TV ಮಾಧ್ಯಮ ಮತ್ತು ಸರ್ಕಾರ ನಿರ್ಲಕ್ಷಿಸಿರುವ ವ್ಯಕ್ತಿ ರಾಜೇಶ್.. ಇವರಿಗೆ ನ್ಯಾಯ ಕೊಡಿಸಿ!!!

0
787

ನೆನ್ನೆ ನಡೆದ ಗಲಭೆಯಲ್ಲಿ ಮತೋರ್ವ ವ್ಯಕ್ತಿಯ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.

124

ವ್ಯಕ್ತಿಯ ಹೆಸರು ರಾಜೇಶ್(33) ಹೆಗ್ಗನಹಳ್ಳಿಯ ನಿವಾಸಿಯಾದ ಇವರು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು ಸಂಜೆ(7:30) ಕೆಲಸ ಮುಗಿಸಿ ಮನೆಗೆ ಹಿಂತಿರುಗುವ ವೇಳೆ ತಮ್ಮ ಮನೆಯ ಸಮೀಪ ಇರುವ ಆರ್ ಈ ಎಸ್ ಕಾಲೇಜಿನ ಬಳಿ ಈ ಘಟನೆ ಸಂಭವಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ರಾಜೇಶ್ ಅವರ ಎಡಗೈಗೆ ಗುಂಡು ತಗುಲಿ ಮೂಳೆ ಮುರಿದುಹೋಗಿದೆ ಹಾಗು ಶಸ್ತ್ರ ಚಿಕಿತ್ಸೆಗೆ ಒಳಪಡಬೇಕಾಗುತ್ತೆ ಎಂದು ವೈದ್ಯರು ಸಲಹೆ ನೀಡಿದ್ದಾರೆ, ಎಂದು ರಾಜೇಶ್ ಅವರ ಸ್ನೇಹಿತ ರಾಮು ಅವರು ನ್ಯೂಸಿಸಂಗೆ ತಿಳಿಸಿದ್ದಾರೆ.
ರಾಜೇಶ್ ರವರಿಗೆ ಓರ್ವ ಪತ್ನಿ ಹಾಗು ಇಬ್ಬರು ಹೆಣ್ಣುಮಕ್ಕಳು ಇದ್ದು ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ

123

ಯಾರೋ ಮಾಡಿದ ತಪ್ಪಿಗೆ ಒಬ್ಬ ಅಮಾಯಕ ಬಲಿಯಾಗೋದು ಎಷ್ಟು ಸರಿ?
ಇದಕ್ಕೆ ಸರಕಾರ ಪರಿಹಾರ ಕೊಟ್ಟು ಇವರ ಕಷ್ಟಕ್ಕೆ ನೆರವಾಗಲಿ ಎಂದು ಆಶಿಸುತ್ತೆವೆ.

ಸಂಪರ್ಕ ಮಾಹಿತಿ  :

ಹೆಸರು : ರಾಜೇಶ್

ವಯಸ್ಸು : 33

ಆಸ್ಪತ್ರೆ : ESI Hospital,1st floor,Ward # 16

ದೂರವಾಣಿ ಸಂಪರ್ಕ : ರಾಮು (9964880565)