ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಮಹನಿಯರ ಬಗ್ಗೆ ನೀವು ಎಷ್ಟು ತಿಳಿದುಕೊಂಡಿದ್ದೀರಾ!!

0
1052

ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಟಿತ ಪ್ರಶಸ್ತಿ. ಈ ಪ್ರಶಸ್ತಿಯನ್ನು ಭಾರತೀಯ ಸಾಹಿತ್ಯಕ್ಕೆ ಸಮಗ್ರ ಕೊಡುಗೆಯನ್ನು ನೀಡಿದ ಲೇಖಕರಿಗೆ ನೀಡಲಾಗುವುದು. ಈವರೆಗೆ ಹಿಂದಿ ಸಾಹಿತಿಗಳು ಒಂಬತ್ತು ಪ್ರಶಸ್ತಿಗಳನ್ನು ಪಡೆದು ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. ಕನ್ನಡ ಭಾಷೆಯು ಎಂಟು ಪ್ರಶಸ್ತಿಯನ್ನು ಪಡೆದು ಎರಡನೆ ಸ್ಥಾನದಲ್ಲಿದೆ. ಇದು ನಮ್ಮೆಲರಿಗೆ ಹೆಮ್ಮೆಯ ವಿಷಯ.

ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.

1. ಕೆ.ವಿ. ಪುಟ್ಟಪ್ಪ
ಕಾವ್ಯನಾಮ: ಕುವೆಂಪು
ಪೂರ್ಣನಾಮ: ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ
ಜನನ: ಡಿಸೆಂಬರ್ 29, 1904
ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ : ‘ಶ್ರೀ ರಾಮಾಯಣ ದರ್ಶನಂ’
ಜ್ಞಾನಪೀಠ ಪ್ರಶಸ್ತಿ ಪಡೆದ ವರ್ಷ : ೧೯೬೮

Image may contain: 1 person

2. ದ.ರಾ.ಬೇಂದ್ರೆ
ಕಾವ್ಯನಾಮ: ಅಂಬಿಕಾತನಯದತ್ತ
ಪೂರ್ಣನಾಮ: ದತ್ತಾತ್ರೇಯ ರಾಮಚಂದ್ರ ಬೇಂದ್ರೆ.
ಜನನ: ಜನವರಿ 31, 1896
ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ : ‘ನಾಕುತಂತಿ ಕವನ ಸಂಕಲನ’
ಜ್ಞಾನಪೀಠ ಪ್ರಶಸ್ತಿ ಪಡೆದ ವರ್ಷ : 1974.

Image may contain: 1 person, text

3. ಕೆ. ಶಿವರಾಮ ಕಾರಂತ
ಕಾವ್ಯನಾಮ: ಶಿವರಾಮ ಕಾರಂತ
ಪೂರ್ಣನಾಮ:ಕೋಟ ಶಿವರಾಮ ಕಾರಂತ
ಜನನ: ಅಕ್ಟೋಬರ್ 10, 1902
ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ : ‘ಮೂಕಚ್ಚಿಯ ಕನಸುಗಳು’
ಜ್ಞಾನಪೀಠ ಪ್ರಶಸ್ತಿ ಪಡೆದ ವರ್ಷ : 1978.

Image may contain: 1 person, text

4. ಡಾ. ಮಾಸ್ತಿ
ಕಾವ್ಯನಾಮ: ಶ್ರೀನಿವಾಸ
ಪೂರ್ಣನಾಮ : ಮಾಸ್ತಿ ವೆಂಕಟೇಶ ಅಯ್ಯಂಗಾರ್.
ಜನನ: ಜೂನ್ 6, 1891
ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ : ‘ಚಿಕ್ಕವೀರ ರಾಜೇಂದ್ರ’
ಜ್ಞಾನಪೀಠ ಪ್ರಶಸ್ತಿ ಪಡೆದ ವರ್ಷ : 1983.

Image may contain: 1 person, glasses

5. ಡಾ. ವಿ.ಕೃ.ಗೋಕಾಕ್
ಕಾವ್ಯನಾಮ: ವಿನಾಯಕ
ಪೂರ್ಣನಾಮ : ವಿನಾಯಕ ಕೃಷ್ಣ ಗೋಕಾಕ್
ಜನನ: ಆಗಸ್ಟ್ 9, 1909
ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ : ‘ಸಮಗ್ರ ಸಾಹಿತ್ಯ’
ಜ್ಞಾನಪೀಠ ಪ್ರಶಸ್ತಿ ಪಡೆದ ವರ್ಷ : 1991.

Image may contain: 1 person

6. ಡಾ. ಯು.ಆರ್. ಅನಂತಮೂರ್ತಿ
ಪೂರ್ಣನಾಮ : ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ.
ಜನನ: ಡಿಸೆಂಬರ್ 21, 1932
ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ : ‘ಸಮಗ್ರ ಸಾಹಿತ್ಯ’
ಜ್ಞಾನಪೀಠ ಪ್ರಶಸ್ತಿ ಪಡೆದ ವರ್ಷ : 1995.

Image may contain: 1 person, text

7. ಡಾ. ಗಿರೀಶ್ ಕಾರ್ನಾಡ್
ಪೂರ್ಣನಾಮ : ಗಿರೀಶ ರಘುನಾಥ ಕಾರ್ನಾಡ್.
ಜನನ: ಮೇ 19, 1938
ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ : ‘ಸಮಗ್ರ ಸಾಹಿತ್ಯ’
ಜ್ಞಾನಪೀಠ ಪ್ರಶಸ್ತಿ ಪಡೆದ ವರ್ಷ : 1999.

Image may contain: 1 person, text

8. ಡಾ. ಚಂದ್ರಶೇಖರ ಕಂಬಾರ.
ಪೂರ್ಣನಾಮ : ಚಂದ್ರಶೇಖರ ಕಂಬಾರ.
ಜನನ: ಜನವರಿ 2, 1937
ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ : ‘ಸಮಗ್ರ ಸಾಹಿತ್ಯ’
ಜ್ಞಾನಪೀಠ ಪ್ರಶಸ್ತಿ ಪಡೆದ ವರ್ಷ : 2012.

Image may contain: 1 person