ಅಮ್ಮಂದಿರೆ ಮಕ್ಕಳ ಆರೈಕೆಗೆಂದು ಜಾನ್ಸನ್​ ಆ್ಯಂಡ್​ ಜಾನ್ಸನ್​ ಕಂಪನಿಯ ಉತ್ಪನಗಳನ್ನು ಬಳಸುವ ಮುನ್ನ ಎಚ್ಚರ; ಯಾಕೆ ಅಂತ ಈ ಮಾಹಿತಿ ನೋಡಿ.!

0
281

ಹಲವು ದಿನಗಳಿಂದ ಜಾನ್ಸನ್​ ಆ್ಯಂಡ್​ ಜಾನ್ಸನ್​ ಕಂಪನಿ ಒಂದಿಲ್ಲದೊಂದು ವಿವಾದವನ್ನು ಎದುರಿಸುತ್ತಿದ್ದು, ಮಕ್ಕಳಿಗಾಗಿಯೇ ಬಳಸುವ ಹಲವು ವಸ್ತುಗಳು ತಯಾರಿ ಮನೆಯ ಮಾತಾಗಿದ್ದ ಕಂಪನಿಯ ಉತ್ಪನಗಳಲ್ಲಿ ಕ್ಯಾನ್ಸರ್​ಕಾರಕ ಅಂಶ ಪತ್ತೆಯಾಗಿದ್ದು, ಸಾಕಷ್ಟು ದಂಡವನ್ನು ಕೂಡ ಕಕ್ಕುವಂತೆ ಆಗಿದೆ. ಈಗ ಮತ್ತೊಂದು ವಿವಾದ ಎದಿದ್ದು, ಬೇಬಿಪೌಡರ್‌ನಲ್ಲಿ ಕ್ಯಾನ್ಸರ್ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಕಂಪೆನಿ, ವಿವಾದಿತ ಉತ್ಪನ್ನವನ್ನು ಮಾರುಕಟ್ಟೆಯಿಂದ 33 ಸಾವಿರ ಡಬ್ಬಗಳನ್ನು ವಾಪಸ್ ಪಡೆದಿದೆ.

ಹೌದು ಮಕ್ಕಳ ತ್ವಚೆಯ ಆರೈಕೆಯೇ ನಮ್ಮ ಗುರಿ ಎನ್ನುತ್ತಿದ್ದ ಶತಮಾನದ ಇತಿಹಾಸ ಹೊಂದಿರುವ ಜಾನ್ಸನ್​ ಆ್ಯಂಡ್​ ಜಾನ್ಸನ್​ ಕಂಪನಿಯ ಹಲವು ಉತ್ಪನ್ನಗಳು ಸಾಕಷ್ಟು ವಿವಾದಕ್ಕೆ ಗುರಿಯಾಗುತ್ತಲೇ ಇವೆ. ಅಲ್ಲದೇ ಈ ಕುರಿತು ಗ್ರಾಹಕರು ಕೂಡ ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಾರೆ. ಈಗ ಈ ಬೇಬಿ ಪೌಡರ್​ನಲ್ಲಿ ಕಾಲ್ನಾರಿನ ಅಂಶ ಪತ್ತೆಯಾಗಿದ್ದು, ಕಂಪನಿಯೇ 33 ಸಾವಿರ ಡಬ್ಬಗಳನ್ನು ಹಿಂಪಡೆಯಲು ನಿರ್ಧರಿಸಿದೆ. ಏಕೆಂದರೆ ಬಹಳಷ್ಟು ದಿನಗಳಿಂದ ಬಹುರಾಷ್ಟ್ರೀಯ ಸಂಸ್ಥೆಯಾದ ಜಾನ್ಸನ್ & ಜಾನ್ಸನ್ ಉತ್ಪಾದಿಸುವ ಬೇಬಿಪೌಡರ್‌ನಲ್ಲಿ ಕ್ಯಾನ್ಸರ್‌ಕಾರಕ ಕಲ್ನಾರು ಅಂಶವಿದೆ ಎಂಬ ವಾದವನ್ನು ಹಲವು ತಿಂಗಳುಗಳಿಂದ ನಿರಾಕರಿಸುತ್ತಾ ಬಂದಿತ್ತು.

ಈಗ ಕಂಪೆನಿ ಅಮೆರಿಕದ ಫುಡ್ & ಡ್ರಗ್ ಅಡ್ಮಿನಿಸ್ಟ್ರೇಷನ್ ಸೂಚನೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ. ಆನ್‌ಲೈನ್ ಮಾರಾಟಗಾರರ ಬಳಿ ಖರೀದಿಸಿದ ಬೇಬಿಪೌಡರ್ ಬಾಟಲಿಯನ್ನು ಪರೀಕ್ಷೆಗೆ ಗುರಿಪಡಿಸಿದಾಗ ಈ ಮಾದರಿಯಲ್ಲಿ ಕ್ರಿಸೊಟೈಲ್ ಕಲ್ನಾರು ಅಂಶ ಪತ್ತೆಯಾಗಿದೆ ಎಂದು ಜಾನ್ಸನ್ ಆ್ಯಂಡ್ ಜಾನ್ಸನ್ ಒಪ್ಪಿಕೊಂಡಿದೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ ಮೊದಲ ಬಾರಿ ಕಂಪನಿ ಅಮೆರಿಕದ ಮಾರುಕಟ್ಟೆಗೆ ಬಿಟ್ಟ ಸುಮಾರು 33 ಸಾವಿರ ಪೌಡರ್​ ಡಬ್ಬಗಳನ್ನು ಹಿಂಪಡೆದಿದೆ. ಆನ್​ಲೈನ್​ನಲ್ಲಿ ಮಾರಾಟವಾಗುತ್ತಿದ್ದ ಈ ಪೌಡರ್​ ಡಬ್ಬದಲ್ಲಿ ಕಲ್ನಾರಿನ ಅಂಶ ಪತ್ತೆಯಾಗಿದೆ ಎಂದು ಅಮೆರಿಕದ ಆರೋಗ್ಯ ನಿಯಂತ್ರಕರು ತಿಳಿಸಿದ್ದಾರೆ. ಈ ಹಿನ್ನೆಲೆ ಕಂಪನಿ ಈ ನಿರ್ಧಾರಕ್ಕೆ ಬಂದಿದೆ.

ಉತ್ಪನ್ನದ ಮಾದರಿ ಪರೀಕ್ಷಿಸಿದ ಆರೋಗ್ಯ ನಿಯಂತ್ರಕರಿಗೆ ಇದರಲ್ಲಿ ಕಲ್ನಾರಿನ ಅಂಶ ಪತ್ತೆಯಾಗಿದೆ. ಇದು ಕ್ಯಾನ್ಸರ್​ಕಾರಕವಾಗಿದ್ದು, ಹಾನಿಕಾರಕ ಮೆಸೊಥೋಲಿಯಂ ಅಂಶ ಹೊಂದಿದೆ ಎಂದು ತಿಳಿಸಿದ್ದಾರೆ. 130 ವರ್ಷದ ಈ ಕಂಪನಿಯ ಅನೇಕ ಉತ್ಪನ್ನಗಳು 15 ಸಾವಿರಕ್ಕೂ ಹೆಚ್ಚು ಕಾನೂನು ತೊಡಕು ಎದುರಿಸುತ್ತಿವೆ. ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಕಂಪನಿಯ ಮಹಿಳಾ ಆರೋಗ್ಯದ ಮುಖ್ಯಸ್ಥೆ ಸುಸನ್​ ನಿಕೋಲಸನ್, ಪೌಡರ್​ನಲ್ಲಿ ಕಲ್ನಾರಿನ ಅಂಶ ಪತ್ತೆಯಾಗಿರುವುದು ನಿಜಕ್ಕೂ ಕಳವಳಕಾರಿ. ನಮ್ಮ ಪರೀಕ್ಷೆಯಲ್ಲಿ ಈ ರೀತಿಯ ಯಾವುದೇ ಅಂಶ ಪತ್ತೆಯಾಗಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಕೆಲವೇ ದಿನಗಳ ಹಿಂದೆಯೇ ಜಾನ್ಸನ್ & ಜಾನ್ಸನ್ ಕಂಪೆನಿ ತನ್ನ ಆ್ಯಂಟಿಸೈಕೋಟಿಕ್ (ಕೆಲವೊಂದು ಮಾನಸಿಕ ಕಾಯಿಲೆಗಳ) ಔಷಧಿ ರಿಸ್ಪೆರ್ಡಾಲ್ ಸೇವಿಸುವ ಯುವಕರಲ್ಲಿ ಸ್ತನಗಳ ಬೆಳವಣಿಗೆಯಾಗುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿಲ್ಲ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ ವ್ಯಕ್ತಿಯೊಬ್ಬನಿಗೆ 8 ಬಿಲಿಯನ್ ಡಾಲರ್ ಪರಿಹಾರ ಪಾವತಿಸುವಂತೆ ಫಿಲೆಡೆಲ್ಫಿಯಾ ನ್ಯಾಯಾಲಯ ಕಂಪೆನಿಗೆ ಆದೇಶಿಸಿತ್ತು. ಈಗ ಮತ್ತೆ ಬೇಬಿಪೌಡರ್‌ನಲ್ಲಿ ಕಲ್ನಾರು ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಕಂಪೆನಿ, ವಿವಾದಿತ ಉತ್ಪನ್ನವನ್ನು ಮಾರುಕಟ್ಟೆಯಿಂದ ವಾಪಸ್ ಪಡೆದಿದೆ.