ಭಾರತದ ಪ್ರಥಮ ಜ್ವಾಲಾಮುಖಿ ಸ್ಫೋಟಗೊಳ್ಳುತ್ತಿದೆ

0
573

ಭಾರತದ ಪ್ರಥಮ ಜೀವಂತ ಜ್ವಾಲಾಮುಖಿ ಹೆಸರಾಗಿರುವ ಅಂಡಮಾನ್ ಮತ್ತು ನೀಕೋಬಾರ್ ದ್ವೀಪಪ್ರದೇಶ ಸಮೀಪದ ಬರ್ರನ್ ದ್ವೀಪ ಪ್ರದೇಶದಲ್ಲಿ ಈ ಜ್ವಾಲಾಮುಖಿ ಇದೆ ಎಂದು ಗೋವಾ ಮೂಲದ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಓಸಿಯನೋಗ್ರಫಿ (ಎನ್ ಐ ಓ) ವಿಜ್ಞಾನಿಗಳು ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದೆ.

ಫ್ಲೋರ್ಟ್ಬ್ಟೇರ್: ಫ್ಲೋರ್ಟ್ಬ್ಟೇರ್ ನಿಂದ ಉತ್ತರಕ್ಕೆ 140 ಕಿ.ಮೀ. ದೂರದಲ್ಲಿ ಬರೇನ್ ಅಗ್ನಿಪರ್ವತವಿದೆ. ಗೋವಾದ ಎನ್ ಐ ಒ ಸಂಸ್ಥೆಯ ತಂಡ ಇತ್ತೀಚೆಗೆ ಬರೇನ್ ಅಗ್ನಿಪರ್ವತದ ಸಮೀಪಕ್ಕೆ ಸಂಶೋಧನೆಗೆ ತೆರಳಿತ್ತು. ಈ ವೇಳೆ ಅಗ್ನಿಪರ್ವತದಿಂದ ಜ್ವಾಲಾಮುಖಿ ಹೊರಬರುವುದು ತಿಳಿದುಬಂದಿದೆ.

ಈ ಅಗ್ನಿಪರ್ವತದಿಂದ 1787 ರಲ್ಲಿ ಮೊದಲಬಾರಿಗೆ ಜ್ವಾಲಾಮುಖಿ ಚಿಮ್ಮಿತ್ತು. ನಂತರ 1991 ರಲ್ಲಿ ಅಗ್ನಿಪರ್ವತ ಜ್ವಾಲಾಮುಖಿ ಹೊರಬಂದಿತ್ತು. ಸ್ಫೋಟಗೊಂಡ ಆರಂಭದಿಂದ ಇಲ್ಲಿಯವರೆಗೆ ಈ ಅಗ್ನಿಪರ್ವತ 11 ಬಾರಿ ಲಾವಾ ರಸ ಚಿಮ್ಮಿಸಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಎನ್ ಐ ಓ ಸಂಶೋದನಾ ತಂಡದ ಪ್ರಕಾರ, ಜನವರಿ 23ರಂದು ಜ್ವಾಲಾಮುಖಿ ಪ್ರದೇಶದಲ್ಲಿ ಸ್ವಲ್ಪ ಪ್ರಮಾಣದ ಕೆಂಪು ದ್ರವವನ್ನು ಹೊರ ಸೂಸಿದೆ, ಹಾಗಾಗಿ ಮತ್ತೆ ಜ್ವಾಲಾಮುಖಿ ಸ್ಫೋಟಗೊಳ್ಳಬಹುದು ಎಂಬ ಆತಂಕ ಸಂಶೋಧಕರದ್ದು. ಈಗಾಗಲೇ ಜ್ವಾಲಮುಖಿಯ ಬೂದಿಯನ್ನು ಆಧುನಿಕ ತಂತ್ರಜ್ಞಾನದ ಮೂಲದ ಸಂಗ್ರಹಿಸಿದ್ದು, ಅದರ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ ಎಂದು ವಿವರಿಸಿದೆ.