ಇಂಜಿನಿಯರ್-ಗಳಿಗೆ ಸರ್ಕಾರದಲ್ಲಿ ಭಾರಿ ಉದ್ಯೋಗಾವಕಾಶಗಳು, ತಪ್ಪದೇ ಅರ್ಜಿ ಸಲ್ಲಿಸಿ!!

0
665
  • ಸಂಸ್ಥೆ: National Aluminium Company Ltd
  • ಎಂಜಿನಿಯರಿಂಗ್‌ ಪದವೀಧರರಿಗೆ ಉದ್ಯೋಗ
  • ಖಾಲಿ ಇರುವ ಹುದ್ದೆಗಳು 115
  • ಗೇಟ್‌ ಅರ್ಹತೆ ಕಡ್ಡಾಯ
  • ಅರ್ಜಿ ಸಲ್ಲಿಸಲು ಕೊನೆ ದಿನ: ಮೇ 22, 2018
  • ಸಂದರ್ಶನದ ಮೂಲಕ ಆಯ್ಕೆ
  • ವಿವರಗಳಿಗೆ: www.nalcoindia.com


National Aluminium Company Ltd ಗೇಟ್‌ ಅರ್ಹತೆ ಆಧಾರದಲ್ಲಿ ಎಂಜಿನಿಯರಿಂಗ್‌ ಪದವೀಧರರನ್ನು ನೇಮಕ ಮಾಡಿಕೊಳ್ಳಲಿದೆ. ಕೇವಲ online ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದ್ದು ಮೇ 22, 2018 ಅರ್ಜಿ ಸಲ್ಲಿಸಲು ಕೊನೆಯ ದಿನ.

ಮೆಕ್ಯಾನಿಕಲ್‌, ಎಲೆಕ್ಟ್ರಿಕಲ್‌, ಎಲೆಕ್ಟ್ರಾನಿಕ್ಸ್‌, ಇನ್‌ಸ್ಟ್ರುಮೆಂಟೇಶನ್‌ ಮತ್ತು ಮೆಟಲರ್ಜಿ ವಿಭಾಗಗಳಲ್ಲಿ ಒಟ್ಟು 115 ಗ್ರ್ಯಾಜುಯೇಟ್‌ ಎಂಜಿನಿಯರ್‌ಗಳ ನೇಮಕ ನಡೆಯಲಿದೆ, ಇದು 2018ರ GATE ಸ್ಕೋರ್-ನ ಅನ್ವಯ ನಡೆಯಲಿದೆ.

ಅರ್ಹತೆ: ಮೆಕ್ಯಾನಿಕಲ್‌/ಪ್ರೊಡಕ್ಷನ್‌ ಎಂಜಿನಿಯರಿಂಗ್‌, ಎಲೆಕ್ಟ್ರಿಕಲ್‌/ಪವರ್‌ ಎಂಜಿನಿಯರಿಂಗ್‌/ಎಲೆಕ್ಟ್ರಾನಿಕ್ಸ್‌, ಇನ್‌ಸ್ಟ್ರುಮೆಂಟೇಶನ್‌, ಟೆಲಿಕಾಂ ಅಥವಾ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌/ ಮತ್ತು ಮೆಟಲರ್ಜಿ ಕಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ತಕ್ಕ ವಿಭಾಗಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ನಿಗದಿತ ವಿದ್ಯಾರ್ಹತೆಯಲ್ಲಿ ಎಸ್‌ಸಿ/ಎಸ್‌ಟಿ/ಅಂಗವಿಕಲ ಅಭ್ಯರ್ಥಿಗಳು ಕನಿಷ್ಠ ಶೇಕಡಾ 40 ಅಂಕಗಳನ್ನು ಪಡೆದು ಪಾಸಾಗಿರಬೇಕು. ಉಳಿದವರು ಮೊದಲ ದರ್ಜೆಯಲ್ಲಿ (ಶೇಕಡಾ 65 ಅಂಕಗಳು) ತೇರ್ಗಡೆಯಾಗಿರುವುದು ಕಡ್ಡಾಯ.

ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು 500 ರೂ. ಹಾಗೂ ಎಸ್‌ಸಿ/ಎಸ್‌ಟಿ/ಅಂಗವಿಕಲ ಅಭ್ಯರ್ಥಿಗಳಿಗೆ 100 ರೂ. ಶುಲ್ಕ ನಿಗದಿಪಡಿಸಲಾಗಿದೆ.

ವಯಸ್ಸು: ಅಭ್ಯರ್ಥಿಗಳ ಗರಿಷ್ಠ ವಯಸ್ಸು 30 ವರ್ಷ. ಸರ್ಕಾರಿ ನಿಯಮಾನುಸಾರ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ವರ್ಗದವರಿಗೆ ಮೂರು ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.