ಬೆಂಗಳೂರಿನಲ್ಲಿ ಉಗ್ರರ 22 ಅಡಗುದಾಣಗಳನ್ನು ಪತ್ತೆ; ರಾಷ್ಟ್ರೀಯ ತನಿಖಾ ದಳದ ಮಾಹಿತಿಯಂತೆ ಉಗ್ರರಿಗೆ RSS ನಾಯಕರೇ ಟಾರ್ಗೆಟ್.!

0
137

ಬೆಂಗಳೂರಿನಲ್ಲಿ ಉಗ್ರರು ನಲೆಸಿದ್ದಾರೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಸುತ್ತಮುತ್ತ 20, 22 ಅಡಗುದಾಣಗಳನ್ನು ಪತ್ತೆ ಹಚ್ಚಲಾಗಿದ್ದು ಐಸಿಸ್ ಹಾಗೂ ಜೆಎಂಬಿ(ಜಮಾತ್ ಉಲ್ ಮುಜಾಹಿದ್ದೀನ್) ಉಗ್ರರು ಬೀಡು ಬಿಟ್ಟಿದ್ದಾರೆ. ಕರ್ನಾಟಕ, ಕೇರಳದಲ್ಲಿ ಜೆಎಂಬಿ ಉಗ್ರರು ಒಂದಾಗಿ ದಾಳಿಗೆ ಸಂಚು ನಡೆಸಿದ್ದು, ಉಗ್ರರು ಆರ್‌ಎಸ್‌ಎಸ್ ನಾಯಕರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಹೇಳಿದೆ. ಈಗಾಗಲೇ ಹಲವು ಕಡೆಯಲ್ಲಿ ತಪಾಷಣೆ ನಡೆದಿದ್ದು, ಬೆಂಗಳೂರು ವಾಸಿಗರ ನೆಮ್ಮದಿ ಕೆಡಸಿದೆ.

Also read: ವಾಹನ ಮಾಲೀಕರೆ ಎಚ್ಚರ; ಬೆಂಗಳೂರಿಗೆ ಬಂದಿದ್ದೆ ಯೂಟ್ಯೂಬ್ ಕಾರು ಕಳ್ಳರ ಗ್ಯಾಂಗ್, ಐದೇ ನಿಮಿಷದಲ್ಲಿ ನಿಮ್ಮ ಕಾರ್ ಕದಿಯುತ್ತಾರೆ ಎಚ್ಚರ.!

ಆರ್‌ಎಸ್‌ಎಸ್ ನಾಯಕರ ಮೇಲೆ ಉಗ್ರರ ಸಂಚು?

ಹೌದು ಉಗ್ರರ ಬಗ್ಗೆ ಮಾಹಿತಿ ಪತ್ತೆಯಾಗಿದ್ದು, 125 ಶಂಕಿತ ಉಗ್ರರ ಬಗ್ಗೆ ಎನ್‍ಐಎ ಮಾಹಿತಿ ಸಂಗ್ರಹಿಸಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರಗಳಿಗೆ ರಾಷ್ಟ್ರೀಯ ತನಿಖಾ ದಳ ಹೈ ಅಲರ್ಟ್ ನೀಡಿದ್ದು, ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಮುಖ್ಯಸ್ಥರ ಸಭೆಯಲ್ಲಿ ಎನ್‍ಐಎ ಮುಖ್ಯಸ್ಥ ಅಲೋಕ್ ಮಿತ್ತಲ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಮುಖ್ಯವಾಗಿ ಈ ಉಗ್ರರು ಆರ್‌ಎಸ್‌ಎಸ್ ನಾಯಕರನ್ನು ಗುರಿಯಾಗಿಸಿಕೊಂಡಿದ್ದಾರೆ. ಮಾಹಿತಿಯನ್ನು ಅರಿತು ಬೆಂಗಳೂರು ಮತ್ತು ಸುತ್ತಮುತ್ತ 20, 22 ಅಡಗುದಾಣಗಳನ್ನು ಪತ್ತೆ ಹಚ್ಚಲಾಗಿದ್ದು, ಮಹಾರಾಷ್ಟ್ರ ಹಾಗೂ ಬಿಹಾರದಲ್ಲಿಯೂ ಜೆಎಂಬಿ ಉಗ್ರರು ಸಕ್ರಿಯರಾಗಿರಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದು ಬೆಂಗಳೂರಿಗೆ ಉಗ್ರರ ದಾಳಿ ಮೊದಲಲ್ಲ ಕೆಲವು ದಿನಗಳ ಹಿಂದೆವೂ ಕೂಡ ರಾಮನನಗರದಲ್ಲಿ ಸಜೀವ ಬಾಂಬ್-ಗಳು ಪತ್ತೆಯಾಗಿದವು. ಬಾಂಗ್ಲಾದೇಶದ ಜೆಎಂಬಿ ಸಂಘಟನೆಯ ಶಂಕಿತ ಉಗ್ರ ಅಬೀಬುರ್ ರೆಹಮಾನ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆತ ರಾಮನಗರ ಟಿಪ್ಪುನಗರದ 23ನೇ ವಾರ್ಡ್​ನ ಬ್ರಿಡ್ಜ್​ ಬಳಿ ಬಾಂಬ್​ಗಳನ್ನು ಇರಿಸಿದ್ದ ಸ್ಥಳದ ಬಗ್ಗೆ ಬಾಯಿ ಬಿಟ್ಟಿದ್ದ. ಆತ ಹೇಳಿದ ಸ್ಥಳದಲ್ಲಿ ಶೋಧ ನಡೆಸಿದಾಗ ಎರಡು ಸಜೀವ ಬಾಂಬ್​ಗಳು ಸಿಕ್ಕಿದವು, ಅದರಂತೆ ಈಗ ಬೆಂಗಳೂರು, ಮಂಗಳೂರು ಸೇರಿದಂತೆ ಹಲವು ನಗರಗಳ ಮೇಲೆ ಉಗ್ರರು ದಾಳಿಗೆ ಸಂಚು ರೂಪಿಸಿದ್ದಾರೆ ಎನ್ನಲಾಗಿದೆ.

ಮಂಗಳೂರಿನಲ್ಲಿವೂ ಕೂಡ 50 ರೂ. ಮುಖಬೆಲೆಯ ನೋಟ್ ಮೇಲೆ “ಟಾರ್ಗೆಟ್‌ ಬಾಳೆಹೊನ್ನೂರು’ ಎಂದು ಬರೆದು ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಹರಿಬಿಟ್ಟ ಪ್ರಕರಣವೊಂದು ಬೆಳಕಿಗೆ ಬಂದಿತ್ತು, ನೋಟಿನ ಮೇಲೆ “ಟಾರ್ಗೆಟ್‌ ಬಾಳೆಹೊನ್ನೂರು’ ಎಂದು ದೊಡ್ಡ ಅಕ್ಷರದಲ್ಲಿ ಬರೆಯಲಾಗಿದೆ. ಅಲ್ಲದೆ, ನಾವು ಪಾಕಿಸ್ತಾನದವರು. 6 ಜನ ಇದ್ದೀವಿ. ಒಂದೊಂದು ಜಿಲ್ಲೆಯಲ್ಲಿ ಇದ್ದೀವಿ. ಇಂಡಿಯಾದವರನ್ನು ಒಬ್ಬರನ್ನೂ ಬಿಡೋಲ್ಲ. ನಮಗೆ ಹೇಗೆ ಕನ್ನಡ ಬಂತು ಎಂದು ಯೋಚನೆಯೇ?. ನಮಗೆ ಕನ್ನಡದವರು ಹೆಲ್ಪ್ ಮಾಡುತ್ತಿದ್ದಾರೆ. ನಾವು ಇಬ್ಬರು ಬಾಳೆಹೊನ್ನೂರಿನಲ್ಲೇ ಇದ್ದೀವಿ. ಪಾಕಿಸ್ತಾನದ ಹುಲಿಗಳು ಎಂದು ಬರೆಯಲಾಗಿದೆ. ಈ ರೀತಿ ಸಂದೇಶವಿರುವ ನೋಟಿನ ಚಿತ್ರ ತೆಗೆದು ಅದನ್ನು ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಹರಿಬಿಡಲಾಗಿದೆ.

8,900 ಕೆಜಿ ಸ್ಫೋಟಕ ವಸ್ತು ವಶ?

ತೆಲಂಗಾಣದ ಕೀಸರಾದಿಂದ ಹೈದರಾಬಾದ್ ಬಳಿಯ 8,900 ಕೆಜಿ ಸ್ಫೋಟಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರು 376 ಬೂಸ್ಟರ್ ಮತ್ತು 165 ವಿದ್ಯುತ್ ರಹಿತ ಡಿಟೋನೇಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಶಂಕಿತರನ್ನು ಸಹ ಬಂಧಿಸಲಾಗಿದೆ. “ಶನಿವಾರ ತಡರಾತ್ರಿ ಕೀಸರ ಪೊಲೀಸ್ ಮತ್ತು ವಿಶೇಷ ಕಾರ್ಯಾಚರಣೆ ತಂಡ ಸ್ಫೋಟಕ ವಸ್ತುಗಳನ್ನು ಹೊಂದಿರುವ ಎರಡು ವಾಹನಗಳನ್ನು ವಶಪಡಿಸಿಕೊಂಡಿದೆ ಮತ್ತು ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡಿದೆ” ಎಂದು ರಾಚಕೊಂಡ ಪೊಲೀಸರು ತಿಳಿಸಿದ್ದಾರೆ.

Also read: ಬಿಗ್ ಬ್ರೇಕಿಂಗ್; ಬಿಎಲ್’ ಕಾರ್ಡ್ ದಾರರಿಗೆ ಬರೆ ಎಳೆದ ಸರ್ಕಾರ, ಇನ್ಮುಂದೆ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯಲ್ಲಿ ಉಚಿತ ಚಿಕಿತ್ಸೆ ಇಲ್ಲ.!