“Jayanagar Traders Association” ಗೆ ಬೇಡವಾದ ಕನ್ನಡ

0
1093

ಬೆಂಗಳೂರಿನ ದಕ್ಷಿಣ ಭಾಗಕ್ಕೆ ಕೀರ್ತಿ ಕಳಶದಂತಿರುವ ನಮ್ಮ ಜಯನಗರದಲ್ಲಿ ಈ ರೀತಿಯ ಸೌಲಭ್ಯಗಳು ಇಲ್ಲ ಎಂದು ಹೇಳುವಂತಿಲ್ಲ ,ಈ ಆಧುನಿಕತೆಯಲ್ಲೂ ಎಲ್ಲೂ ತನ್ನ ಅಚ್ಚ ಕನ್ನಡತನವನ್ನು ಬಿಟ್ಟುಕೊಡದೆ ತನ್ನ ತಾಜಾ ಕನ್ನಡ ಸಂಸ್ಕೃತಿಗೆ ಹೆಸರುವಾಸಿಯಾಗಿದೆ , ಮಾಲುಗಳು , ಶಾಲಾ ಕಾಲೇಜುಗಳು , ಉತ್ತಮ ಗುಣಮಟ್ಟದ ರಸ್ತೆಗಳು ಹಾಗೂ ಮಾಧವ ರಾವ್ ಪಾರ್ಕ್ನಿಂದ ಸದಾ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ .

ಮಧ್ಯಮ ವರ್ಗದ ಜನರ ಶಾಪಿಂಗ್ ಸ್ವರ್ಗವೆನಿಸಿರುವ ಜಯನಗರದ ಮತ್ತೊಂದು ಆಕರ್ಷಣೆ ಎಂದರೆ ಜಯನಗರ ಶಾಪಿಂಗ್ ಸಂಕೀರ್ಣ ಕಡಿಮೆ ಬೆಲೆಯ ಅತ್ಯುತ್ತಮ ಗುಣಮಟ್ಟದ ವಸ್ತುಗಳಿಗಾಗಿ ಇಲ್ಲಿಗೆ ನಗರದ ನಾನಾ ಕಡೆಗಳಿಂದ ಜನರು ಆಗಮಿಸುತ್ತಾರೆ .

ಈ ಜಯನಗರದ ವ್ಯಾಪಾರಿಗಳು ಎಲ್ಲರೂ ಸೇರಿ ಒಂದು ವರ್ತಕರ ಸಂಘವನ್ನು ಸಹ ಮಾಡಿಕೊಂಡಿದ್ದಾರೆ ಅದರ ಹೆಸರು ಜಯನಗರ ಟ್ರೇಡರ್ಸ್ ಅಸೋಸಿಯೇಷನ್ ಮೊನ್ನೆ ಹಬ್ಬಕ್ಕಾಗಿ ಬಟ್ಟೆಯನ್ನು ಕೊಂಡುಕೊಳ್ಳಲು ನಮ್ಮ ಸ್ನೇಹಿತರೊಬ್ಬರು ಜಯನಗರಕ್ಕೆ ಹೋಗಿದ್ದರು . ರಸ್ತೆಯಲ್ಲೆಲ್ಲಾ ಝಗ ಮಗಿಸುವ ದೀಪಗಳ ಸಾಲು , ಅದರಲ್ಲೂ ಕೆಂಪು ಹಾಗೂ ಹಳದಿ ಬಣ್ಣದ ದೀಪಗಳು ಕಣ್ಣಿಗೆ ಹಬ್ಬವನ್ನು ಉಂಟುಮಾಡಿತ್ತು .

ಹೀಗೆ ಮುಂದೆ ಸಾಗಿದ್ದ ನಮ್ಮ ಸ್ನೇಹಿತರಿಗೆ ಯಾವುದೋ ಸ್ಪೀಕರ್ ನಿಂದ ರಸ್ತೆ ಬದಿಯಲ್ಲಿ ಹಾಡೊಂದು ಕೇಳಿಸುತ್ತಿತ್ತು , ಯಾವುದಪ್ಪಾ ಈ ಹಾಡು ಎಂದು ಮುಂದೆ ನಡೆದವರಿಗೆ ಅದೊಂದು ಹಿಂದಿ ಚಿತ್ರದ ಹಾಡೆಂದು ತಿಳಿದು ಭಾರಿ ಬೇಜಾರಾಯ್ತು . ರಾಜ್ಯೋತ್ಸವದ ಹೆಸರಲ್ಲಿ ಸಾವಿರಾರು ರೂಪಾಯಿಗಳನ್ನು ವರ್ತಕರಿಂದ ಸಂಗ್ರಹಿಸಿ ಯಾವೋದು ಹೊರ ರಾಜ್ಯದ ಭಾಷೆಯ ಹಾಡುಗಳನ್ನೂ ಹಾಕುವುದು ಎಷ್ಟು ಸಮಂಜಸ .

“jayanagar traders association” ದೀಪಾವಳಿ ಮತ್ತು ರಾಜ್ಯೋತ್ಸವ ಪ್ರಯುಕ್ತ ಬೀದಿ ಬೀದಿಯಲ್ಲೂ speakers ಹಾಕಿದ್ರು, ಆದ್ರೆ ಕೇಳಿಸುತಿದ್ದು ಮಾತ್ರ ಹಿಂದಿ ಹಾಡುಗಳು… ಸಾಮಾನ್ಯ ಕನ್ನಡಿಗ ತಂಡ ಪ್ರೆಶ್ನಿಸಿದೆವು, ಅವರಿಂದ ಬಂದ ಉತ್ತರ ನಾವು ಭಾರತೀಯರು ಮತ್ತೆ ಯಾರು ಕೂಡ ಇಲ್ಲಿ ಕನ್ನಡ ಹಾಡನ್ನು request ಮಾಡುತ್ತಿಲ್ಲ, ನಿಮಗೆ ಕನ್ನಡ ಹಾಡು ಬೇಕೆಂದರೆ ಈ ನಂಬರ್(9482220932) ಗೆ ಫೋನ್ ಮಾಡಿ request ಕಳ್ಸಿ… ನಾವು ಕೊನೆಗೂ ಕನ್ನಡ ಹಾಡನ್ನು ಮತ್ತು ಕರ್ನಾಟಕದ ಒಂದು ಭಾಷೆಯಾದ ತುಳು ಹಾಡನ್ನು ಹಾಕಿಸಿದ್ವಿ…

ಇದನ್ನು ಪ್ರಶ್ನೆ ಮಾಡಲೆಂದು ನಮ್ಮ ಸ್ನೇಹಿತರು ಮುಂದೆ ನಡೆದರೂ , ಯಾವ ಅಂಗಡಿಯವರನ್ನು ಇದರ ಬಗ್ಗೆ ಕೇಳಿದರು ಅವರು ಉತ್ತರಿಸಲು ತಯಾರಿರಲಿಲ್ಲ , ಕೊನೆಗೆ ಹಾಗೋ ಹೀಗೋ ರಸ್ತೆ ಬದಿಯ ವ್ಯಾಪಾರೀ ಒಬ್ಬರು ಹಾಡು ಹಾಕುತ್ತಿದ್ದ ಸ್ಥಳವನ್ನು ತೋರಿಸಿಬಿಟ್ಟರು ,ಅಲ್ಲಿ ಒಬ್ಬ ಜಯನಗರದ 3 ನೇ ಬ್ಲಾಕ್ ನ ಒಂದು ಮಹಡಿಯ ಮೇಲೆ ಹಾಡುಗಳನ್ನೂ ಪ್ರಸಾರ ಮಾಡುತ್ತಾ ಕುಳಿತ್ತಿದ್ದ , ಯಾಕೆ ನೀವು ಹೀಗೆ ರಾಜ್ಯೋತ್ಸವದ ನೆವಒಡ್ಡಿ ಪರಭಾಷೆ ಹಾಡುಗಳನ್ನು ಹಾಕುತ್ತೀರಾ ಎಂದಿದ್ದಕ್ಕೆ ಅವನ ಉತ್ತರ ಹೀಗಿತ್ತು , ನನ್ನ ಕುಟುಂಬ 50 ವರ್ಷಗಳಿಂದ ಬೆಂಗಳೂರಿನ ಸುಧಾಮ ನಗರದಲ್ಲಿ ನೆಲೆಸಿದೆ , ನಾನು ಮೊದಲು ಭಾರತೀಯ ಅದಕ್ಕೆ ಎಲ್ಲ ಭಾಷೆಯನ್ನು ಹಾಕುತ್ತೇನೆ ಕೇಳುವುದಕ್ಕೆ ನೀವು ಯಾರು ?

ಹಿಂದಿ ನಮ್ಮ ರಾಷ್ಟ್ರ ಭಾಷೆ 4 ಬೇರೆ ಭಾಷೆ ಹಾಡು ಒಂದು ಕನ್ನಡ ಹಾಡು , ನಮ್ಮ ಭಾಷೆ ನಾವು ಉಳಿಸ ಬೇಕು ಒಪ್ಪುತ್ತೇನೆ ಆದರೆ ಇಲ್ಲಿಗೆ ಎಲ್ಲಾ ಭಾಷೆಯ ಜನರು ಬರುತ್ತಾರೆ ಅದಕ್ಕೆ ನಾನು ಎಲ್ಲಾ ಭಾಷೆಯ ಹಾಡುಗಳು ಹಾಕುತ್ತೇನೆ , ಈಗ ಕಾವೇರಿ ಗಲಾಟೆ ಇರುವ ಕಾರಣ ತಮಿಳು ಪ್ರಸಾರ ಮಾಡುತ್ತಿಲ್ಲ ಅಷ್ಟೇ , ಇಂತಹ ಉಡಾಫೆ ಮನೋಭಾವನೆ ಇರುವ ಕಾರ್ಯಕ್ರಮಗಳು ನಮ್ಮ ಜಯನಗರದಲ್ಲೇ ನಡೆಯುತ್ತಿದ್ದು ಅಲ್ಲೇ ಸಾವಿರಾರು ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ಜಯನಗರ ಟ್ರೇಡರ್ಸ್ ಅಸೋಸಿಯೇಷನ್ ನ ಕನ್ನಡದ ಕಡೆಗಣನೆಯನ್ನು ಯಾರೊಬ್ಬರೂ ಪ್ರಶ್ನೆ ಮಾಡದೆ ಇರುವುದು ಖಂಡನೀಯ .

ಅಲ್ಲೇ ಇರುವ ವರ್ತಕರಲ್ಲಿ ಒಬ್ಬರಾದ ಕನ್ನಡ ಸಾಹಿತ್ಯ ಪರಿಷತ್ ನ ಜಯನಗರ ಘಟಕದ ಅಧ್ಯಕ್ಷರು ಏನು ಮಾಡುತ್ತಿದ್ದಾರೆ ಹೀಗೆ ಬೆಂಗಳೂರಿನಲ್ಲಿ ಪರಭಾಷೆ ಓಲೈಕೆ ಮುಂದುವರೆದರೆ ಬೆಂಗಳೂರಿನಲ್ಲಿ ಕನ್ನಡವನ್ನು ದುರ್ಬಿನ್ನು ಹಾಕಿ ಹುಡುಕಬೇಕು ,ಕನ್ನಡ ಬಳಸುವುದು ಅವಮಾನವಲ್ಲ ನಮ್ಮ ಆತ್ಮ ಗೌರವ .