ದೇಶದ 10 ಲಕ್ಷ ಸ್ಥಳಗಳಲ್ಲಿ ವೈ-ಫೈ ನೀಡುವ ತಯಾರಿಯಲ್ಲಿದೆ ಜಿಯೋ

0
1178

ರಿಲಾಯನ್ಸ್ ಒಡೆತನದ ಮುಖ್ಯಸ್ಥ ಮುಕೇಶ್ ಅಂಬಾನಿ ಹಲವು ದಿನಗಳ ನಿರೀಕ್ಷಿತ ರಿಲಯನ್ಸ್ ಜಿಯೋ 4ಜಿ ಸೇವೆಯನ್ನು ಇನ್ನಷ್ಟು ವಿಸ್ತಾರ ಗೊಳಿಸಲು ಉಚಿತವಾಗಿ ವೈ-ಫೈ  ಅನಾವರಣಗೊಳಿಸಲಿದ್ದಾರೆ. ಕಂಪೆನಿಯ 4ಜಿ ಎಲ್‌ಟಿಇ ನೆಟ್‌ವರ್ಕ್ ಜಗತ್ತಿನಲ್ಲಿ ಅತೀ ದೊಡ್ಡದು ಎಂದು ತಿಳಿಸಿದ್ದಾರೆ.

wifi

ರಿಲಾಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಹೊಸ ಯೋಜನೆ ಜಾರಿಗೆ ತರುವ ತಯಾರಿಯಲ್ಲಿದೆ. ದೇಶದ 10 ಲಕ್ಷ ಸ್ಥಳಗಳಲ್ಲಿ ವೈ-ಫೈ ಒದಗಿಸುವ ಯೋಚನೆ ಮಾಡಿದೆ.

ಅತಿ ಶೀಘ್ರದಲ್ಲಿ ವೈ-ಫೈ ನೀಡುವ ಕೆಲಸ ಶುರುವಾಗಲಿದೆ. ವೈ-ಫೈ ಸಂಪೂರ್ಣ ಉಚಿತವಾಗಿರಲಿದೆ. ದೇಶದ 10 ಲಕ್ಷ ಸ್ಥಳಗಳಲ್ಲಿ ಜನರು ಜಿಯೋ ವೈ-ಫೈ ಲಾಭ ಪಡೆಯಲಿದ್ದಾರೆ. ವೈ-ಫೈ ಸ್ಥಳಕ್ಕೆ ಗ್ರಾಹಕ ಹೋಗ್ತಾ ಇದ್ದಂತೆ ಸ್ವಯಂಚಾಲಿತವಾಗಿ ಜಿಯೋ ವೈ-ಫೈಗೆ ಮೊಬೈಲ್ ಕನೆಕ್ಟ್ ಆಗಲಿದೆ. ಉಚಿತವಾಗಿ ಇಂಟರ್ನೆಟ್ ಬಳಸಬಹುದಾಗಿದೆ.

x48io76x8476_relinace-jio

ಮಾಧ್ಯಮಗಳ ವರದಿ ಪ್ರಕಾರ ಜಿಯೋ ವೈ-ಫೈ ಸ್ಪಾಟ್ ಮೂಲಕ ಜಿಯೋ ಗ್ರಾಹಕರು ಉಚಿತವಾಗಿ ವೈ-ಫೈ ಬಳಸಬಹುದಾಗಿದೆ. ಜೊತೆಗೆ ಬೇರೆ ದೂರಸಂಪರ್ಕ ಕಂಪನಿ ಗ್ರಾಹಕರು ಕೂಡ ಇದರಿಂದ ಲಾಭ ಪಡೆಯಲಿದ್ದಾರೆ.

ವರದಿಗಳ ಪ್ರಕಾರ, ಡಿಸೆಂಬರ್ 4 ರ ನಂತ್ರ ರಿಯಾಲನ್ಸ್ ಜಿಯೋ ಸಿಮ್  ಪಡೆದಿರುವ ಗ್ರಾಹಕರು ನೆಟ್ ಬಳಕೆಗೆ ಹಣ ತುಂಬಬೇಕಾಗುತ್ತದೆ. ರಿಲಾಯನ್ಸ್ ಆರು ತಿಂಗಳ ಕಾಲ ಉಚಿತ ನೆಟ್ ಸೇವೆ ನೀಡುವುದಾಗಿ ಗ್ರಾಹಕರಿಗೆ ಹೇಳಿತ್ತು. ಇದರ ಪ್ರಕಾರ ಉಚಿತ ಅನ್ ಲಿಮಿಟೆಡ್ 4ಜಿ ಇಂಟರ್ ನೆಟ್ ಹಾಗೂ ಉಚಿತ ಕರೆ ಗ್ರಾಹಕರಿಗೆ ಲಭ್ಯವಿತ್ತು. ಇದಲ್ಲದೆ ಸಾಕಷ್ಟು ಸೌಲಭ್ಯಗಳನ್ನು ಗ್ರಾಹಕರಿಗೆ ಕಂಪನಿ ನೀಡತ್ತು. ಮಾರ್ಚ್31 ರವರೆಗೆ ಎಲ್ಲವೂ ಉಚಿತ ಎಂಬ ಘೋಷಣೆಯನ್ನೂ ಮಾಡಿತ್ತು. ಇದೇ ಕಾರಣಕ್ಕೆ ಗ್ರಾಹಕರು ಕ್ಯೂನಲ್ಲಿ ನಿಂತು ಸಿಮ್ ಖರೀದಿಸಿದ್ದಾರೆ. ಈಗಲೂ ಸಿಮ್ ಖರೀದಿ ಮುಂದುವರೆದಿದೆ. ಮತ್ತು ಈಗ ವೈಫೈ ಉಚಿತ ಸೇವೆಯನ್ನು ಕೊಡುತ್ತಿದೆ. ಈ ಅಫರ್ ಮುಗಿದ ನಂತರ ಜಿಯೋ ಗ್ರಹಕರು ಉಚಿತವಾಗಿ ವೈಫೈ ಪಡೆಯಬಹುದಾಗಿದೆ.