಮಿಷ ಇತರ ನೆಟ್‌ವರ್ಕ್‌ಗೆ ಕರೆ ಮಾಡಬಹುದು. ಆ ಬಳಿಕ ನಿಮಿಷಕ್ಕೆ 25 ಪೈಸೆ ದರ ಅನ್ವಯವಾಗಲಿದೆ. ಕಾಂಬೋ ಎಸ್‌ಟಿವಿ (ಸ್ಪೆಷಲ್‌ ಟಾರಿಫ್ ವೋಚರ್‌) ಅಡಿಯಲ್ಲಿ 339 ರೂ.ಗಳ ಪ್ಯಾಕ್‌ ಇರಲಿದ್ದು, 28 ದಿನಗಳ ವ್ಯಾಲಿಡಿಟಿ ಹೊಂದಿದೆ.