ದಲಿತರಿಗೆ ಬಡ್ತಿಯಲ್ಲಿ ವಿಶೇಷ ಮೀಸಲಾತಿ ಬೇಡ: ಕರ್ನಾಟಕಕ್ಕೆ ಸುಪ್ರೀಂ ಸೂಚನೆ

0
677

ಸರ್ಕಾರಿ ನೌಕರರ ಬಡ್ತಿ ವಿಚಾರದಲ್ಲಿ ಎಸ್ಸಿ, ಎಸ್ಟಿಗಳಿಗೆ ವಿಶೇಷ ಮಾನ್ಯತೆ ನೀಡುವ ವಿಚಾರವಾಗಿ 1978ರಿಂದಲೂ ಚಾಲ್ತಿಯಲ್ಲಿದ್ದ ನಿಯಮಗಳು; ಈ ನಿಯಮಗಳ ವಿರುದ್ಧ ದನಿಯೆತ್ತಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಇಂಜಿನಿಯರ್ ಬಿ.ಕೆ. ಪವಿತ್ರಾ.
ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡದ ನೌಕರರಿಗೆ ಸರ್ಕಾರಿ ನೌಕಕರಿಗೆ ಬಡ್ತಿ ವಿಚಾರದಲ್ಲಿ ಕರ್ನಾಟಕ ಸರಕಾರ ಕಳೆದ 30 ವರ್ಷಗಳಿಂದ ಅನುಸರಿಸುತ್ತಿರುವ ಮೀಸಲಾತಿ ನೀತಿಯನ್ನು ಕೈಬಿಡಬೇಕೆಂದು ಕರ್ನಾಟಕ ಸರಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.

1978ರಲ್ಲಿ ಬಡ್ತಿ ವಿಚಾರವಾಗಿ ಎಸ್ಸಿ, ಎಸ್ಟಿ ನೌಕರರನ್ನು ವಿಶೇಷವಾಗಿ ಪರಿಗಣಿಸುವ (ಕಾನ್ಸೆಕ್ವೆನ್ಷಿಯಲ್ ಸೀನಿಯಾರಿಟಿ) ನೀತಿಯಿಂದ ಸಾಮಾನ್ಯ ವರ್ಗ ಹಾಗೂ ಇತರೆ ಹಿಂದುಳಿದ ವರ್ಗಗಳ ನೌಕರರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಬಿಡಿಎ ಇಂಜಿನಿಯರ್‍ ಬಿ.ಕೆ. ಪವಿತ್ರಾ 2011ರಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸೂಪ್ರೀಂಕೋರ್ಟ್‍ ಈ ತೀರ್ಪು ನೀಡಿದರು.

ಬಡ್ತಿ ವಿಚಾರದಲ್ಲಿ ಎಸ್ಸಿ, ಎಸ್ಟಿಗಳಿಗೆ ನೀಡಲಾಗುವ ವಿಶೇಷ ಮಾನ್ಯತೆಯನ್ನು ರದ್ದುಗೊಳಿಸಿ, ಇನ್ನು ಮೂರು ತಿಂಗಳಲ್ಲಿ ಜೇಷ್ಠತೆಯನ್ನು ಪರಿಗಣಿಸದೇ ಎಸ್ಸಿ, ಎಸ್ಟಿ ನೌಕರರಿಗೆ ನೀಡಲಾಗಿರುವ ಎಲ್ಲಾ ಬಡ್ತಿ ಆದೇಶಗಳನ್ನು ಹಿಂಪಡೆಯುವಂತೆ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದೆ. ಅದರ ಜತೆಯಲ್ಲೇ ಬಹುದಿನಗಳಿಂದ ಬಡ್ತಿಯ ನಿರೀಕ್ಷೆಯಲ್ಲಿರುವ ಸಾಮಾನ್ಯ ಹಾಗೂ ಹಿಂದುಳಿದ ವರ್ಗಗಳ ನೌಕರರಿಗೆ ಸಿಗಬೇಕಿರುವ ಬಡ್ತಿಯನ್ನು ನೀಡಬೇಕೆಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.
ಈಗಾಗಲೇ ಎಸ್ಸಿ, ಎಸ್ಟಿ ಕೋಟಾದಡಿಯಲ್ಲಿ ವೇಗವಾಗಿ ಬಡ್ತಿ ಹೊಂದಿ ನಿವೃತ್ತರಾದವರಿಗೆ ಹಾಗೂ ಪಿಂಚಣಿ ಮತ್ತಿತರ ಸೌಲಭ್ಯ ಪಡೆಯುತ್ತಿರುವವರಿಗೆ ಈ ಆದೇಶ ಅನ್ವಯವಾಗದು ಎಂದೂ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.