ಮೊಬೈಲ್ ಕ್ಷೇತ್ರದಲ್ಲಿ ಧೂಳೆಬ್ಬಿಸಿದ ನಂತರ ಈಗ Online Shopping ಕ್ಷೇತಕ್ಕೆ ಕಾಲಿಡುತ್ತಿದೆ ಜಿಯೋ….! ವಸ್ತುಗಳ ಬೆಲೆ ಕಡಿಮೆ ಆಗಬಹುದಾ??

0
743

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಮಾರುಕಟ್ಟೆ ಪ್ರವೇಶಿಸಿದ ರಿಲಯನ್ಸ್ ಜಿಯೋ ಟೆಲಿಕಾಂ ಕಂಪನಿ ಕೇವಲ ಕೆಲವೇ ದಿನಗಳಲ್ಲಿ ಲಕ್ಷಾಂತರ ಗ್ರಾಹಕರನ್ನು ತನ್ನತ್ತ ಸೆಳೆದಿತ್ತು. ಏರ್-ಟೆಲ್ , ವೊಡಾಫೋನ್ ,ಐಡಿಯಾ , ಏರ್-ಸೆಲ್ , ಟಾಟಾ ಡೊಕೊಮೊ , ಬಿಎಸ್ ಎನ್ಎಲ್ ಸೇರಿದಂತೆ ದೇಶದ ಎಲ್ಲ ಮೊಬೈಲ್ ಸೇವಾ ಕಂಪನಿಗಳ ನಿದ್ದೆಗೆಡಿಸಿದ ಜಿಯೋ , ತನ್ನ ಗ್ರಾಹಕರಿಗೆ ಅನಿಯಮಿತ ಆಡಿಯೋ , ವಿಡಿಯೋ ಕರೆ , ಸಂದೇಶ , ಮತ್ತು ಅನಿಯಮಿತ 4 ಜಿ ಡೇಟಾ ನೀಡುವ ಮೂಲಕ ವಿಶ್ವದೆಲ್ಲೆಡೆ ಸುದ್ದಿಮಾಡಿತ್ತು.

ರಿಲಯನ್ಸ್ ಜಿಯೋ ಯೋಜನೆಯಿಂದಾಗಿ ಐಡಿಯಾ , ಏರ್ ಟೆಲ್ ಹಾಗೂ ವೊಡಾಫೋನ್ ಸಂಸ್ಥೆಗಳು ಭಾರಿ ನಷ್ಟವನ್ನು ಅನುಭವಿಸಿವೆ. ಅಂಬಾನಿ ಅವರು ಹೊಸ ಯೋಜನೆ ಘೋಷಿಸಿದ ೨ ದಿನದಲ್ಲಿ ದೊಡ್ಡ ದೊಡ್ಡ ಟೆಲಿಕಾಂ ಸಂಸ್ಥೆಗಳು ಷೇರುಗಳ ಮೌಲ್ಯಗಳು ನೆಲಕ್ಕಚ್ಚಿದವು. ಷೇರುಮಾರುಕಟ್ಟೆಯಲ್ಲಿ ಏರ್-ಟೆಲ್ ಷೇರಿನ ಮೌಲ್ಯದಲ್ಲಿ ಬರೊಬ್ಬರಿ ಶೇ.೯ ರಷ್ಟು ಇಳಿಕೆಯಾಗಿತ್ತು , ಕೇವಲ ೩೦೨ ರೂ.ಗಳಿಗೆ ಏರ್ ಟೆಲ್ ಷೇರುಗಳು ಮಾರಾಟವಾಗಿದ್ದವು.  ಈಗ ಜಿಯೋ ಮತ್ತೊಂದು ಪ್ಲಾನ್ ಮಾಡ್ತ ಇದೆ ಅದುವೇ ಇ-ಕಾಮರ್ಸ್ ಮಾರುಕಟ್ಟೆ , ಹೌದು ಇ-ಕಾಮರ್ಸ್ ಮಾರುಕಟ್ಟೆಯನ್ನು ತಲ್ಲಣ ಗೊಳಿಸಲು ಜಿಯೋ ಸಜ್ಜಾಗುತ್ತಿದೆ. ತನ್ನ ಜಿಯೋ ಮನಿ ಪ್ಲಾಟ್ಫಾರ್ಮ್ ಮೂಲಕ ದೇಶದ ನಂಬರ್ ೧ ಇ-ಕಾಮರ್ಸ್ ಸೈಟ್ ಆಗಿ ಬೆಳೆಯಲು ರೂಪುರೇಷೆಯನ್ನು ಹಾಕಿದೆ. ಮುಂದಿನ ವರ್ಷದ ವೇಳೆಗೆ ಮುಂಬೈ , ಚೆನ್ನೈ ಮತ್ತು ಅಹ್ಮದಾಬಾದ್ ನಲ್ಲಿ ತನ್ನ ಬ್ರಾಂಡ್ ಮಳಿಗೆಗಳನ್ನು ತೆರೆಯುತ್ತಿದೆ.

ಇ-ಕಾಮರ್ಸ್ ದಿಗ್ಗಜ ಸೈಟ್ ಗಳಾದ ಅಮೆಜಾನ್ , ಫ್ಲಿಪ್ಕಾರ್ಟ್ ಜಿಯೋ ಗೆ ಎದುರಾಳಿಯಾಗಿವೆ , ಆದ್ರೆ ಜಿಯೋ ಇವರೆಲ್ಲರಿಗಿಂತ ಭಿನ್ನವಾಗಿ “ಪೈಲಟ್” ಎಂಬ ಯೋಜನೆ ಮೂಲಕ ಆನ್ಲೈನ್-ಆಫ್ಲೈನ್ ಮಾರುಕಟ್ಟೆಯತ್ತ ಗಮನ ಹರಿಸಿದೆ. ಸಣ್ಣ ವ್ಯಪಾರಿಗಳಿಗೆ ತನ್ನ ಜಿಯೋ ಮನಿ ಡಿಜಿಟಲ್ ಪೇಮೆಂಟ್ ಗೇಟ್ವೇ ಯನ್ನು ಪರಿಚಯಿಸುತ್ತಿದೆ , ಇದರ ಮೂಲಕ ದೇಶದಲ್ಲಿ ೮೮-೮೯ ರಷ್ಟು ಇರುವ ಸಣ್ಣ ಅಂಗಡಿಗಳನ್ನು ಕವರ್ ಮಾಡಿ ವೇಗವಾಗಿ ಬೆಳೆಯುತ್ತಿರುವ ಗ್ರೋಸರಿ ಅಥವಾ ಕಿರಾಣಿ ಸಾಮಗ್ರಿಗಳ ಮಾರುಕಟ್ಟೆ ಮೇಲೆ ಹಿಡಿತ ಸಾದಿಸಲು ಹೊರಟಿದೆ.

ಪೈಲಟ್ ಯೋಜನೆಗಾಗಿ ಜಿಯೋ ೧೫ ರಿಂದ ೨೦ ದೊಡ್ಡ ಬ್ರಾಂಡ್ ಗಾಲ ಜೊತೆ ಟೈ ಅಪ್ ಮಾಡಿಕೊಂಡಿದೆ , ಅದರಲ್ಲಿ ಐಟಿಸಿ , ವಿಪ್ರೊ , ಡಾಬರ್ , ಟಾಟಾ ಬಿವರೇಜ್ , ಗೋದ್ರೇಜ್ ಕನ್ಸೂಮರ್ ಪ್ರಾಡಕ್ಟ್ಸ್, ಮತ್ತು ಅಮುಲ್ ಮುಖ್ಯವಾದವು. ಗ್ರಾಹಕರಿಗೆ ಆಫರ್ , ಕೋಪೋನ್ಸ್ ಕೊಟ್ಟು ತನ್ನತ ಸೆಳೆಯುವುದು ಜಿಯೋದ ಉದ್ದೇಶ ವಾಗಿದೆ ಇದರಿಂದ ತಯಾರಕರಿಂದ ನೇರವಾಗಿ ಗ್ರಾಹಕರಿಗೆ ವಸ್ತುಗಳು ಸಿಗಲಿವೆ. ಮಿಸ್ದ್ ಕಾಲ್ ಮೂಲಕ ನಿಮ್ಮ ಹತ್ತಿರದ ದಲ್ಲಿ ಯಾವ ಯಾವ ಅಂಗಡಿಗಳಿವೆ , ಅದರಲ್ಲಿ ಯಾವ ಆಫರ್ ಗಳಿವೆ ಎಂದು ಗ್ರಾಹಕರು ತಿಳಿಯಬಹುದಾಗಿದೆ. ಜಿಯೋ-ಟ್ಯಾಗಿಂಗ್ ಕೂಡ ಒದಗಿಸಲಾಗುತ್ತಿದೆ , ಇದರಿಂದ ರೀಟೇಲರ್ ಗೂ ತನ್ನ ಬಳಿಯಿರುವ ಸ್ಟಾಕ್ ಅನ್ನು ಕಾಲಿಮಾಡಿಕೊಳ್ಳಬಹುದು. ಜಿಯೋ ಇವೆಲ್ಲದಕ್ಕಾಗಿ ಬ್ರಾಂಡ್ ಗಳಿಂದ ಜಾಹಿರಾತು ಶುಲ್ಕ ವಿಧಿಸಲಿದೆ.

ಒಟ್ಟಿನಲ್ಲಿ ಜಿಯೋದ ಈ ಹೊಸ “ಪೈಲಟ್” ಯೋಜನೆಗೆ ಜನ ಯಾವ ರೀತಿ ಸ್ಪಂದಿಸುತ್ತಾರೋ ಕಾದು ನೋಡಬೇಕು….!