ವಿದ್ಯುತ್‌ ನಿಗಮದಲ್ಲಿ ಉದ್ಯೋಗ ಅವಕಾಶ

0
2711

ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಖಾಲಿ ಇರುವ ‘ಬಾಯ್ಲರ್ ಅಟೆಂಡೆಂಟ್’ ಹುದ್ದೆಗೆ ಅರ್ಜಿ ಸಲ್ಲಿಸಿ.

ವಿದ್ಯುತ್ ನಿಗಮದಲ್ಲಿ ಒಟ್ಟು ಹುದ್ದೆ: 85
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಸೆಪ್ಟೆಂಬರ್ 29, 2016
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 24, 2016
ಹೆಚ್ಚಿನ ಮಾಹಿತಿಗೆ ಭೇಟಿ ನೀಡಬೇಕಾದ ವೆಬ್ಸೈಟ್ ವಿಳಾಸ: http://karnatakapower.com

ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸ್ಥಾಪಿಸಿರುವ ಮತ್ತು ಸ್ಥಾಪನೆಗೊಳ್ಳಲಿರುವ ಶಾಖೋತ್ಪನ್ನ ಸ್ಥಾವರಗಳಿಗಾಗಿ ಬಾಯ್ಲರ್ ಅಟೆಂಡೆಂಟ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಹುದ್ದೆಗಳ ವಿವರ:

ಡಬ್ಲ್ಯುಇ- ಬಾಯ್ಲರ್ ಅಟೆಂಡೆಂಟ್ ಗ್ರೇಡ್-2 ಹುದ್ದೆಯಿದೆ. ಇದರಲ್ಲಿ ಹೈದರಾಬಾದ್ ಕರ್ನಾಟಕಕ್ಕೆ 68 ಮತ್ತು ಕರ್ನಾಟಕದ ಇತರ ಭಾಗಕ್ಕೆ 17 ಹುದ್ದೆಗಳು ಸೇರಿದಂತೆ ಒಟ್ಟು 85 ಹುದ್ದೆಗಳಿವೆ.

ಅರ್ಹತೆಗಳೇನಿರಬೇಕು?:

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ ವಿದ್ಯಾರ್ಹತೆ ಎಸ್ಎಸ್ಎಲ್ಸಿ ಅಥವಾ ತತ್ಸಮಾನ. ಇದು ರೆಗ್ಯುಲರ್ ಕೋರ್ಸ್ ಆಗಿರಬೇಕು. ಕರ್ನಾಟಕ ಸರಕಾರ ನಡೆಸುವ ಬಾಯ್ಲರ್ ಅಟೆಂಡೆಂಟ್ ಗ್ರೇಡ್ 2ನ ಸಾಮರ್ಥ್ಯ ಪ್ರಮಾಣ ಪತ್ರ ಅಥವಾ ತತ್ಸಮಾನ ಪ್ರಮಾಣ ಪತ್ರವನ್ನು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಡೆದಿರಬೇಕು. ಬಾಹ್ಯ ಅಥವಾ ಮುಕ್ತ ವಿಶ್ವವಿದ್ಯಾಲಯದಿಂದ ಪಡೆದಿರುವ ಎಸ್ಎಸ್ಎಲ್ಸಿ/10ನೇ ತರಗತಿ(ಬ್ರಿಡ್ಜ್ ಕೋರ್ಸ್ಗಳು) ಶಿಕ್ಷಣವನ್ನು ಈ ಹುದ್ದೆಗೆ ಪರಿಗಣಿಸಲಾಗುವುದಿಲ್ಲ ಎಂದು ಕರ್ನಾಟಕ ವಿದ್ಯುತ್ ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.

ಅರ್ಜಿ ಸಲ್ಲಿಕೆ:

ಆನ್ಲೈನ್ನಲ್ಲಿ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದೇ ಸೆಪ್ಟೆಂಬರ್ 29ರಂದು ಅರ್ಜಿ ಸಲ್ಲಿಸಲು ಕರ್ನಾಟಕ ಪವರ್ನ ವೆಬ್ಸೈಟ್ನಲ್ಲಿ ಲಿಂಕ್ ಕಾಣಿಸಿಕೊಳ್ಳಲಿದೆ. ಅಕ್ಟೋಬರ್ 24, 2016ರ ಸಂಜೆ 5 ಗಂಟೆವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಅಂಚೆ/ಕೊರಿಯರ್ ಅಥವಾ ಖುದ್ದಾಗಿ ಬಂದು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಸಂಪೂರ್ಣ ಮಾಹಿತಿ ಪಡೆಯಲು ಭೇಟಿ ನೀಡಬೇಕಾದ ವಿಳಾಸ: ನಂ 82, ಶಕ್ತಿ ಭವನ, ರೇಸ್ ಕೋರ್ಸ್ ರಸ್ತೆ, ಬೆಂಗಳೂರು-560001. ದೂರವಾಣಿ ಮೂಲಕವೂ ಮಾಹಿತಿ ಪಡೆಯಬಹುದಾಗಿದೆ. ಮೊಬೈಲ್ ಸಂಖ್ಯೆ: 8105884716. ಈ ಸಂಖ್ಯೆಗೆ ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮತ್ತು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಕರೆ ಮಾಡಲು ಅವಕಾಶವಿದೆ. ರಜಾದಿನಗಳಲ್ಲಿ ಕರೆ ಸ್ವೀಕರಿಸುವುದಿಲ್ಲ.

ಸೆಕ್ರೆಟರಿ ಮತ್ತು ಸಹಾಯಕ ಹುದ್ದೆಗಳು

ಕರ್ನಾಟಕ ವಿದ್ಯುತ್ ನಿಗಮದಲ್ಲಿ ವಿವಿಧ ಹುದ್ದೆಗಳ ನೇಮಕಕ್ಕಾಗಿ ಈ ಹಿಂದೆ ಅಧಿಸೂಚನೆ ಹೊರಡಿಸಲಾಗಿದೆ. ವಿಕೆ ಮಿನಿ ಈ ಹಿಂದೆ ಮಾಹಿತಿ ನೀಡಿದಂತೆ ಬೆಂಗಳೂರಿನ ಕೆಪಿಸಿಎಲ್ ಕಚೇರಿಯಲ್ಲಿ ಜನರಲ್ ಮ್ಯಾನೇಜರ್ ಆ್ಯಂಡ್ ಸೆಕ್ರೆಟರಿ ಮತ್ತು ಸಹಾಯಕ ಕಂಪನಿ ಸೆಕ್ರೆಟರಿ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂದು ಅಂದರೆ, ಸೆಪ್ಟೆಂಬರ್ 26ರಿಂದ ಅವಕಾಶ ನೀಡಲಾಗಿದೆ. ಸ್ನಾತಕೋತ್ತರ ಪದವೀಧರರು ಮತ್ತು ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾದಲ್ಲಿ ಸದಸ್ಯತ್ವ ಪಡೆದವರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೂ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 25, 2016 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗೆ ವಿದ್ಯುತ್ ನಿಗಮದ ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ.