Jio ನ ಹಿಂಬಾಲಿಸಿದ ವೊಡಾಫೋನ್

0
1612

 ⁠ಈ ವರ್ಷ ಡಾಟಾ ಬಳೆಕೆದಾರರಿಗೆ ಸುಗ್ಗಿಯೋ ಸುಗ್ಗಿ… JIO ಬಂದ್ಮೇಲೆ ಎಲ್ಲೆಡೆ ಡಾಟಗಿರಿ ಶುರುವಾಗಿದೆ. ಈ ಹೊಸ ಅಲೆಯಲ್ಲಿ ವೊಡಾಫೋನ್ ಮತ್ತು ಏರ್ಟೆಲ್ ನಂತಹ ಬೃಹತ್ ಕಂಪನಿಗಳು ಬಾಗಿಲು ಜಡಿಯುತ್ತವೆ ಎಂದು ಎಣಿಸಿದ್ದವರಿಗೆ ನಾವೇನು ಕಮ್ಮಿ ಇಲ್ಲ ಎಂದು ಸಾಬೀತು ಮಾಡಲು ಆಫರ್ ಮೇಲೆ ಆಫರ್ ಬಿಡುತ್ತಿವೆ.

ರಿಲಯನ್ಸ್‌ ಜಿಯೊ ಸವಾಲಿಗೆ ಪ್ರತಿಯಾಗಿ ವೊಡಾಫೋನ್‌ ಕೇವಲ ಒಂದು ಜಿಬಿ ರೇಟಿಗೆ 10 ಜಿಬಿ ಡೇಟಾ ನೀಡಲು ಮುಂದಾಗಿದೆ. ಸೋಮವಾರ ಆರಂಭವಾಗಿರುವ ಈ ಆಫರ್‌ ಡಿಸೆಂಬರ್‌ ಅಂತ್ಯದವರೆಗೆ ಚಾಲ್ತಿಯಲ್ಲಿರಲಿದೆ. ಇದು 4 ಜಿ ಮೊಬೈಲ್‌ಗಳಿಗೆ ಸೀಮಿತವಾಗಿರುವ ಅವಕಾಶ ಇದಾಗಿದ್ದು, ಪ್ರಿಪೈಡ್‌ ಮತ್ತು ಪೋಸ್ಟ್‌ ಪೈಡ್‌ ಗ್ರಾಹಕರು ಡಿಸೆಂಬರ್‌ 31ರವರೆಗೆ ಈ ಸೌಲಭ್ಯ ಪಡೆಯಬಹುದು.

ಏನಾದ್ರು ಕಂಡಿಷನ್ಸ್ ಇದ್ಯಾ ನೋಡೋಣ :

* ಹೊಸ 4ಜಿ ಸ್ಮಾರ್ಟ್‌ ಫೋನ್‌ಗಳಿಗೆ ಮಾತ್ರ ಲಭ್ಯ ಅದೂ ಅಲ್ಲದೆ ಆರು ತಿಂಗಳಿಗೆ ಮೊದಲು ಈ ಮೊಬೈಲ್‌ ಬಳಸಿರಬಾರದು.

* ಹೆಚ್ಚುವರಿ 9 ಜಿಬಿ ಬಳಕೆ ಅವಧಿ ರಾತ್ರಿ 12ರಿಂದ ಬೆಳಗ್ಗಿನ 6 ಗಂಟೆಗೆ ಸೀಮಿತ.

* ದಿಲ್ಲಿ, ಮುಂಬಯಿ, ಕೋಲ್ಕೊತಾ ವೃತ್ತಗಳಲ್ಲಿ ಹೆಚ್ಚುವರಿ ಡೇಟಾ 4ಜಿ ನೆಟ್‌ವರ್ಕ್‌ಗೆ ಮಾತ್ರ.

*ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಗೋವಾ ಮತ್ತಿತರ ರಾಜ್ಯಗಳಲ್ಲಿ ಹೆಚ್ಚುವರಿ ಡಾಟಾ 3ಜಿ ರೂಪದಲ್ಲಿ ಸಿಗಲಿದೆ. ಆದರೆ, ಬಳಸಲು 4ಜಿ ಹ್ಯಾಂಡ್‌ಸೆಟ್‌ ಬೇಕು.

* ವೊಡಾಫೋನ್‌ ವೆಬ್‌ಸೈಟ್‌ನಲ್ಲಿ ಹೆಚ್ಚಿನ ಮಾಹಿತಿ, ಹ್ಯಾಂಡ್‌ಸೆಟ್‌ಗಳ ಅರ್ಹತೆಯನ್ನು ಪರೀಕ್ಷಿಸಬಹುದು.

ಈಗಾಗಲೇ ರಿಲಯನ್ಸ್ ಡಿಜಿಟಲ್ ಅಂಗಡಿಗಳ ಮುಂದೆ ಸಾಲ ಸಾಲು ಮಂದಿ ಕ್ಯೂ ನಿಂತಿರುವುದು ಸರ್ವೇ ಸಾಮಾನ್ಯವಾಗಿದೆ, ವೊಡಾಫೋನ್ ನ ಈ ಆಫರ್ ಬಗ್ಗೆ ತಿಳಿದ್ದ ಮೇಲೆ ವೊಡಾಫೋನ್ ಸ್ಟೋರ್ ಮುಂದೆಯೂ ಕ್ಯೂ ನಿಂತರೂ ನಿಲ್ಲಬಹುದು, ಎಲ್ರು ಕಾಲ್ ಎಳೀತದೆ ಕಾಲ…