ಆರ್‌ಬಿಐ ಮತ್ತು ಎಸ್‌ಬಿಐನಲ್ಲಿ ಭರ್ಜರಿ ಉದ್ಯೋಗ ಅವಕಾಶ

0
809

ಆರ್‌ಬಿಐನ ಆಫೀಸರ್‌ ಹುದ್ದೆಗಳ ವಿವರಣೆ

ಖಾಲಿ ಹುದ್ದೆಗಳ ಸಂಖ್ಯೆ : 165

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಮೇ 3, 2017

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 23, 2017

ಪರೀಕ್ಷಾ ದಿನಾಂಕ: ಫೇಸ್‌-1ಜೂನ್‌ 17, ಫೇಸ್‌-2 ಜುಲೈ 7 … ಭಾರತೀಯ ರಿಸರ್ವ್‌ ಬ್ಯಾಂಕ್‌ನಲ್ಲಿ ಆಫೀಸರ್‌ ಗ್ರೇಡ್‌-ಬಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಹುದ್ದೆಗಳ ವಿವರ: ಗ್ರೇಡ್‌ ಬಿ ಆಫೀಸರ್‌ ಜನರಲ್‌-145, ಆರ್‌ಬಿಐ ಗ್ರೇಡ್‌ ಬಿ ಎಕಾನಾಮಿಕ್‌ ಮತ್ತು ಪ್ಲಾನಿಂಗ್‌ ಡಿಪಾರ್ಟ್‌ಮೆಂಟ್‌-12 ಮತ್ತು ಆರ್‌ಬಿಐ ಗ್ರೇಡ್‌ ಬಿ ಸ್ಟಾಟಿಸ್ಟಿಕಲ್‌ ಆ್ಯಂಡ್‌ ಇನ್‌ಫಾರ್ಮೆಷನ್‌ ಡಿಪಾರ್ಟ್‌ಮೆಂಟ್‌-4 ಹುದ್ದೆ ಸೇರಿದಂತೆ ಒಟ್ಟು 165 ಹುದ್ದೆಗಳಿರಲಿವೆ.

ಶೈಕ್ಷಣಿಕ ಅರ್ಹತೆ: ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ: ಅರ್ಜಿಸಲ್ಲಿಸಲು ಕನಿಷ್ಠ 21 ವರ್ಷ ಮತ್ತು ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕವೆಷ್ಟು?: ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು 850 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು 100 ರೂ. ಶುಲ್ಕ ಪಾವತಿಸಿದರೆ ಸಾಕು.

ನೇಮಕ ಪ್ರಕ್ರಿಯೆ: ಆನ್‌ಲೈನ್‌ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಒಟ್ಟು 2 ಹಂತದ ಆನ್‌ಲೈನ್‌ ಪರೀಕ್ಷೆ ನಡೆಯಲಿದೆ. ಮೊದಲ ಹಂತದ ಪರೀಕ್ಷೆಯು ಜೂನ್‌ 17 ಮತ್ತು ಎರಡನೇ ಹಂತದ ಪರೀಕ್ಷೆಯು ಜುಲೈ 7ರಂದು ನಡೆಯಲಿದೆ. ಫೇಸ್‌ 1 ಎಗ್ಸಾಂನಲ್ಲಿ 200 ಅಂಕಗಳ ಆಬ್ಜೆಕ್ಟೀವ್‌ ಮಾದರಿಯ ಪ್ರಶ್ನೆಗಳಿರುತ್ತವೆ. ಸಾಮಾನ್ಯ ಜ್ಞಾನ, ಇಂಗ್ಲಿಷ್‌ ಭಾಷೆ, ಕ್ವಾಂಟಿಟೇಟಿವ್‌ ಆಪ್ಟಿಟ್ಯೂಡ್‌, ರೀಸನಿಂಗ್‌ ವಿಷಯಗಳ ಪ್ರಶ್ನೆಗಳು ಇರಲಿವೆ. ಫೇಸ್‌ 2 ಎಗ್ಸಾಂನಲ್ಲಿ ಆಬ್ಜೆಕ್ಟಿವ್‌ ಮತ್ತು ವಿವರಣಾತ್ಮಕ ಉತ್ತರ ಬಯಸುವ ಪ್ರಶ್ನೆಗಳು ಇರುತ್ತವೆ.ಈ ಪರೀಕ್ಷೆಯು 300 ಅಂಕಗಳದ್ದಾಗಿರುತ್ತದೆ. ಸಂದರ್ಶನಕ್ಕೆ 50 ಅಂಕ ನಿಗದಿಪಡಿಸಲಾಗಿದೆ.

ಎಸ್‌ಬಿಐ ಹುದ್ದೆಗಳ ವಿವರಣೆ

ಒಟ್ಟು ಹುದ್ದೆಗಳ ಸಂಖ್ಯೆ: 554

ಹೆಚ್ಚಿನ ಮಾಹಿತಿಗೆ: www.sbi.co.in

ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಸ್ಪೆಷಲ್‌ ಮ್ಯಾನೇಜ್‌ಮೆಂಟ್‌ ಎಕ್ಸಿಕ್ಯುಟಿವ್‌ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಎಂಎಂಜಿಎಸ್‌ ಸ್ಕೇಲ್‌ -2 ವಿಭಾಗದಲ್ಲಿನ 281 ಮತ್ತು ಎಂಎಂಜಿಎಸ್‌ ಸ್ಕೇಲ್‌-3 ವಿಭಾಗದಲ್ಲಿ ನ 273 ಹುದ್ದೆಗಳು ಸೇರಿ ಒಟ್ಟು 554 ಹುದ್ದೆಗಳಿಗೆ ನೇಮಕ ನಡೆಯಲಿದೆ. ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಮೇ 3ರಿಂದ 18ರ ತನಕ ಅವಕಾಶ ನೀಡಲಾಗಿದೆ.

ಆನ್‌ಲೈನ್‌ ಎಗ್ಸಾಮ್‌, ಗ್ರೂಪ್‌ ಎಕ್ಸಸೈಜ್‌ ಮತ್ತು ಇಂಟ್ರ್ಯೂ ಮೂಲಕ ನೇಮಕ ನಡೆಯಲಿದ್ದು, ಜೂನ್‌ 18ರಂದು ನಿಗದಿತ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ರಾಜ್ಯದಲ್ಲಿ ಬೆಂಗಳೂರು ಹಾಗೂ ಮೈಸೂರಿನಲ್ಲಿ ಪರೀಕ್ಷಾ ಕೇಂದ್ರ ಇರಲಿದೆ.

ಅರ್ಹತೆಗಳೇನು?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಿಎ/ಐಸಿಡಬ್ಲ್ಯೂಎ/ಎಸಿಎಸ್‌/ಎಂಬಿಎ (ಫೈನಾನ್ಸ್‌) ಅಥವಾ ಫೈನಾನ್ಸ್‌ ವಿಷಯದಲ್ಲಿ ತತ್ಸಮಾನವಾದ ಸ್ನಾತಕೋತ್ತರ ಪದವಿ ಪಡೆದಿರಬೇಕು. ಇದರೊಂದಿಗೆ ಯಾವುದಾದರೂ ಶೆಡ್ಯೂಲ್ಡ್‌ ಕಮರ್ಷಿಯಲ್‌ ಬ್ಯಾಂಕ್‌ ಅಥವಾ ಸಾರ್ವಜನಿಕ ವಲಯದ ಯಾವುದಾದರೂ ಹಣಕಾಸು ಸಂಸ್ಥೆಯಲ್ಲಿ ಸೂಪರ್‌ವೈಸರಿ/ಮ್ಯಾನೇಜ್‌ಮೆಂಟ್‌ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಎಂಎಂಜಿಎಸ್‌ ಸ್ಕೇಲ್‌-2 ವಿಭಾಗದಲ್ಲಿನ ಹುದ್ದೆಗಳಿಗೆ ಕನಿಷ್ಠ ಎರಡು ವರ್ಷ ಹಾಗೂ ಎಂಎಂಜಿಎಸ್‌ ಸ್ಕೇಲ್‌-3 ವಿಭಾಗದಲ್ಲಿನ ಹುದ್ದೆಗಳಿಗೆ ಕನಿಷ್ಠ ಐದು ವರ್ಷ ಕೆಲಸ ಮಾಡಿರುವ ಅನುಭವ ಇರಬೇಕಾಗಿರುವುದು ಕಡ್ಡಾಯ.

ವಯೋಮಿತಿ: ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 25 ವರ್ಷ. ಎಂಎಂಜಿಎಸ್‌ ಸ್ಕೇಲ್‌-2 ಹುದ್ದೆಗಳಿಗೆ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 35 ವರ್ಷ ಹಾಗೂ ಎಂಎಂಜಿಎಸ್‌ ಸ್ಕೇಲ್‌-3 ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರ ಗರಿಷ್ಠ ವಯೋಮಿತಿ 40 ಮೀರಿರಬಾರದು. ನಿಯಮಾನುಸಾರ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಶುಲ್ಕ: ಎಸ್‌ಸಿ/ಎಸ್‌ಟಿ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 100 ರೂ. ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 600 ರೂ. ಶುಲ್ಕ ನಿಗದಿಪಡಿಸಲಾಗಿದೆ.