ನೀವು ಇನ್ನು ಜಿಯೋ ಪ್ರೈಮ್-ನ ಸದಸ್ಯತ್ವ ಪಡೆಯದಿದ್ದರೆ ಯೋಚಿಸಬೇಡಿ!!

0
830

ಜಿಯೋ ಪ್ರೈಂನ ಚಂದಾದಾರರಾಗಲು ಮಾರ್ಚ್ 31 ಕೊನೆಯ ದಿನ ಎಂದು ಜಿಯೋ ಕಂಪನಿಹೇಳಿಕೊಂಡಿತ್ತು. ಆದರೆ ಜನರ ಸಮಸ್ಯೆಯನ್ನು ಅರಿತು ಜಿಯೋ ಒಂದು ತಿಂಗಳು ಗಡುವನ್ನು ವಿಸ್ತರಿಸುವ ಸಾಧ್ಯತೆ ಇದೆ.

Image result for jioಜಿಯೋ ಈ ಗಡುವು ವಿಸ್ತರಣೆ ದೊಡ್ಡ ಸುದ್ದಿ ಏನಲ್ಲ. ಈ ಮೊದಲು ಗ್ರಾಹಕರಿಗೆ ಡಿ.31ರ ವರೆಗೆ ಮಾತ್ರ ಉಚಿತ ಡಾಟಾ ನೀಡುವುದಾಗಿ ತಿಳಿಸಿತ್ತು. ಮತ್ತು ಗಡುವು ವಿಸ್ತರಿಸಿದ್ದು ಎಲ್ಲರಿಗೂ ಗೊತ್ತೆ ಇದೆ. ಈಗ ಹರಡಿರುವ ಸುದ್ದಿ ನಿಜವಾದ್ರೆ ಜಿಯೋ ಏಪ್ರಿಲ್ ವರೆಗೂ ಗಡುವು ವಿಸ್ತರಣೆ ಮಾಡಬಹುದು.

ಗಡುವು ವಿಸ್ತರಣೆ ಮಾಡಬೇಕೋ ಬೇಡವೋ ಎಂಬುದರ ಬಗ್ಗೆ ಕಂಪನಿಯೂ ಇನ್ನು ನಿರ್ಧಾರಕೈಗೊಂಡಿಲ್ಲ. ಜಿಯೋ ತಾನು ಹಾಕಿಕೊಂಡಿದ್ದ ಗುರಿಯಂತೆ ಶೆ.50 ರಷ್ಟು ಗ್ರಾಹರನ್ನು ತಲುಪಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಕಳೆದ ತಿಂಗಳು ಜಿಯೋ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು, ನಮ್ಮ ಕಂಪನಿ 10 ಕೋಟಿ ಗ್ರಾಹಕರನ್ನು ತಲುಪಿದೆ. ಉಚಿತ ಡಾಟಾ ನೀಡುವುದು ಇನ್ನು ದುಸ್ತರ. ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯಲು ಪ್ರೈಂ ಸದಸ್ಯರಾಗಿ ಎಂದು ತಿಳಿಸಿದ್ದರು. ಇದಕ್ಕಾಗಿ ಗ್ರಾಹಕ 99 ರೂಗಳನ್ನು ನೀಡಿ ಪ್ರೈಂ ಸದಸ್ಯತ್ವ ಪಡೆಯಬಹುದಾಗಿದೆ.
ಪ್ರೈಂ ಸದಸ್ಯರು 303 ರನ್ನು ರಿಚಾರ್ಜ್ ಮಾಡಿದರೆ, ದಿನಂ ಪ್ರತಿ 1 ಜಿಬಿ ಡಾಟಾ ಉಚಿತವಾಗಿ ಸಿಗುತ್ತದೆ. ಅಲ್ಲದೆ ಮಾರ್ಚ್ 30 ರೊಳಗೆ ಈ ಪ್ಲಾನ್ ಹಾಕಿಸಿಕೊಂಡ ಗ್ರಾಹಕ 5 ಜಿಬಿ ಹೆಚ್ಚುವರಿಯಾಗಿ ಪಡೆಯಲಿದ್ದಾನೆ.

ಜಿಯೋ ಬಳಕೆದಾರರು ವಿಶ್ವದೆಲ್ಲೆಡೆ ಇದ್ದಾರೆ. ಜಪಾನ್, ಚೀನಾ ಕೋರಿಯಾ, ಅಮೆರಿಕ ಪ್ರಜೇಗಳು ಸಹ ಉಚಿತ ಡಾಟಾ ಪ್ಲಾನ್ ಲಾಭ ಪಡೆಯುತ್ತಿದ್ದಾರೆ.