ಬೆಂಗಳೂರು ಹಾಲು ಒಕ್ಕೂಟ ನಂದಿನಿಯಲ್ಲಿ ವಿವಿಧ ಹುದ್ದೆಗಳಿಗೆ ಪದವೀಧರರಿಂದ ಅರ್ಜಿ ಆಹ್ವಾನ

0
1310

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಬೆಂಗಳೂರಿನಲ್ಲಿ ಖಾಲಿ ಇರುವ ವಿವಿಧ ವೃಂದಗಳಲ್ಲಿ 250 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

source: kmfnandini.coop

ಅರ್ಹ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಆಗಸ್ಟ್ 10 ರೊಳಗೆ ಅರ್ಜಿಗಳನ್ನು ಸಲ್ಲಿಸತಕ್ಕದ್ದು.

ಹುದ್ದೆಗಳ ವಿವರ

1. ಸಹಾಯಕ ವ್ಯವಸ್ಥಾಪಕರು (ಎಹೆಚ್/ಎಐ) -22 ಹುದ್ದೆ

 • ವೇತನ ಶ್ರೇಣಿ: ರೂ.28100-50100/-
 • ವಿದ್ಯಾರ್ಹತೆ: ಬಿಎಸ್ಸಿ ಮತ್ತು ಎಹೆಚ್

2. ವೈದ್ಯಾಧಿಕಾರಿ-01 ಹುದ್ದೆ

 • ವೇತನ ಶ್ರೇಣಿ: 28100-50100/-
 • ವಿದ್ಯಾರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದವಿ ಪಡೆದಿರಬೇಕು, ಜೊತೆಗೆ ಕಂಪ್ಯೂಟರ್ ಬೇಸಿಕ್ ಜ್ಞಾನ ಹೊಂದಿರಬೇಕು.

3. ತಾಂತ್ರಿಕ ಅಧಿಕಾರಿ (ಡಿ.ಟಿ)-15 ಹುದ್ದೆ

 • ವೇತನ ಶ್ರೇಣಿ: ರೂ.22800-43200/-
 • ವಿದ್ಯಾರ್ಹತೆ: ಬಿಟೆಕ್ (ಡಿಟೆಕ್) ಹಾಗೂ ಕಂಪ್ಯೂಟರ್ ನಿರ್ವಹಣೆಯಲ್ಲಿ ಮೂಲಭೂತ ಜ್ಞಾನ

4. ತಾಂತ್ರಿಕ ಅಧಿಕಾರಿ ( ಇಂಜಿನಿಯರಿಂಗ್)-10 ಹುದ್ದೆ

5. ಸಿವಿಲ್-01 ಹುದ್ದೆ

6. ಮೆಕಾನಿಕಲ್/ಇನ್ಸ್ಟ್ರುಮೆಂಟೇಷನ್/ಇಂಡಸ್ಟ್ರಿಯಲ್ ಇಂಜಿನಿಯರಿಂಗ್-05 ಹುದ್ದೆ

7. ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್/ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್-02 ಹುದ್ದೆ

8. ಎಲೆಕ್ಟ್ರಿಕಲ್ ಇಂಜಿನಿಯರಿಂಗ್-01 ಹುದ್ದೆ

9. ಎನ್ವಿರಾನ್ಮೆಂಟ್ ಇಂಜಿನಿಯರಿಂಗ್-01 ಹುದ್ದೆ

 • ವೇತನ ಶ್ರೇಣಿ: ರೂ.22800-43200/-
 • ವಿದ್ಯಾರ್ಹತೆ: ಸಂಬಂಧಿಸಿ ವಿಷಯದಲ್ಲಿ ಬಿಇ ಪದವಿ ಜೊತೆಗೆ ಕಂಪನಿಗಳಲ್ಲಿ 02 ವರ್ಷ ಸೇವಾನುಭವದೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
  ವೇತನ ಶ್ರೇಣಿ: ರೂ.22800-43200/-

10. ಕೃಷಿ ಅಧಿಕಾರಿ-03 ಹುದ್ದೆಗಳು

 • ವೇತನ ಶ್ರೇಣಿ: ರೂ.22800-43200/-
 • ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪ್ರಥಮ ದರ್ಜೆಯಲ್ಲೆ ಬಿ.ಎಸ್ಸಿ(ಕೃಷಿ) ಪದವಿ ಹಾಗೂ ಕಂಪ್ಯೂಟರ್ ನಿರ್ವಹಣೆಯಲ್ಲಿ ಮೂಲಭೂತ ಜ್ಞಾನ.

11. ಮಾರುಕಟ್ಟೆ ಅಧಿಕಾರಿ-05 ಹುದ್ದೆಗಳು

 • ವೇತನ ಶ್ರೇಣಿ: ರೂ.22800-43200/-
 • ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪ್ರಥಮ ದರ್ಜೆಯಲ್ಲೆ ಬಿ.ಎಸ್ಸಿ(ಕೃಷಿ) ಪದವಿ ಹಾಗೂ ಕಂಪ್ಯೂಟರ್ ನಿರ್ವಹಣೆಯಲ್ಲಿ ಮೂಲಭೂತ ಜ್ಞಾನ

12. ವಿಸ್ತರಣಾಧಿಕಾರಿ ದರ್ಜೆ-3: 54 ಹುದ್ದೆಗಳು

 • ವೇತನ ಶ್ರೇಣಿ: ರೂ.17650-32000/-
 • ವಿದ್ಯಾರ್ಹತೆ: ಪ್ರಥಮ ದರ್ಜೆಯಲ್ಲೆ ಬಿ.ಎ/ಬಿ.ಕಾಂ/ಬಿ.ಎಸ್ಸಿ/ಬಿಬಿಎಂ ಪದವಿ ಹಾಗೂ ಕಂಪ್ಯೂಟರ್ ನಿರ್ವಹಣೆಯಲ್ಲಿ ಮೂಲಭೂತ ಜ್ಞಾನ

13. ಡೈರಿ ಸೂಪರ್ವೈಸರ್ ದರ್ಜೆ-2: 10 ಹುದ್ದೆಗಳು

 • ವೇತನ ಶ್ರೇಣಿ: ರೂ.17650-32000/-
 • ವಿದ್ಯಾರ್ಹತೆ: ಮೆಕಾನಿಕಲ್/ಎಲೆಕ್ಟ್ರಿಕಲ್ ನಲ್ಲಿ 03 ವರ್ಷಗಳ ಡಿಪ್ಲೊಮಾ ಮತ್ತು 03 ವರ್ಷಗಳ ಅನುಭವ.

14. ಆಡಳಿತ ಸಹಾಯಕ ದರ್ಜೆ-2: 20 ಹುದ್ದೆಗಳು

 • ವೇತನ ಶ್ರೇಣಿ: ರೂ.14550-26700/-
 • ವಿದ್ಯಾರ್ಹತೆ: ಪ್ರಥಮ ದರ್ಜೆಯಲ್ಲೆ ಪದವಿ ಮತ್ತು ಕಂಪ್ಯೂಟರ್ ನಿರ್ವಹಣೆಯಲ್ಲಿ ಮೂಲಭೂತ ಜ್ಞಾನ.

15. ಜೂನಿಯರ್ ಸಿಸ್ಟಂ ಆಪರೇಟರ್-20 ಹುದ್ದೆಗಳು

 • ವೇತನ ಶ್ರೇಣಿ: ರೂ.14550-26700/-
 • ವಿದ್ಯಾರ್ಹತೆ: ಪ್ರಥಮ ದರ್ಜೆಯಲ್ಲೆ ಪದವಿ ಮತ್ತು ಕಂಪ್ಯೂಟರ್ ನಿರ್ವಹಣೆಯಲ್ಲಿ ಮೂಲಭೂತ ಜ್ಞಾನ.

16. ಕೆಮಿಸ್ಟ್ ದರ್ಜೆ-2: 23 ಹುದ್ದೆಗಳು

 • ವೇತನ ಶ್ರೇಣಿ: ರೂ.14550-26700/-
 • ವಿದ್ಯಾರ್ಹತೆ: ಕೆಮಿಸ್ಟ್ರಿ ಅಥವಾ ಮೈಕ್ರೋಬಯಾಲಜಿ ವಿಷಯದೊಂದಿಗೆ ವಿಜ್ಞಾನ ಪದವಿ

17. ಮಾರುಕಟ್ಟೆ ಸಹಾಯಕ ದರ್ಜೆ-2: 02 ಹುದ್ದೆಗಳು

 • ವೇತನ ಶ್ರೇಣಿ: ರೂ.14550-26700/-
 • ವಿದ್ಯಾರ್ಹತೆ: ಪ್ರಥಮ ದರ್ಜೆಯಲ್ಲೆ ಬಿ.ಎ/ಬಿ.ಕಾಂ/ಬಿ.ಎಸ್ಸಿ ಪದವಿ ಹಾಗೂ ಕಂಪ್ಯೂಟರ್ ನಿರ್ವಹಣೆಯಲ್ಲಿ ಮೂಲಭೂತ ಜ್ಞಾನ

18. ಲೆಕ್ಕ ಸಹಾಯಕ ದರ್ಜೆ-2: 06 ಹುದ್ದೆ

 • ವೇತನ ಶ್ರೇಣಿ: ರೂ.14550-26700/-
 • ವಿದ್ಯಾರ್ಹತೆ: ಬಿ.ಕಾಂ ಪದವಿ ಮತ್ತು ಕಂಪ್ಯೂಟರೈಸ್ಡ್ ಅಕೌಂಟ್ಸ್ ಪ್ಯಾಕೇಜ್ ನಿರ್ವಹಣೆಯ ಅನುಭವ

19. ಶುಶ್ರೂಷಕರು: 02ಹುದ್ದೆ

 • ವೇತನ ಶ್ರೇಣಿ: ರೂ.14550-26700/-
 • ವಿದ್ಯಾರ್ಹತೆ: ಬಿ.ಎಸ್ಸಿ ನರ್ಸಿಂಗ್ ಅಥವಾ ಡಿಪ್ಲೊಮಾ ಇನ್ ನರ್ಸಿಂಗ್ ಪದವಿ ಜೊತೆ ಎರಡು ವರ್ಷಗಳ ಸೇವಾನುಭವ

20. ಕಿರಿಯ ತಾಂತ್ರಿಕರು-38 ಹುದ್ದೆಗಳು

 • ವೇತನ ಶ್ರೇಣಿ: ರೂ.11600-21000/-
 • ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ಯೊಂದಿಗೆ ಎನ್ ಟಿ ಸಿ ನಲ್ಲಿ ಎಲೆಕ್ಟ್ರಿಕಲ್/ರೆಫ್ರಿಜರೇಷನ್ (ಎಂಆರ್‌ಎಸಿ)/ಫಿಟ್ಟರ್/ಮೆಕಾನಿಕಲ್/ದ್ವಿತೀಯ ದರ್ಜೆ ಬಾಯ್ಲರ್ ಅಟೆಂಡೆಂಟ್ ಸರ್ಟಿಫಿಕೇಟ್.

ಪ್ರಮುಖ ದಿನಾಂಕಗಳು

ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-08-2017

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 11-08-2017

ಆಯ್ಕೆ ವಿಧಾನ

ಅರ್ಹತಾ ಪರೀಕ್ಷೆ ಮೂಲಕ ಆಭ್ಯರ್ಥಿಗಳ ಆಯ್ಕೆ ಮಾಡಿಕೊಳ್ಳಲಾಗುವುದು. ಅರ್ಹತದಾಯಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಭ್ಯರ್ಥಿಗಳನ್ನು 1:5 ರ ಅನುಪಾತದಲ್ಲಿ ಮೌಖಿಕ ಪರೀಕ್ಷೆಗೆ ಕರೆಯಲಾಗುವುದು.

ಅರ್ಜಿ ಶುಲ್ಕ

ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.1000/- ಅಂಚೆ ಕಛೇರಿ ಶುಲ್ಕ ರೂ.30/-

ಪ.ಜಾ/ಪ.ಪಂ/ಪ್ರ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ರೂ.500/- ಅಂಚೆ ಕಚೇರಿ ಶುಲ್ಕ ರೂ.30/-

ಹೆಚ್ಚಿನ ಮಾಹಿತಿಗಾಗಿ www.bamulnandini.coop ಗಮನಿಸಿ