ನಿರುದ್ಯೋಗಿಗಳಿಗೊಂದು ಸುವರ್ಣಾವಕಾಶ. ಕಾರವಾರದಲ್ಲಿ ಬೃಹತ್ ಉದ್ಯೋಗ ಮೇಳ; ಕೆನರಾ ಬ್ಯಾಂಕ್, SBI ಸೇರಿದಂತೆ 106 ಕಂಪನಿಗಳು ಪಾಲ್ಗೊಳ್ಳಲಿವೆ..

0
711

ಉದ್ಯೋಗ ಮೇಳದಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಸ್ಥಳದಲ್ಲಿಯೇ ವೇತನದ ವಿವರವಿರುವ ಆಫರ್ ಲೆಟರ್ ಪಡೆಯಬಹುದು:

ದೇಶಕ್ಕೆ ಒಂದು ದೊಡ್ಡ ದುರಂತ ಅಂದರೆ ನಿರುದ್ಯೋಗ ಏಕೆಂದರೆ ಕೆಲಸವಿಲ್ಲದ ವ್ಯಕ್ತಿ ನನ್ನ ಜೀವನವನ್ನು ಸಾಗಿಸಲು ಆಗದೆ ಆರ್ಥಿಕವಾಗಿ ಹಿಂದುಳಿವುತ್ತಾನೆ. ಇದರಿಂದ ದೇಶದ ಆರ್ಥಿಕ ಸ್ಥಿತಿವು ಹದಗೆಡುವುದರಲ್ಲಿ ಯಾವುದೆ ಅನುಮಾನವಿಲ್ಲ. ಇದನ್ನು ಹೋಗಲಾಡಿಸಲು ಸರ್ಕಾರ ಹಲವಾರು ರೀತಿಯ ಕ್ರಮಗಳನ್ನು ಕೈಗೊಂಡರು ಸರಿಯಾದ ರೀತಿಯ ಉದ್ಯೋಗ ನೀಡುವಲ್ಲಿ ವಿಪಲವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ವರ್ಷದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಹೊರಬರುತ್ತಾರೆ, ಅದರಲ್ಲಿ 40% ಜನರಿಗೆ ಉದ್ಯೋಗ ಸಿಕ್ಕರೆ ಉಳಿದ 60% ಜನರು ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿ ಹೊರಬರುತ್ತಿದ್ದಾರೆ.

ಇಂತಹ ನಿರುದ್ಯೋಗಿಗಳನ್ನು ಕಂಡು ಕಾರವಾರದಲ್ಲಿ ಬೃಹತ್ ಉದ್ಯೋಗಮೇಳವನ್ನು ಇದೆ ಡಿಸೆಂಬರ್ 22 ಮತ್ತು 23 ರಂದು ಹಮ್ಮಿಕೊಳ್ಳಲಾಗಿದೆ. ನೀವು SSLC, PUC, ITI ಡಿಪ್ಲೋಮಾ, ಇಂಜಿನಿಯರಿಂಗ್, ನರ್ಸಿಂಗ್, ಪದವಿ, ಸ್ನಾತಕೋತ್ತರ ಪದವಿ, ಸೇರಿದಂತೆ ಯಾವುದೇ ಕೋರ್ಸ್ ಮಾಡಿದರು ಇಲ್ಲಿ ನಿಮಗೆ ಉದ್ಯೋಗ ಸಿಗಲಿದೆ. ಮತ್ತು ಸ್ಥಳದಲ್ಲಿಯೇ ವೇತನ ಮತ್ತು ಆಫರ್ ಲೆಟರ್ ಕೊಡುತ್ತಾರೆ.

ಎಷ್ಟೊಂದು ಕಂಪನಿ ಸೇರಲಿವೆ?

ಉದ್ಯೋಗ ಹುಡುಕುವರಿಗೆ ಮೊದಲು ಇದೆ ಚಿಂತೆ ಉದ್ಯೋಗ ಮೇಳದಲ್ಲಿ ಯಾವ ಯಾವ ತರಹದ ಕಂಪನಿಗಳು ಬರಲಿವೆ ಅಂದನ್ನು ತಿಳಿದು ನಂತರ ಈ ಮೇಳಕ್ಕೆ ಹೋಗಬೇಕು ಅಂತ ನೀವು ಕೂಡ ವಿಚಾರ ಮಾಡುತ್ತಿದ್ದರೆ. ಮೊದಲು ಸರಿಯಾಗಿ ನೋಡಿಕೊಳ್ಳಿ. ಸರ್ಕಾರೀ ಸ್ವಾಮ್ಯದ SBI, ಕೆನರಾ ಬ್ಯಾಂಕ್, ಖಾಸಗಿ ಕಂಪನಿಗಳಾದ ಇನ್ಫೋಸಿಸ್, ಎಕ್ಸೆಂಚರ್, ಟಿಸಿಎಸ್. ಹನಿಬೆಲ್, ವಿಪ್ರೋ, ರಿಲಿಯನ್ಸ್, ಆದಿತ್ಯ ಬಿರ್ಲಾ, ಎಚ್.ಡಿ.ಎಫ್.ಸಿ. L&T ಎಸ್‍ಬಿಐ, ವೋಡಾಫೋನ್, ಬಜಾಜ್, ಹೀರೋ, IDBI, TVS, ಪೋರ್ಟಿಸ್ ಗ್ರುಪ್, ಸೇರಿದಂತೆ ಒಟ್ಟೂ 106 ವಿವಿಧ ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಸುಮಾರು 6000 -ರಕ್ಕೂ ಹೆಚ್ಚು ಉದ್ಯೋಗ ನೀಡಲಿವೆ, ಆದ ಕಾರಣ ಈ ಹೆಚ್ಚಿನ ಸಂಖ್ಯೆಯಲ್ಲಿ ಯುವಕ- ಯುವತಿಯರು ಉದ್ಯೋಗ ಮೇಳದ ಸದುಪಯೋಗ ಪಡೆಯಬೇಕೆಂದು ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ. ಈ ಮಾಹಿತಿಯನ್ನು ಆದಷ್ಟು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ. ನಿಮ್ಮಿದಲೇ ಒಬ್ಬರಿಗೆ ಉದ್ಯೋಗ ಸಿಗಲಿ.