ಕರ್ನಾಟಕದ ನ್ಯಾಯಾಧೀಶ ನಿಟ್ಟೂರು ಶ್ರೀವ್ಯಾಸರಾವ್ ರವರ ಆದರ್ಶಗಳ ಬಗ್ಗೆ ಕೇಳಿದ್ರೆ ಹೆಮ್ಮೆ ಪಡುತ್ತೀರಾ..!

0
1050

ದಶಕಗಳ ಹಿಂದೆ ನಮಗೆಲ್ಲ ಆದರ್ಶವಾಗಬಲ್ಲ ನ್ಯಾಯಾಧೀಶರೊಬ್ಬರಿದ್ದರು. ಅವರಲ್ಲಿ ಪ್ರಾಮಾಣಿಕತೆ, ಸಂಸ್ಕಾರ, ಸಂಸ್ಕøತಿ, ಸರಳತೆ, ನಿರಾಡಂಬರ, ಶಿಸ್ತು ಎಲ್ಲವೂ ಅಡಗಿತ್ತು. ಅವರು ಬದುಕನ್ನು ಅರ್ಥಪೂರ್ಣವಾಗಿಸಿಕೊಂಡು ಇತರರ ಜೀವನಕ್ಕೆ ಮಾದರಿ ಆಗಬಲ್ಲವರಾಗಿದ್ದರು. ಕೆಲ ದೇಶಗಳು ಆರ್ಥಿಕವಾಗಿ ಮುಂದುವರಿದಿರುವುದು ನಿಜ. ಆದರೆ, ಆ ದೇಶಗಳಲ್ಲಿ ಮೌಲ್ಯಗಳು ಹೇಗಿವೆ? ಆರ್ಥಿಕ ಮಟ್ಟ ಮುಖ್ಯವಲ್ಲ; ಮೌಲ್ಯ ಮುಖ್ಯ ಎಂದ ಬದುಕಿನ ಆದರ್ಶ ಪುರುಷ. ಅವರೇ ಗಾಂಧಿವಾದಿ ನಿಟ್ಟೂರು ಶ್ರೀನಿವಾಸರಾವ್.

ಇವರು ಸಾರ್ವಜನಿಕ ವಲಯದಲ್ಲಿ ಕಾಣಿಕೊಳ್ಳುತ್ತಿದ್ದರೂ, ಎಂದಿಗೂ ಪ್ರಚಾರ ಪ್ರಿಯರಾಗಿರಲ್ಲಿಲ್ಲ, ಪ್ರಶಸ್ತಿ, ಸನ್ಮಾನಗಳ ಹಿಂದೆ ಹೋಗಲ್ಲಿಲ್ಲ. ತನ್ನ ಜೀವನಾವಧಿಯಲ್ಲಿ ಕಾನೂನು, ಸಾಹಿತ್ಯ, ಸೇವಾ ಕ್ಷೇತ್ರದಲ್ಲಿ ತಮ್ಮನು ತೊಡಗಿಸಿಕೊಂಡಿದ್ದರು. ಇಂದಿನ ಜನರು ತಮ್ಮ ಹೆಸರು ಪ್ರಸಿದ್ಧಿಯಾಗಬೇಕು ಎಂದು ಸತ್ವವಿಲ್ಲದ ಕಥೆ, ಕವನ, ಕಾದಂಬರಿ, ವಿಮರ್ಶೆ, ಪುಸ್ತಕಗಳನ್ನು ಪ್ರಕಟಣೆ ಮಾಡುತ್ತಾರೆ. ಆದರೆ ಹಿಂದೆ ಯಾವ ವಿದ್ವಾಂಸರು ಹೆಸರು ಬಯಸಿ ಬರೆದವರಲ್ಲ.

Related image

ಗೂರೂರು, ಶಿವರಾಮ ಕಾರಂತ, ಎಂ.ಆರ್.ಶ್ರೀನಿವಾಸಮೂರ್ತಿ, ರಾಜರತ್ನಂ ಹೀಗೆ ಮುಂತಾದ ಪ್ರಸಿದ್ಧ ಲೇಖಕರ ಗ್ರಂಥಗಳನ್ನು ಸತ್ಯಶೋಧನ ಪ್ರಕಾಶನ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯ ಮಾಡಿದರು. ಶಿವರಾಮ ಕಾರಂತರ ಬಾಲ ಪ್ರಪಂಚ ಕೃತಿ ಮುದ್ರಣಕ್ಕೆ ವಿದೇಶದಿಂದ ಪ್ರಕಟಣೆಯ ಸಾಮಗ್ರಿಗಳನ್ನು ತರಿಸಿ ಪ್ರಕಟಣೆ ಮಾಡಿದ ಹೆಗ್ಗಳಿಕೆ ನಿಟ್ಟೂರು ಶ್ರೀನಿವಾಸರಾವ್ ಅವರದ್ದು.
ಇವರು ಮೂಲಃ ತುಮಕೂರು ಜಿಲ್ಲೆಯ ನಿಟ್ಟೂರು ಆಗಿದ್ದರೂ ಶಾಮಣ್ಣ ಮತ್ತು ಸೀತಮ್ಮ ಇವರ ಪುತ್ರನಾಗಿ ಬೆಂಗಳೂರಿನಲ್ಲಿ 1903ರ ಆಗಸ್ಟ್ 24ರಂದು ಜನಿಸಿದರು. ಮೈಸೂರು ವಿವಿಯಲ್ಲಿ ಬಿಎಸ್ಸಿ, ಮದ್ರಾಸ್ ವಿವಿಯಲ್ಲಿ ಕಾನೂನು ಪದವಿ ಪಡೆದರು. ವಕೀಲರಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿ, ಅಡ್ವೋಕೇಟ್ ಜನರಲ್, ಮೈಸೂರು ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದರು. ಭಾರತ ಸರ್ಕಾರದ ಕೇಂದ್ರ ವಿಚಕ್ಷಣಾ ಆಯೋಗದ ಆಯುಕ್ತರಾಗಿ ಕಾರ್ಯನಿರ್ವಹಿಸಿದ ಪ್ರಪ್ರಥಮ ವ್ಯಕ್ತಿ ಶ್ರೀನಿವಾಸರಾವ್.

Image result for Judge Nittur Srinivasa Rao

ಗಾಂಧಿ ಪ್ರೇರಣೆಯಿಂದ 18ನೇ ವಯಸ್ಸಿನಲ್ಲಿ ಸ್ವಾತಂತ್ರ್ಯ ಸಂಗ್ರಮಕ್ಕೆ ಧುಮುಕಿದರು. ಕಾಂಗ್ರೆಸ್ಸಿನ ಮೈಸೂರು ಪ್ರಾಂತ್ಯದ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡು, ಅಸಹಕಾರ ಚಳುವಳಿ ಮತ್ತು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದರು. ಧಾರವಾಡದಲ್ಲಿ ಕಾಂಗ್ರೆಸ್ ಘಟಕದ ಜವಾಬ್ದಾರಿಯನ್ನು ವಹಿಸಿಕೊಂಡು, ಕೆಲ ಸ್ವಾತಂತ್ರ್ಯ ಹೋರಾಟಗಾರರಿಗೆ ಆಶ್ರಯವನ್ನು ನೀಡಿದರು.

ಶ್ರೇಷ್ಠ ವಿದ್ವಾಂಸರು ಮತ್ತು ಸೇವಾ ಸಂಸ್ಥೆಗಳೊಡನೆ ಉತ್ತಮ ಒಡನಾಟ ಹೊಂದಿದ್ದರು, ಕಸಾಪದ ಏಳ್ಗೆಗೆ ಶ್ರಮಿಸಿದ ನಿಟ್ಟೂರು, ಬರೋಡಾದಲ್ಲಿ ನಡೆದ ಕನ್ನಡಿಗರ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಗಾಂಧಿ ಶಾಂತಿ ಪ್ರತಿಷ್ಠಾನ, ಕರ್ನಾಟಕ ಪ್ರಕೃತಿ ಚಿಕಿತ್ಸಾ ಪರಿಷತ್, ಬಿ.ಎಂ.ಶ್ರೀ ಪ್ರತಿಷ್ಠಾನ, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಅರಬಿಂದೋ ಸೊಸೈಟಿ ಮತ್ತು ಕರ್ನಾಟಕ ಏಕೀಕರಣಕ್ಕಾಗಿ ಹುಟ್ಟಿಕೊಂಡ ಸಂಸ್ಥೆಯಾದ ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷರಾಗಿ ತಮ್ಮ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿದರು.

103 ವರ್ಷಗಳ ಕಾಲ ಬದುಕಿದ್ದ ಅವರು ಜನ್ಮಶತಮಾನೋತ್ಸವ ವೇಳೆ ಅವರ ಆತ್ಮೀಯರು ಬಲವಂತದಿಂದ ಅಭಿನಂದಾನ ಸಮಾರಂಭವೊಂದನ್ನು ಏರ್ಪಡಿಸಿದರು. ನೂರು ತುಂಬಿದ್ದಕ್ಕೆ ನೀವೆಲ್ಲ ಯಾಕೆ ಸಂಭ್ರಮಿಸುತ್ತೀರೋ ಕಾಣೆ, ನನಗಂತೂ ಏನೂ ಅನ್ನಿಸುತ್ತಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.