ಜೋಳ ತಿಂದವ ತೋಳದಾಂಗ ತಿಳಿಯಿರಿ!! ಜೋಳದ ಆರೋಗ್ಯಕರ ಗುಣಗಳು!!

0
2429

ಭಾರತದ ಜೋಳ ಬೆಳೆಯುವ ರಾಜ್ಯಗಳಲ್ಲಿ ಎರಡನೆ ಅತೀ ದೊಡ್ಡ ರಾಜ್ಯ ಕರ್ನಾಟಕ . ಜೋಳದ ಬೆಳೆ ಕರ್ನಾಟಕ ದಲ್ಲಿ ಬಹುಮುಕ್ಯವಾದ ಬೆಳೆಗಳಲ್ಲಿ ಒಂದಾಗಿದೆ. ಮಳೆ ಕಡಿಮೆ ಇರುವ ಪ್ರದೇಶಗಳಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಇದನ್ನು ಬೆಳೆಯುತ್ತಾರೆ. ಬಳ್ಳಾರಿ, ಬಾಗಲಕೋಟೆ, ಬೆಳಗಾವಿ, ಬಿಜಾಪುರ, ಗುಲ್ಬರ‍್ಗ ಮತ್ತು ರಾಯಚೂರಿನ ಹಲವು ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ.

ಅತಿ ಕಡಿಮೆ ತೇವಾಂಶವನ್ನು ಉಪಯೋಗಿಸಿ ಹೆಚ್ಚು ಕಾಳು ಬೆಳೆಯುವ ಏಕೈಕ ಧಾನ್ಯ ಜೋಳ
ಪ್ರತಿ ಸಾವಿರ ಲೀಟರ್ ನೀರಿಗೆ ೧.೫ ಕೆಜಿ ಜೋಳದ ಕಾಳು ಬೆಳೆದರೆ
ಭತ್ತ ೦.೩೭ ಕೆಜಿ ಹಾಗೂ ಗೋಧಿ ೧.೨ ಕೆಜಿ ಕಾಳುಗಳನ್ನು ನೀಡುತ್ತವೆ .

ಹಳೆಯ ಬರವಣಿಗೆಯಲ್ಲಿ ಜೋಳವನ್ನು ಹಾಡಿಹೊಗಳಿದ ಉಲ್ಲೇಖಗಳಿವೆ!!!

ರನ್ನನ ಗಧಾಯುದ್ದದಲ್ಲಿ ಕೆಳಗಿನ ಸಾಲುಗಳಿವೆ
ಬಿಸುಟರ್ ಜೋಳದ ಪಾಳಿಯಂ ಬಗೆದರಿಲ್ಲಾ ದ್ರೌಣಿಯಂ ದ್ರೋಣನುಂ

ಅನ್ನದ ಋಣವನ್ನು(ಜೋಳದ ಪಾಳಿ!) ದ್ರೋಣನೂ ದ್ರೋಣಿಯೂ ಮರೆತರು

ಮತ್ತು ಸರ್ವಜ್ಞನ ವಚನಗಳಲ್ಲಿ ನವಣೆ ,ರಾಗಿ , ಜೋಳದ ಮಹತ್ವವನ್ನು ತಿಳಿಸಲಾಗಿದೆ
ನವಣೆಯನು ತಿಂಬುವನು
ಹವಣಾಗಿ ಇರುತಿಹನು ಬವಣಿಗಳಿಗವನು ಒಳಬೀಳನೀ ಮಾತು
ಠವಣೆಲ್ಲೆಂದ ಸರ್ವಜ್ಞ|

ರಾಗಿಯನ್ನು ಉಂಬುವ ನಿರೋಗಿ ಎಂದೆನಿಸುವನು
ರಾಗಿಯು ಭೋಗಿಗಳಿಗಲ್ಲ ಬಡವರಿಂ
ಗಾಗಿ ಬೆಳೆದಿಹುದು ಸರ್ವಜ್ಞ|

ಜೋಳವನು ತಿಂಬುವನು ತೋಳದಂತಾಗುವನು
ಬೇಳೆ ಬೆಲ್ಲಗಳನುಂಬುವನುಬಹು
ಬಾಳನೆದರಿಗು ಸರ್ವಜ್ಞ|

ಜೋಳದ ಆರೋಗ್ಯಕಾರಿ ಗುಣಗಳು :

೧.ಬೊಜ್ಜಿನ ನಿಯಂತ್ರಣದಲ್ಲಿ ನೆರವಾಗುತ್ತದೆ:ಜೋಳದಲ್ಲಿ ವಿಟಮಿನ್ ಬಿ ಗಳಾದ ತಿಯಾಮಿನ್ ಮತ್ತು ರೈಬೋಪ್ಲೇನ್ ಗಳು ಇವೆ. ಜೋಳದಲ್ಲಿ ಪಯ್ಟೋ ಕೆಮಿಕಲ್ಸ್, ಟ್ಯಾನಿನ್ಸ್, ಪಿನಾಲಿಕ್ ಆಸಿಡ್ ಮತ್ತು ಆಂತೋಸಿಯಾನಿನ್ ಗಳು ಸಮ್ರುದ್ದವಾಗಿರುತ್ತವೆ. ಇದರಲ್ಲಿರುವ ಪಯ್ಟೋಕೆಮಿಕಲ್ಸ್ ಬೊಜ್ಜಿನ ನಿಯಂತ್ರಣದಲ್ಲಿ ನೆರವಾಗುತ್ತದೆ ಹಾಗೂ ಹೃದಯದ ಸಮಸ್ಯೆಗಳನ್ನು ದೂರವಿರಿಸುತ್ತದೆ .

lose-weight
೨.ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು: ವಿಟಮಿನ್ ಸಿ, carotenoids ಮತ್ತು bioflavinoids ಅಂಶವಿರುವುದರಿಂದ ಹೃದ್ರೋಗ ಸಮಸ್ಯೆ ಇರುವವರಿಗೆ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.

3108101b00000578-3439383-a_texas_a_m_health_science_center_cardiologist_reveals_six_commo-a-48_1455052977490

೩ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು:ನಿದಾನಕ್ಕೆ ಅರಗುವುದರಿಂದ ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.

blood-sugar-checking

೪. ಜೀರ್ಣಕ್ರಿಯೆ ಹೆಚ್ಚು ಮಾಡುತ್ತದೆ: ಜೋಳದಲ್ಲಿ ಅಧಿಕ ನಾರಿನಂಶವಿರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

1359824_wallpaper1

೫. ಜೋಳ ದೇಹಕ್ಕೆ ಸೇರಿದಾಗ ಅದು ಕರುಳಿನ ಕ್ಯಾನ್ಸರ್ ಕಾಯಿಲೆ ತಡೆಕಟ್ಟುವ ಸಾಮರ್ಥ್ಯ ಹೊಂದಿದೆ.

೬ . ಖನಿಜಾಂಶಗಳನ್ನು ಹೊಂದಿದೆ: ಜೋಳದಲ್ಲಿ ಅಧಿಕ ಮ್ಯಾಗ್ನಿಷಿಯಂ, ಕಬ್ಬಿಣ, ಸತು, ರಂಜಕ ಇರುವುದರಿಂದ ಮೂಳೆಗೆ ಒಳ್ಳೆಯದು. ಇದು ಮೂಳೆಯನ್ನು ಬಲಪಡಿಸುವುದು ಮಾತ್ರವಲ್ಲ, ಕಿಡ್ನಿ ಸರಿಯಾಗಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಿದೆ.

vitaminsymbols

೭ . ಯೌವನಭರಿತ ತ್ವಚೆ: ಜೋಳದಲ್ಲಿ antioxidants ಪ್ರಮಾಣ ಹೆಚ್ಚಾಗಿರುವುದರಿಂದ ತ್ವಚೆ ಬೇಗನೆ ಮುಪ್ಪಾಗದಂತೆ ಕಾಪಾಡುತ್ತದೆ. ಅಲ್ಲದೆ ಜೋಳದ ಎಣ್ಣೆಯನ್ನು ಹಚ್ಚಿಕೊಂಡರೆ ತ್ವಚೆ ಅಲರ್ಜಿ, ತ್ವಚೆಯಲ್ಲಿ ಕೆಂಪು ಗುಳ್ಳೆಗಳಾಗುವುದನ್ನು ತಡೆಯಬಹುದು.

chlorophyll_light_capture_human_animal_cells_atp_mitochondria

೮ . ರಕ್ತಹೀನತೆಯನ್ನು ತಡೆಗಟ್ಟುತ್ತದೆ: ಜೋಳದಲ್ಲಿ ವಿಟಮಿನ್ ಬಿ ಮತ್ತು ಫಾಲಿಕ್ ಆಸಿಡ್ ಅಂಶವಿರುವುದರಿಂದ ದೇಹದಲ್ಲಿ ರಕ್ತ ಹೆಚ್ಚಾಗಲು ಸಹಕಾರಿಯಾಗಿದೆ. ಇದರಿಂದ ರಕ್ತ ಹೀನತೆ ಸಮಸ್ಯೆ ಉಂಟಾಗುವುದಿಲ್ಲ.

aid1349897-728px-increase-platelets-step-3

೯ . ಗರ್ಭೀಣಿಯರ ಆರೋಗ್ಯಕ್ಕೆ: ಜೋಳ ಸೇವಿಸುವುದರಿಂದ ಫಾಲಿಕ್ ಆಸಿಡ್ ಕೊರತೆಯನ್ನು ನೀಗಿಸಬಹುದು. ಫಾಲಿಕ್ ಆಸಿಡ್ ಕೊರತೆ ಉಂಟಾದರೆ ಗರ್ಭಿಣಿಯರಲ್ಲಿ ಕೈ ಕಾಲುಗಳಲ್ಲಿ ಊತ, ಅಧಿಕ ರಕ್ತದೊತ್ತಡ ಕಂಡು ಬರುತ್ತದೆ. ಕಡಿಮೆ ಫಾಲಿಕ್ ಆಸಿಡ್ ಇದ್ದರೆ ಕಡಿಮೆ ತೂಕದ ಮಗು ಹುಟ್ಟುತ್ತದೆ. ಆದ್ದರಿಂದ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಜೋಳ ತಿನ್ನುವುದು ಒಳ್ಳೆಯದು.

1456837874478

೧೦ .ದೇಹದಲ್ಲಿ ವಾತ ಮತ್ತು ಪಿತ್ತವನ್ನು ನಿಯಂತ್ರಣದಲ್ಲಿಡುತ್ತದೆ

೧೧.ವಿಟಮಿನ್ ಹಾಗೂ ಖನಿಜಗಳ ಆಗರ : ವಿಟಮಿನ್ ಬಿ1, ಬಿ2, ಬಿ3, ಬಿ6, ಬಿ9, ಕಬ್ಬಿಣದಂಶ, ಮೆಗ್ನಿಶಿಯಂ ಮತ್ತು ಪೊಟಾಶಿಯಂ ಅಂಶವಿರುವುದರಿಂದ ದೇಹಕ್ಕೆ ಅಗತ್ಯವಾದ ಪೋಶಕಾಂಶ ದೊರೆಯುತ್ತದೆ

download