ದಯವೇ ಧರ್ಮದ ಮೂಲವಯ್ಯ , ಪಶು ಪ್ರಾಣಿಗಳಿಗು ಅನ್ನ ನೀಡುವ ಮಹಾನುಭಾವ

0
1102

birdman-feature11

ಇವರು ಜೋಸೆಫ್ ಶೇಖರ್ ,ತಮಿಳು ನಾಡು ಮೂಲದವರು ಪಕ್ಷಿ ಮಾನವ ಎಂದೇ ಪ್ರಖ್ಯಾತರು

ವೃತ್ತಿಯಲ್ಲಿ ಕ್ಯಾಮೆರಾ ರಿಪೇರಿ ಮಾಡುವವರು ಪ್ರವೃತ್ತಿಯಲ್ಲಿ ಪಕ್ಷಿ ಸಲಹೆಗಾರರು.
ಇವರು ತಮ್ಮ 40 ಶೇಕಡಾ ಕ್ಯಾಮೆರಾ ರಿಪೇರಿ ಮಾಡಿ ಬರುವ ಸಂಬಳವನ್ನು ತಮ್ಮ ಗಿಳಿ ಸಾಕುವಿಕೆಗಾಗಿ ಬಳಸುತ್ತಾರೆ.

ಕನಿಷ್ಠ 2000 ದಿಂದ ಗರಿಷ್ಠ 4000 ಪಕ್ಷಿಗಳಿಗೆ ದಿನನಿತ್ಯ ಊಟ ಉಣಿಸುವ ದೊಡ್ಡ ಮನಸ್ಸು ಇವರದ್ದು .
ಇವರ ಈ ಕಾರ್ಯ ಪ್ರೇರಣೆ ಪಡೆದದ್ದು 2004ರ ಸುನಾಮಿ ದುರಂತದ ನಂತರ ಅಂದು ತಾವು 2 ಗಿಳಿಗಳಿಂದ ಶುರು ಮಾಡಿದ ಕೆಲಸ ಇಂದು ಸಾವಿರಾರು ಪಕ್ಷಿಗಳ ಊಟದ ಆಧಾರವಾಯಿತು.

maxresdefault

ದಿನವೂ ಬೆಳಗ್ಗೆ 4.30 ಕ್ಕೆ ಎದ್ದು 60 ಕೆಜಿ ಅಕ್ಕಿಯನ್ನು, ಬೆಳೆ ಕಾಳುಗಳನ್ನು ನೆನೆಸಿ ತಮ್ಮ ಮನೆಯ ಮೇಲ್ಭಾಗದಲ್ಲಿ ತಮ್ಮ ಪ್ರೀತಿಯ ಗಿಳಿಗಳಿಗಾಗಿ ಉಣಿಸುತ್ತಾರೆ, ಗಿಳಿಗಳು ಅಷ್ಟೇ ಅಲ್ಲ ಪಾರಿವಾಳಗಳು, ಗುಬ್ಬಿ ಗಳು, ಅಳಿಲು ಗಳು ಹಾಗೂ ಇನ್ನು ಅನೇಕ ಜೀವಿಗಳು ಇವರ ಮನೆ ಅತಿಥಿಗಳು.

birdman-of-Chennai

ಇವರ ಈ ಕಾರ್ಯವು ಮಹಾ ಶರಣ ಬಸವಣ್ಣನವರ
ವಚನವೊಂದನ್ನು ನೆನಪು ಮಾಡಿತು

ದಯವಿಲ್ಲದ ಧರ್ಮವೆದೇವುದಯ್ಯಾ ?
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯೂ,
ದಯವೇ ಧರ್ಮದ ಮೂಲವಯ್ಯ,
ಕೂಡಲ ಸಂಗಯ್ಯನಂತಲ್ಲ ದೊಲ್ಲನಯ್ಯಾ.
-ಬಸವಣ್ಣ

ಅತ್ಯಂತ ಸರಳ ಹಾಗೂ ಯಾವುದೇ ಪ್ರಚಾರವನ್ನು ನಿರೀಕ್ಷಿಸದ ವ್ಯಕ್ತಿತ್ವ ಇವರದ್ದು ಇಂತವರ ಸಂತತಿ ಹೆಚ್ಚಲಿ ಎಂದು ಆಶಿಸೋಣ .