ಕನ್ನಡಿಗರಿಗೆ ಗರ್ವದ ವಿಷಯ: ಇನ್ಮೇಲಿಂದ ಕನ್ನಡ ಬೋರ್ಡ್ ಹಾಕದ ಅಂಗಡಿ ಮುಂಗಟ್ಟುಗಳ ಲೈಸೆನ್ಸ್ ರದ್ದು!!

0
803

ಕರ್ನಾಟಕ ರಾಜ್ಯ ಸರ್ಕಾರ ಕನ್ನಡವನ್ನು ಉಳಿಸಲು ಹಲುವಾರು ಯೋಜನೆಗಳನ್ನು ಹಮ್ಮಿಕೊಂಡಿವೆ. ಇದರ ಬೆನ್ನಲ್ಲೆ, ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಸಹ ಒಂದು ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದಾರೆ.ಅದರಂತೆ ನಗರದಲ್ಲಿ ಅಳವಡಿಸಲಾಗಿರುವ ಬೋರ್ಡ್‌ಗಳಲ್ಲಿ ಹೆಚ್ಚು ಕನ್ನಡ ಭಾಷೆಯನ್ನು ಬಳಸುವಂತೆ ಸಲಹೆ ನೀಡಿದ್ದಾರೆ.
ಇತ್ತೀಚಿಗೆ ಈ ಬಗ್ಗೆ ಮಾತನಾಡಿದ ಜಾರ್ಜ್ ಎಲ್ಲ ಕಮರ್ಸಿಯಲ್ ಕಾಂಪ್ಲೆಕ್ಸ್‌ಗಳಲ್ಲಿ ಒಂದು ತಿಂಗಳ ಕಾಲಾವಕಾಶ ನೀಡುತ್ತಿದ್ದು ಎಲ್ಲರೂ ಕನ್ನಡ ಬೋರ್ಡ್ ಬಳಸಬೇಕು ಎಂದು ಸೂಚಿಸಿದ್ದಾರೆ.


ಇನ್ನು ಈ ಆದೇಶವನ್ನು ಪಾಲಿಸದೇ ಇದ್ದಲ್ಲಿ ಬಿಬಿಎಂಪಿಗೆ ತಿಳಿಸಿ, ಅವರ ಲೈಸನ್ಸ್ ರದ್ದು ಮಾಡುವಂತೆ ತಿಳಿಸಲಾಗಿದೆ ಎಂದು ತಿಳಿಸಿದ್ರು. ಇನ್ನು ಈ ಬಗ್ಗೆ ಈಗಗಾಲೇ ಈ ಬಗ್ಗೆ ಸುತ್ತೋಲೆಯನ್ನು ಹೊರಡಿಸಿರೋದಾಗಿ ಬಿಬಿಎಂಪಿ ತಿಳಿಸಿದೆ. ಇನ್ನು ಈ ಪತ್ರದಲ್ಲಿ ಎಲ್ಲ ಕಾಂಪ್ಲೆಕ್ಸ್‌ಗಳಲ್ಲಿ ಹಾಗೂ ಮಾಲ್‌ಗಳಲ್ಲಿ ಕನ್ನಡ ಬೋರ್ಡ್ ಅಳವಡಿಸುವಂತೆ ತಿಳಿಸಲಾಗಿದೆ. ಅಲ್ಲದೆಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಇನ್ನು ಒಂದು ವೇಳೆ ವ್ಯಾಪರಿಗಳು ನಾವು ಹೊರಡಿಸಿದ ಸುತ್ತೋಲೆಯನ್ನು ಕಡಗಣಿಸಿದ್ರೆ, ಅವರ ಟ್ರೆಡ್ ಲೈಸನ್ಸ್ ರದ್ದು ಮಾಡುವುದಾಗಿ ತಿಳಿಸಿದ್ದಾರೆ.


ಹೊಸ ಕಮರ್ಸಿಯಲ್ ಕಾಂಪ್ಲೆಕ್ಸ್‌ಗಳಲ್ಲಿ ಮಾನ್ಯತೆ ನೀಡುವಾಗ ಸಹ ಈ ನಿಯಮವನ್ನು ಪಾಲಿಸುವಂತೆ ತಿಳಿಸಿ ಕೊಡಲಾಗುತ್ತದೆ ಎಂದು ಹೇಳಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದಿಟ್ಟಿರುವ ಜಾರ್ಜ್ ರಾಜ್ಯದಲ್ಲಿ ವಾಸಿಸುವ ಜನ, ಕಡ್ಡಾಯವಾಗಿ ಕನ್ನಡ ಕಲಿಯಬೇಕು. ಅಲ್ಲದೆ ಮಕ್ಕಳಿಗೆ ಈ ಬಗ್ಗೆ ತಿಳಿಸಬೇಕು ಎಂದು ತಿಳಿಸಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸಹ ತಮ್ಮ ರಾಜ್ಯತ್ಸೊವಭಾಷಣದಲ್ಲಿ ಈ ಬಗ್ಗೆ ರಾಜ್ಯವಾಸಿಗಳಿಗೆ ಪರೋಕ್ಷ ಎಚ್ಚರಿಕೆಯನ್ನು ನೀಡಿದ್ದಾರೆ. ಅಲ್ಲದೆ ರಾಜ್ಯದ ಜನ ಕನ್ನಡ ಉಳಿವಿಗಾಗಿ ಶ್ರಮಿಸಬೇಕು ಎಂದಿದ್ದರು.