ನಮ್ಮ ಉತ್ತರ ಕರ್ನಾಟಕದ ಈ ಜವಾರಿ ಕುಟುಂಬದವರು ಜ್ವಾಳದ ರೊಟ್ಟಿ ವಿದೇಶಕ್ಕೆ ರಫ್ತ್ತುಮಾಡಿ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ.

0
1133

Kannada News | Karnataka Achiecers

ರೊಟ್ಟಿ ತಿಂದು ಜಗಜಟ್ಟಿಯಾಗು ಎಂಬ ಮಾತಿದೆ. ತಿಂದರೆ ಯಾವುದೇ ಸೈಡ್ ಎಫೆಕ್ಟ್ ಇಲ್ಲದ ಆರೋಗ್ಯಕರ ತಿನಿಸೆಂದರೆ ಅದು ಜೋಳದ ರೊಟ್ಟಿ. ಇದರೊಂದಿಗೆ ಎಣಗಾಯಿ ಪಲ್ಯ, ಗುರೆಳ್ಳು ಚಟ್ನಿ, ಹಸಿ ಎಣ್ಣೆ, ಒಂದಿಷ್ಟು ಗಟ್ಟಿ ಮೊಸರು, ಜೊತೆಗೊಂದಿಷ್ಟು ಬಾಳಕದ ಮೆಣಸಿನ ಕಾಯಿ ಇದ್ದರಂತೂ ಅದರ ಮಜವೇ ಬೇರೆ. ಅದರಲ್ಲೂ ಹುಬ್ಬಳ್ಳಿ ರೊಟ್ಟಿ ಅಂದರೆ ಜನರು ಸಾಲು ಸಾಲಾಗಿ ನಿಂತು ತಿನ್ನಲು ಬಯಸುತ್ತಾರೆ. ಇದನ್ನೇ ವ್ಯಾಪಾರ ಮಾಡಿಕೊಂಡು ಒಂದು ದಂಪತಿ ಜ್ವಾಳದ ರೊಟ್ಟಿ ವಿದೇಶಕ್ಕೆ ರಫ್ತ್ತು ಮಾಡಿ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ. ಅವರೇ ಲಿಂಗೇಗೌಡ ಪಾಟೀಲ್ ಮತ್ತು ಪುಷ್ಪಾ ಪಾಟೀಲ್.

ಲಿಂಗೇಗೌಡ ಪಾಟೀಲ್ ಮತ್ತು ಪುಷ್ಪಾ ಪಾಟೀಲ್ ಈ ಪೂರ್ವ ಫುಡ್ ಪ್ರಾಡಕ್ಟ್ಸ್ ನೋಡಿಕೊಳ್ಳುತ್ತಾರೆ. 2011ರಲ್ಲಿ ಇವರು ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಚಿಕ್ಕ ಮೆಸ್ ಆರಂಭಿಸಿದರು. 2 ರಿಂದ 3 ಮಹಿಳೆಯರು ಆಗ ದಿನಕ್ಕೆ 500-600 ರೊಟ್ಟಿ ಮಾಡುತ್ತಿದ್ದರು.

ಈಗ ರೊಟ್ಟಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಹೇಳುವ ಲಿಂಗೇಗೌಡರು, ಸದ್ಯ 35 ಮಹಿಳೆಯರು ನಿತ್ಯ 10 ರಿಂದ 12 ಸಾವಿರ ರೊಟ್ಟಿಗಳನ್ನು ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ. ಪ್ರತಿ ತಿಂಗಳು 1.5 ರಿಂದ 2 ಲಕ್ಷ ರೊಟ್ಟಿಗಳನ್ನು ಮಾರಾಟ ಮಾಡುತ್ತಾರೆ. 10 ರಿಂದ 12 ರೊಟ್ಟಿಗಳನ್ನು ಪ್ಯಾಕ್ ಮಾಡಿ ವಿದೇಶಕ್ಕೆ ಕಳಿಸಲಾಗುತ್ತದೆ. ಏಳು ಹಂತಗಳಲ್ಲಿ ಪ್ಯಾಕ್ ಮಾಡಿರುವ ರೊಟ್ಟಿಗಳು 6 ರಿಂದ 9 ತಿಂಗಳ ತನಕ ಕೆಡದೇ ಹಾಗೇ ಉಳಿಯುತ್ತವೆ. ಹೀಗೆ ತಯಾರಾದ ರೊಟ್ಟಿಗಳು ಬರೋಬ್ಬರಿ 16 ಸಾವಿರ ರೊಟ್ಟಿಯನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಲಾಗುತ್ತದೆ ಅಂತೇ. ಜೋಳದ ಜೊತೆಗೆ ಸಜ್ಜೆ ರೊಟ್ಟಿ, ರಾಗಿ ರೊಟ್ಟಿ, ಚಪಾತಿ, ಶೇಂಗಾ ಚಟ್ನಿಯನ್ನು ಮಾರಾಟ ಮಾಡಲಾಗುತ್ತಿದೆ. ಜೋಳದ ರೊಟ್ಟಿಯ ಗುಣ ಮಟ್ಟ ಕಡಿಮೆಯಾಗದಂತೆ ಪುಷ್ಪಾ ಪಾಟೀಲ್ ಉಸ್ತುವಾರಿ ನೋಡಿಕೊಳ್ಳುತ್ತಾರೆ.

ಅಷ್ಟೇ ಅಲ್ಲ, ಇವರು ಮಾಡಿದ ರೊಟ್ಟಿಗಳು ದೇಶದಲ್ಲೂ ಕೂಡ ಬೇಡಿಕೆ ಇದೆ. ಬೆಂಗಳೂರು, ಬೀದರ್, ಕಲಬುರಗಿ, ವಿಜಯಪುರ ಸೇರಿದಂತೆ ಕರ್ನಾಟಕವ ವಿವಿಧ ಜಿಲ್ಲೆಗಳು. ಗುರ್ಗಾಂವ್, ಮುಂಬೈ, ಹೈದರಾಬಾದ್, ಸೂರತ್, ಗುಜರಾತ್‌ನಲ್ಲಿಯೂ ಬೇಡಿಕೆ ಹೆಚ್ಚಿದೆ. ಬೀದರ್‌ನಲ್ಲಿರುವ ಎಸ್‌ಎಸ್ ರೆಡ್ಡಿ ಫುಡ್ ಪ್ರಾಡಕ್ಟ್ಸ್ ಹುಬ್ಬಳ್ಳಿಯಿಂದ ಪ್ರತಿ ತಿಂಗಳು ಸುಮಾರು 40 ರಿಂದ 45 ಸಾವಿರ ರೊಟ್ಟಿಯನ್ನು ಖರೀದಿ ಮಾಡುತ್ತದೆ. ಪ್ರತಿದಿನ 200 ರೊಟ್ಟಿಯನ್ನು ಅಮೆರಿಕ, ಇಂಗ್ಲೆಂಡ್‌, ಹೈದರಾಬಾದ್, ತೆಲಂಗಾಣಕ್ಕೆ ಕಳುಹಿಸಲಾಗುತ್ತದೆ

Also Read: ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್‍ ರಾವತ್‍ , ಆಯ್ಕೆ ಮಾಡಿದ ಹಿಂದಿನ ಉದ್ದೇಶವೇನು ಗೊತ್ತೆ?