ಅಂಚೆ ಬ್ಯಾಂಕ್‌ನಲ್ಲಿ ಭಾರಿ ಹುದ್ದೆಗಳು

0
2947

ಅಂಚೆ ಬ್ಯಾಂಕ್‌ನಲ್ಲಿ ಭರ್ಜರಿ ಜಾಬ್ಸ್‌

ಮಾಹಿತಿಗೆ ವೆಬ್‌: www.indiapost.gov.in

ಅಂಚೆ ಇಲಾಖೆಯ ಅಂಗಸಂಸ್ಥೆಯಾಗಿ ಮುಂದಿನ ವರ್ಷ ಆರಂಭವಾಗಲಿರುವ ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ (ಐಪಿಪಿಬಿ)ನ ವಿವಿಧ ಹುದ್ದೆಗಳ ನೇಮಕಕ್ಕೆ ಚಾಲನೆ ನೀಡಲಾಗಿದೆ. ಐಪಿಪಿಬಿಯಲ್ಲಿರುವ ಕಿರಿಯ ಶ್ರೇಣಿಯಿಂದ ಹಿರಿಯ ಶ್ರೇಣಿಯವರೆಗಿನ ವಿವಿಧ 1,738ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಮ್ಯಾನೇಜರ್‌, ಸೀನಿಯರ್‌ ಮ್ಯಾನೇಜರ್‌

ಈ ಬ್ಯಾಂಕ್‌ನ ಪ್ರಧಾನ ಕಚೇರಿ ನವದೆಹಲಿಯಲ್ಲಿರಲ್ಲಿದ್ದು, ದೇಶಾದ್ಯಂತ 650ಕ್ಕೂ ಹೆಚ್ಚು ಶಾಖೆಗಳನ್ನು ತೆರೆಯಲಿದೆ. ಹುದ್ದೆಗಳ ವಿವರ ಮ್ಯಾನೇಜರ್‌, ಸೀನಿಯರ್‌ ಮ್ಯಾನೇಜರ್‌(ಸ್ಕೇಲ್‌-2 ಮತ್ತು 3 ಆಫೀಸರ್ಸ್‌): ಒಟ್ಟು 1060 ಹುದ್ದೆಗಳಿವೆ.

ಅರ್ಜಿ ಸಲ್ಲಿಸಲು ಆರಂಭ: ಅಕ್ಟೋಬರ್‌ 7 ಮತ್ತು ಕೊನೆಯ ದಿನಾಂಕ ನವೆಂಬರ್‌ 1, 2016.

ಅಸಿಸ್ಟೆಂಟ್‌ ಮ್ಯಾನೇಜರ್‌

ಈ ಹುದ್ದೆಗಳು ಶಾಖೆಗಳಲ್ಲಿ, ಏರಿಯಾ ಸೇಲ್ಸ್‌, ಏರಿಯಾ ಅಪರೇಷನ್‌, ರಿಟೇಲ್‌ ಪ್ರಾಡಕ್ಟ್ಸ್, ಮರ್ಚಂಟ್‌ ಪ್ರಾಡಕ್ಟ್ಸ್, ಟ್ಯಾಕ್ಸೆಷನ್‌, ಟ್ರೈನಿಂಗ್‌, ಎಚ್‌ಆರ್‌, ಮಾರ್ಕೆಟಿಂಗ್‌ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಇರಲಿವೆ. ಬಿ.ಟೆಕ್‌, ಯಾವುದೇ ಪದವಿ, ಸಿಎ/ಎಂಬಿಎ ಪದವೀಧರರು ಅರ್ಜಿ ಸಲ್ಲಿಸಬಹುದು. ಅಸಿಸ್ಟೆಂಟ್‌ ಮ್ಯಾನೇಜರ್‌ (ಟೆರಿಟರಿ): 650 ಹುದ್ದೆಗಳಿವೆ.

ಅರ್ಜಿ ಸಲ್ಲಿಕೆ ಆರಂಭ: ಅಕ್ಟೋಬರ್‌ 4 ಮತ್ತು ಕೊನೆಯ ದಿನ: ಅಕ್ಟೋಬರ್‌ 25, 2016.

ಆನ್‌ಲೈನ್‌ ಪರೀಕ್ಷಾ ದಿನಾಂಕ: ಡಿಸೆಂಬರ್‌ 2016 ಮತ್ತು ಜನವರಿ 2017.

ವಯೋಮಿತಿ: 20-30 ವರ್ಷ.

ಚೀಫ್‌ ಮ್ಯಾನೇಜರ್‌

ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಎಜಿಎಂ, ಡಿಜಿಎಂ, ಚೀಫ್‌ ಮ್ಯಾನೇಜರ್‌(ಸ್ಕೇಲ್‌-4): ಒಟ್ಟು 12 ಹುದ್ದೆಗಳಿವೆ. ಯಾವುದೇ ವಿಷಯದಲ್ಲಿ ಪದವಿ, ಐಸಿಎಐನಿಂದ ಸಿಎ, ಎಂಬಿಎ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅವಕಾಶವಿದೆ.

ಅಕ್ಟೋಬರ್‌ 4ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಕ್ಟೋಬರ್‌ 25, 2016 ಕೊನೆಯ ದಿನಾಂಕವಾಗಿದೆ.

ಕಂಪನಿ ಸೆಕ್ರೆಟರಿ

ಈ ಹುದ್ದೆಗಳು ಅಪರೇಷನ್ಸ್‌, ರಿಸ್ಕ್‌ ಆ್ಯಂಡ್‌ ಕಾಂಪ್ಲಿಯೆನ್ಸ್‌, ಫೈನಾನ್ಸ್‌, ಎಚ್‌ಆರ್‌ ಆ್ಯಂಡ್‌ ಅಡ್ಮಿನಿಸ್ಪ್ರೇಷನ್‌, ಪ್ರೋಗ್ರಾಂ ಮ್ಯಾನೇಜ್‌ಮೆಂಟ್‌ ಆಫೀಸ್‌, ಪ್ರಾಡಕ್ಟ್, ಮಾರ್ಕೆಟಿಂಗ್‌, ಟೆಕ್ನಾಲಜಿ ವಿಭಾಗದಲ್ಲಿ ಇರಲಿದೆ. ಎಜಿಎಂ, ಚೀಫ್‌ ಮ್ಯಾನೇಜರ್‌, ಕಂಪನಿ ಸೆಕ್ರೆಟರಿ: ಒಟ್ಟು 9 ಹುದ್ದೆಗಳಿವೆ. ಬಿ.ಟೆಕ್‌, ಯಾವುದೇ ಪದವಿ, ಭಾರತೀಯ ಸೆಕ್ರೆಟರಿ ಕೌನ್ಸಿಲ್‌ ಆಫ್‌ ಇಂಡಿಯಾದ ಅಸೋಸಿಯೇಟ್‌ ಮೆಂಬರ್‌ ಆಗಿರುವವರು ಅರ್ಜಿ ಸಲ್ಲಿಸಬಹುದು.

ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಕ್ಟೋಬರ್‌ 19, 2016 ಕೊನೆಯ ದಿನಾಂಕವಾಗಿದೆ.

ಜಿಎಂ, ಸಿಜಿಎಂ

ಜಿಎಂ, ಸಿಜಿಎಂ(ಸ್ಕೇಲ್‌ 7 ಆಫೀಸರ್ಸ್‌): ಒಟ್ಟು 5 ಹುದ್ದೆಗಳಿವೆ. ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್‌ 19, 2016 ಕೊನೆಯ ದಿನಾಂಕವಾಗಿದೆ.

ಸಿಜಿಎಂ/ಚೀಫ್‌ ಟೆಕ್ನಾಲಜಿ ಆಫೀಸರ್ಸ್‌

ಸಿಜಿಎಂ/ಚೀಫ್‌ ಟೆಕ್ನಾಲಜಿ ಆಫೀಸರ್ಸ್‌: 1 ಹುದ್ದೆ ಖಾಲಿ ಇದೆ. ಬಿಟೆಕ್‌ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆ ಇರುವವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಕ್ಟೋಬರ್‌ 19, 2016 ಕೊನೆಯ ದಿನಾಂಕವಾಗಿದೆ.

ಸಿಇಒ/ಎಂಡಿ

ಸಿಇಒ/ಎಂಡಿ: ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಯಾವುದೇ ಪದವಿ ಶಿಕ್ಷಣ ಪಡೆದವರು ಮತ್ತು ಸಂಬಂಧಪಟ್ಟ ಅನುಭವ ಇರುವವರು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆ ಹೇಗೆ? ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಆಯಾ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ. ಇಂಡಿಯಾ ಪೋಸ್ಟ್‌ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಅಧಿಸೂಚನೆಗಳಲ್ಲಿ ಪ್ರತಿಯೊಂದು ಹುದ್ದೆಯ ಜಾಬ್‌ ರೋಲ್‌, ಅರ್ಹತೆಗಳು, ಮೀಸಲಾತಿ, ಹುದ್ದೆಗಳ ವರ್ಗೀಕರಣ ಸೇರಿದಂತೆ ಸಂಪೂರ್ಣ ಮಾಹಿತಿ ಲಭ್ಯವಿದೆ.

ಮಾಹಿತಿಗೆ ವೆಬ್‌: www.indiapost.gov.in