ಮಹಿಳೆಯರ ನೆಚ್ಚಿನ ಜಾನ್ಸನ್ & ಜಾನ್ಸನ್ ಕಂಪೆನಿಗೆ 8 ಬಿಲಿಯನ್ ಡಾಲರ್ ಪರಿಹಾರ ನೀಡಲು ಕೋರ್ಟ್ ಆದೇಶ; ಯಾವುದಕ್ಕಾಗಿ ಇಷ್ಟೊಂದು ದಂಡ??

0
310

ಹಲವು ದಿನಗಳಿಂದ ಜಾನ್ಸನ್ & ಜಾನ್ಸನ್ ಕಂಪೆನಿ ವಿರುದ್ದ ಆರೋಪಗಳು ಕೇಳಿ ಬರುತ್ತಿದ್ದು, ಈಗ ಮತ್ತೆ 8 ಬಿಲಿಯನ್ ಡಾಲರ್ ಪರಿಹಾರ ಪಾವತಿಸುವಂತೆ ಫಿಲೆಡೆಲ್ಫಿಯಾ ನ್ಯಾಯಾಲಯ ಕಂಪೆನಿಗೆ ಆದೇಶಿಸಿದೆ. ಇಷ್ಟೊಂದು ದೊಡ್ಡ ಮಟ್ಟದ ಪರಿಹಾರಕ್ಕೆ ಜಾನ್ಸನ್ & ಜಾನ್ಸನ್ ಕಂಪೆನಿ ಮಾಡಿದ ತಪ್ಪಾದರೂ ಏನು ಅನಿಸಬಹುದು, ಕಂಪೆನಿ ತನ್ನ ಆ್ಯಂಟಿಸೈಕೋಟಿಕ್ (ಕೆಲವೊಂದು ಮಾನಸಿಕ ಕಾಯಿಲೆಗಳ) ಔಷಧಿ ರಿಸ್ಪೆರ್ಡಾಲ್ ಸೇವಿಸುವ ಯುವಕರಲ್ಲಿ ಸ್ತನಗಳ ಬೆಳವಣಿಗೆಯಾಗುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿಲ್ಲ ಎಂದು ಆರೋಪಿಸಿ ಪ್ರಕರಣ ದಾಖಲಾಗಿತ್ತು. 6,800 ಡಾಲರ್ ಪಾವತಿಸಲು ನ್ಯಾಯಾಲಯ ಕಂಪೆನಿಗೆ ಆದೇಶಿಸಿದೆ.

Also read: ಅಪಘಾತದಲ್ಲಿ ಮೇಕೆಯೊಂದು ಸತ್ತಿದ್ದಕ್ಕೆ ಕಂಪನಿಯೊಂದಕ್ಕೆ 2.68 ಕೋಟಿ ರೂ. ನಷ್ಟ ಉಂಟಾಗಿದೆ, ಮೇಕೆಗೂ ಕಂಪನಿಗೂ ಏನು ಸಂಬಂಧ??

ಏನಿದು ಪ್ರಕರಣ?

ಜಾನ್ಸನ್ & ಜಾನ್ಸನ್ ಕಂಪೆನಿ ಕೆಲವೊಂದು ಮಾನಸಿಕ ಕಾಯಿಲೆಗಳ ಔಷಧಿ ರಿಸ್ಪೆರ್ಡಾಲ್ ಸೇವಿಸುವ ಯುವಕರಲ್ಲಿ ಸ್ತನಗಳ ಬೆಳವಣಿಗೆಯಾಗುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿಲ್ಲ ಎಂದು ನಿಕೋಲಾಸ್ ಮುರ್ರೆ ದಾಖಲಿಸಿದರು ವ್ಯಕ್ತಿಯ ಪ್ರಕರಣ ಸಂಬಂಧಿಸಿದಂತೆ ಈ ಆದೇಶ ಹೊರಡಿಸಲಾಗಿದೆ. ಈ ಹಿಂದೆ ಪೆನ್ನಿಸಿಲ್ವೇನಿಯಾ ನ್ಯಾಯಾಲಯ ಆತನಿಗೆ ಪರಿಹಾರ ನೀಡಬೇಕೆಂದು ಹೇಳಿತ್ತು. ರಾಜ್ಯದಲ್ಲಿ ಇಂತಹ ಬಾಕಿಯಿರುವ ಸಾವಿರಾರು ಪ್ರಕರಣಗಳಲ್ಲಿ ಇದು ಒಂದಾಗಿದೆ. ಸುರಕ್ಷತೆ ಹಾಗೂ ರೋಗಿಗಳ ಹಿತದೃಷ್ಟಿಗಿಂತಲೂ ಹೆಚ್ಚಾಗಿ ತನ್ನ ಲಾಭಗಳ ಬಗ್ಗೆ ಯೋಚಿಸಿದ ಕಂಪೆನಿಯು ಬಾಧಿತ ವ್ಯಕ್ತಿಗೆ ಪರಿಹಾರ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ ಎಂದು ಮುರ್ರೆ ಅವರ ವಕೀಲರು ಹೇಳಿದ್ದಾರೆ.

Also read: ಹೊಟ್ಟೆ ಪಾಡಿಗಾಗಿ ಕೆಲಸ ಹುಡುಕುತ ಮುಂಬೈ ಹೋದ ಯುವಕರಿಗೆ ಒಲಿಯಿತು 23. ಕೋಟಿ ರೂ. ಲಾಟರಿ.!

ತಾನು ಅಪ್ರಾಪ್ತನಾಗಿದ್ದ ವೇಳೆ ತನಗೆ ಈ ಔಷಧಿಯನ್ನು ನೀಡಲಾದ ನಂತರ ತನ್ನ ಸ್ತನಗಳು ಬೆಳೆದಿದ್ದವು ಎಂದು ಮುರ್ರೆ ಆರೋಪಿಸಿದ್ದರು. ವಯಸ್ಕರಲ್ಲಿ ಸಿಝೋಫ್ರೇನಿಯಾ ಹಾಗೂ ಬೈಪೋಲಾರ್ ಮೇನಿಯಾ ಸಮಸ್ಯೆಗಳಿಗೆ ಈ ಔಷಧಿಯನ್ನು ಅಮೆರಿಕಾದ ಎಫ್‍ಡಿಎ ಈ ಔಷಧಿಯನ್ನು 1993ರಲ್ಲಿ ಅನುಮೋದಿಸಿತ್ತು. ಮಾನಸಿಕ ವೈದ್ಯರೊಬ್ಬರು ತನ್ನನ್ನು 2003ರಲ್ಲಿ ಪರೀಕ್ಷಿಸಿದ ನಂತರ ತನಗೆ ಆಟಿಸಂ ಸ್ಪೆಕ್ಟ್ರಂ ಸಮಸ್ಯೆಯಿದೆಯೆಂದು ಹೇಳಿ ಈ ಔಷಧಿಯನ್ನು ನೀಡಿದ್ದರು ಎಂದು ಈಗ 26 ವರ್ಷ ವಯಸ್ಸಿನ ಮುರ್ರೆ ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ 2015ರಲ್ಲಿ ಒಂದು ನ್ಯಾಯಾಲಯ ಆತನಿಗೆ 1.75 ಮಿಲಿಯನ್ ಡಾಲರ್ ಪರಿಹಾರ ನೀಡುವಂತೆ ಕಂಪೆನಿಗೆ ಆದೇಶಿಸಿತ್ತು. ನಂತರ ರಾಜ್ಯ ಮಟ್ಟದ ನ್ಯಾಯಾಲಯ ಈ ಅಪೀಲನ್ನು ಫೆಬ್ರವರಿ 2018ರಲ್ಲಿ ಎತ್ತಿ ಹಿಡಿದರೂ ಪರಿಹಾರ ಮೊತ್ತವನ್ನು 6,80,000 ಡಾಲರ್ ಗೆ ಇಳಿಸಿತ್ತು.

Also read: ಸ್ವಿಸ್​ ಬ್ಯಾಂಕ್-ನಲ್ಲಿ ಕಪ್ಪು ಹಣವಿಟ್ಟ ಭಾರತೀಯರ ಪಟ್ಟಿ ಬಿಡುಗಡೆ; ಕೆಲವೇ ದಿನಗಳಲ್ಲಿ ಭಾರತಕ್ಕೆ ಬರಲಿದೆ ಕಪ್ಪು ಹಣ.!

ಕಳೆದ ವರ್ಷವೂ ಕೂಡ ಜಾನ್ಸನ್ ಆಯಂಡ್ ಜಾನ್ಸನ್ ಕಂಪೆನಿಯ ಟಾಲ್ಕಂ ಪೌಡರ್ ಶಿಶು ಉತ್ಪನ್ನಗಳ ಬಳಕೆಯಿಂದ ತಮಗೆ ಅಂಡಾಶಯ ಕ್ಯಾನ್ಸರ್ ಉಂಟಾಗಿದೆ ಎಂದು ಆರೋಪಿಸಿ 22 ಮಹಿಳೆಯರ ದೂರಿಗೆ ಸಂಬಂಧಿಸಿ ಅಮೆರಿಕದ ಮಿಸ್ಸೋರಿಯ ಸೈಂಟ್ ಲೂಯಿಸ್ ನಲ್ಲಿರುವ ನ್ಯಾಯಾಲಯ ಆದೇಶದಲ್ಲಿ ಸಂತ್ರಸ್ತ ಮಹಿಳೆಯರು ಮತ್ತವರ ಕುಟುಂಬಗಳಿಗೆ ಕಂಪೆನಿಯು 4.69 ಬಿಲಿಯನ್ ಡಾಲರ್ ಪರಿಹಾರ ನೀಡಬೇಕೆಂದು ಸೂಚಿಸಿತ್ತು, ಕಂಪೆನಿಯ ಶಿಶುಗಳ ಉತ್ಪನ್ನವಾದ ಟಾಲ್ಕಂ ಪೌಡರ್ ನಲ್ಲಿರುವ ಎಸ್ಬೆಸ್ಟೋಸ್ ತಮಗೆ 1970ರ ದಶಕದಿಂದ ಅಂಡಾಶಯ ಕ್ಯಾನ್ಸರಿಗೆ ಕಾರಣವಾಗಿದೆ ಎಂದು ದೂರುದಾರರು ಆರೋಪಿಸಿದ್ದರು. ದೂರುದಾರರ ಪೈಕಿ ಆರು ಮಂದಿ ಈಗಾಗಲೇ ಮೃತಪಟ್ಟಿದ್ದಾರೆ. ಅದಕ್ಕಾಗಿ ಒಟ್ಟು ಮೊತ್ತದಲ್ಲಿ 550 ಮಿಲಿಯನ್ ಡಾಲರ್ ಮೊತ್ತ ಪರಿಹಾರವಾಗಿ ಹಾಗೂ 4.41 ಬಿಲಿಯನ್ ಡಾಲರ್ ಮೊತ್ತ ದಂಡ ವಿಧಿಸಿತ್ತು. ಈಗ ಅದಕ್ಕೂ ದೊಡ್ಡ ದಂಡವನ್ನು ಈ ಕಂಪನಿಗೆ ವಿಧಿಸಿದೆ.