ಮಂಡ್ಯ ಜೆಲ್ಲೆ ಸಹಕಾರಿ ಬ್ಯಾಂಕ್‌ನಲ್ಲಿ 91 ಖಾಲಿ ಹುದ್ದೆಗಳ ನೇಮಕಾತಿ

0
2026

ಮಂಡ್ಯ ಜಿಲ್ಲಾ ಬ್ಯಾಂಕ್‌ನಲ್ಲಿ ಖಾಲಿ ಇರುವ ಮ್ಯಾನೇಜರ್‌, ಅಟೆಂಡರ್‌ ಮತ್ತು ವಾಹನ ಚಾಲಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

*ಖಾಲಿ ಹುದ್ದೆ : 91

ಮ್ಯಾನೇಜರ್‌ ಹುದ್ದೆ:

ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಎಂಸಿಎ ಅಥವಾ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಬಿಇ ಓದಿದ್ದು, ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕನಿಷ್ಠ ಎರಡು ವರ್ಷ ಸೇವಾನುಭವರುವ ಅಭ್ಯರ್ಥಿಗಳು ಮ್ಯಾನೇಜರ್‌ ಗ್ರೇಡ್‌ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಒಂದು ಹುದ್ದೆಯಷ್ಟೇ ಖಾಲಿ ಇದೆ.

ಇನ್ನು ಗ್ರೂಪ್‌ ಬಿ ವೃಂದದಲ್ಲಿ ಕಿರಿಯ ಸಹಾಯಕರು/ಮೇಲ್ವಿಚಾರಕರು/ನಗದು ಸಹಾಯಕರ ಹುದ್ದೆ ಸೇರಿ ಒಟ್ಟು 69 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶೇಕಡಾ 50 ಅಂಕಗಳೊಂದಿಗೆ ಪದವಿ (ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಶೇಕಡಾ 45) ಪಡೆದಿರಬೇಕು.ಕಂಪ್ಯೂಟರ್‌ ಜ್ಞಾನವುಳ್ಳವರಿಗೆ ಮೊದಲ ಆದ್ಯತೆ.

ಉಳಿದಂತೆ ಒಂದು ವಾಹನ ಚಾಲಕ ಹುದ್ದೆ ಖಾಲಿ ಇದ್ದು, ಎಸ್‌ಎಸ್‌ಎಲ್‌ಸಿ ತೇರ್ಗಡೆಯಾಗಿರುವ ಮತ್ತು ಸರ್ಕಾರ ನಿಗದಿಪಡಿಸಿರುವ 4 ಚಕ್ರ ಲಘು ವಾಹನ ಚಾಲನೆ ಪರವಾನಗಿ ಹೊಂದಿದ್ದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಂತೆಯೇ 20 ಅಟೆಂಡರ್‌ ಹುದ್ದೆಗಳು ಖಾಲಿ ಇವೆ. ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಶಿಕ್ಷಣ ಪಡೆದಿರುವ ಅಭ್ಯರ್ಥಿಗಳು ಅಟೆಂಡರ್‌ಗಳಾಗಬಹುದು.

ವಯೋಮಿತಿ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಾಗಿದ್ದಲ್ಲಿ ಐದು ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ:

ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 1000 ರೂಪಾಯಿ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 500 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಶುಲ್ಕ ಪಾವತಿಗೆ ವೆಬ್‌ಸೈಟ್‌ನಲ್ಲಿ ‘ಪೋಸ್ಟ್‌ ಆಫೀಸ್‌ ಚಲನ್‌’ ಎಂದು ಕ್ಲಿಕ್‌ ಮಾಡಿ, ಚಲನ್‌ ಪ್ರತಿಯನ್ನು ಡೌನ್‌ಲೋಡ್‌ ಮಾಡಿಕೊಂಡು ರಾಜ್ಯದ ಯಾವುದೇ ಇ-ಪಾವತಿ ಅಂಚೆ ಕಚೇರಿಗೆ ಹೋಗಿ ಶುಲ್ಕ ಪಾವತಿಸಬಹುದಾಗಿದೆ.

ಕ್ವಿಕ್‌ ಲುಕ್‌

-ಅರ್ಜಿ ಸಲ್ಲಿಸಲು ಕೊನೆ ದಿನ: ನವೆಂಬರ್‌ 25, 2016

-ಶುಲ್ಕ ಪಾವತಿಗೆ ಕೊನೆ ದಿನ: ನವೆಂಬರ್‌ 26, 2016

-ಸಹಾಯವಾಣಿ: 8197367453

-ವಿವರಗಳಿಗೆ: www.recruit-app.com/dccb-2016